ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!

Published : Mar 02, 2026, 10:04 AM IST

ಸಾಮಾನ್ಯವಾಗಿ ಮನೆಯಲ್ಲಿ ಬಳಕೆ ಮಾಡುವ ಕುಕ್ಕರ್‌, ಟೀ-ಕಾಫಿ ಮಾಡಿದ ಪಾತ್ರೆ ಕತ್ತು ಹೋಗಿದ್ಯಾ? ತಳ ಸೀದು ಹೋಗಿದ್ಯಾ? ಜಿಡ್ಡು ಹೋಗ್ತಿಲ್ವಾ? ಇದಕ್ಕೆ ಸಿಂಪಲ್‌ ವಿಧಾನ ಇದೆ. ಹಾಗಾದರೆ ಏನು? ಏನೇನು ಹಾಕಬೇಕು? ಉಜ್ಜದೆ, ತಿಕ್ಕದೆ ಹೇಗೆ ತೊಳೆಯಬಹುದು? 

PREV
13
ತಳ ಸೀದು ಹೋಗುತ್ತವೆ

ಕುಕ್ಕರ್‌ ಅಥವಾ ಕಾಫಿ, ಟೀ ಮಾಡಿದ ಪಾತ್ರೆಗಳು ಕೆಲವೊಮ್ಮೆ ಕತ್ತು ಹೋಗುತ್ತವೆ, ತಳ ಸೀದು ಹೋಗುತ್ತವೆ. ಆ ಜಿಡ್ಡು ಸಾಮಾನ್ಯವಾಗಿ ಹೋಗೋದಿಲ್ಲ, ಸ್ಕ್ರಬ್ಬರ್‌ ಬಳಕೆ ಮಾಡಿದಾಗಲೂ ಕೂಡ ಆ ಪಾತ್ರೆ ಹಾಳಾಗುವ ಸಾಧ್ಯತೆ ಹೆಚ್ಚಿದೆ.

23
ಏನೇನು ಹಾಕಬೇಕು?

ಕತ್ತು ಹೋದ ಅಥವಾ ತಳ ಸೀದ ಪಾತ್ರೆ ಅಥವಾ ಕುಕ್ಕರ್‌ಗೆ ಲಿಂಬೆಹಣ್ಣಿನ ಪೀಸ್‌, ಒಂದು ಚಮಚ ವಿನೆಗಾರ್‌, ಉಪ್ಪು, ಬೇಕಿಂಗ್‌ ಸೋಡಾ ಜೊತೆಗೆ ಡಿಶ್‌ ಲಿಕ್ವಿಡ್‌ ಹಾಕಿ ಇಡಬೇಕು ಅಥವಾ ಇದನ್ನು ಮತ್ತೆ ಒಲೆ ಮೇಲೆ ಇಟ್ಟು ಸ್ವಲ್ಪ ನೀರು ಹಾಕಿ ಕೊತ ಕೊತ ಕುದಿಯುವವರೆಗೆ ಕಾಯಿಸಬಹುದು. ಆಗ ಆ ಕಲೆಯೆಲ್ಲವೂ ಬಿಟ್ಟು ಹೋಗುವುದು.

33
ಜಾಸ್ತಿ ಉಜ್ಜಿದರೆ ಪಾತ್ರೆ ಹಾಳಾಗತ್ತೆ

ಈ ವಿಧಾನ ನಿಜಕ್ಕೂ ಸರಳವಾಗಿದೆ, ಹೀಗೆ ಮಾಡಿದರೆ ಖಂಡಿತ ಕೈ ನೋವು ಕೂಡ ಬರೋದಿಲ್ಲ. ಕೆಲವೊಮ್ಮೆ ಸ್ಕ್ರಬ್ಬರ್‌ಗಳಿಂದ ಉಜ್ಜಿ ಉಜ್ಜಿ ತೊಳೆದರೆ ಪಾತ್ರೆ ಮೇಲೆ ಗೆರೆ ಆಗುವುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories