ಅಡುಗೆಮನೆ ಗುಟ್ಟು; ಮೂರ್ನಾಲ್ಕು ವಿಷಲ್ ಕೂಗಿಸಿದ್ರೂ ತೊಗರಿಬೇಳೆ ಬೇಯುತ್ತಿಲ್ಲವೇ? ಈ ಟ್ರಿಕ್ಸ್ ಬಳಸಿ

Published : Mar 02, 2026, 11:27 AM IST

ಸಾಂಬಾರ್‌ಗೆ ಬಳಸುವ ತೊಗರಿಬೇಳೆ ಬೇಗ ಬೇಯದೇ ಅಡುಗೆ ವಿಳಂಬವಾಗುತ್ತಿದ್ದರೆ ಚಿಂತಿಸಬೇಡಿ. ಕೆಲವು ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ಕಡಿಮೆ ಸಮಯದಲ್ಲಿ ತೊಗರಿ ಬೇಳೆಯನ್ನು ಬೇಯಿಸಬಹುದು.

PREV
15
ಬೇಳೆ

ಕೆಲವೊಮ್ಮೆ ಬೇಗ ಬೇಗ ಅಡುಗೆ ಮಾಡಿ ಮುಗಿಸೋಣ ಅಂದ್ರೆ ಸಾಂಬಾರ್‌ಗೆ ಬೇರೆ ಬೇಯಲ್ಲ. ಮೂರರಿಂದ ಐದು ವಿಷಲ್ ಕೂಗಿಸಿದ್ರೂ ಬೇಳೆ ಬೇಯಲ್ಲ. ಇದರಿಂದ ಎಲ್ಲವೂ ವಿಳಂಬವಾಗುತ್ತದೆ. ತೊಗರಿಬೇಳೆ ಕಡಿಮೆ ಸಮಯದಲ್ಲಿ ಬೇಯಿಸಲು ಕೆಲವು ಟ್ರಿಕ್ಸ್‌ ಬಳಸಿ

25
ಸಲಹೆ 1

ತೊಗರಿಬೇಳೆ ಕುಕ್ಕರ್‌ಗೆ ಹಾಕಿ ಬೇಯಿಸಿಕೊಳ್ಳುವ ಮುನ್ನ ಅಂದ್ರೆ ಸುಮಾರು 30 ನಿಮಿಷಕ್ಕೂ ಮೊದಲೇ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ಹೀಗೆ ಮಾಡೋದರಿಂದ ಕುಕ್ಕರ್‌ನಲ್ಲಿ ಎರಡು ಅಥವಾ ಮೂರು ವಿಷಲ್‌ನಲ್ಲಿ ತೊಗರಿಬೇಳೆ ಕುದಿಯುತ್ತದೆ.

35
ಸಲಹೆ 2

ತೊಗರಿಬೇಳೆ ಬೇಯಿಸಿಕೊಳ್ಳಲು ತಣ್ಣೀರು ಬದಲಾಗಿ ಬಿಸಿನೀರು ಬದಲಿಸಿ. ಈ ಒಂದು ವಿಧಾನ ತೊಗರಿಬೇಳೆ ಬೇಗ ಕುದಿಯುವಂತೆ ಮಾಡುತ್ತದೆ. ಕುಕ್ಕರ್ ಇಲ್ಲದೇ ಪಾತ್ರೆಯಲ್ಲಿ ಬೇಳೆ ಬೇಯಿಸುತ್ತಿದ್ದಾಗ ನೀರು ಕಡಿಮೆಯಾದ್ರೆ ಯಾವುದೇ ಕಾರಣಕ್ಕೂ ತಣ್ಣೀರು ಬಳಸಬೇಡಿ. ಬಿಸಿನೀರು ಬೇಳೆ ಕುದಿಯುವ ವೇಗವನ್ನು ಹೆಚ್ಚಳ ಮಾಡುತ್ತದೆ.

45
ಸಲಹೆ 3

ತೊಗರಿಬೇಳೆ ಕುದಿಸುವಾಗ ಒಂದು ಟೀ ಸ್ಪೂನ್‌ನಷ್ಟು ಅಡುಗೆಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ. ನೀರು 100°C (212°F) ಸಾಮರ್ಥ್ಯದಲ್ಲಿ ಕುದಿಯುತ್ತದೆ. ನೀರಿನೊಂದಿಗೆ ಎಣ್ಣೆ ಸೇರಿಸೋದರಿಂದ ತೊಗರಿಬೇಳೆ ಎರಡರಿಂದ ಮೂರು ವಿಷಲ್‌ನಲ್ಲಿ ಬೇಯುತ್ತದೆ.

ಇದನ್ನೂ ಓದಿ: ಮೊಸರು ಅವಲಕ್ಕಿ ರುಚಿ ಡಬಲ್ ಮಾಡಲು ಅಮ್ಮ ಹೇಳಿಕೊಟ್ಟ ರಹಸ್ಯ! ಅದು ಬೇಡ, ಇದು ಇರಲಿ!

55
ಸಲಹೆ 4

ಇದ್ಯಾವ ಪ್ಲಾನ್ ವರ್ಕೌಟ್ ಆಗದಿದ್ರೆ ತೊಗರಿಬೇಳೆ ಬೇಯಿಸುವಾಗ ಚಿಟಿಕೆಯಷ್ಟು ಅರಿಶಿನದ ಪುಡಿಯನ್ನು ಹಾಕಿಕೊಳ್ಳಿ. ಕಡಿಮೆ ಸಮಯದಲ್ಲಿ ಬೇಳೆ ಬೇಯೋದರ ಜೊತೆಯಲ್ಲಿ ಅಡುಗೆಯ ರುಚಿಯನ್ನು ಸಹ ಹೆಚ್ಚಳ ಮಾಡುತ್ತದೆ. ತೊಗರಿಬೇಳೆ ಬೇಯಿಸುವಾಗ ಇದರ ಜೊತೆ ಹೆಚ್ಚು ತರಕಾರಿಗಳನ್ನು ಸೇರಿಸಿಕೊಳ್ಳಬೇಡಿ.

ಇದನ್ನೂ ಓದಿ: ಬ್ರೇಕ್‌ಫಾಸ್ಟ್‌ಗೆ ಇಡ್ಲಿ, ದೋಸೆ ತಿಂದು ಸಾಕಾಯ್ತು ಅನ್ನೋರು ಈ 8 ತಿನಿಸುಗಳನ್ನು ಟ್ರೈ ಮಾಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories