Vegetable Washing Guide: ನೀವು ತರಕಾರಿ ಕ್ಲೀನ್ ಮಾಡಲು ಶುದ್ಧ ನೀರಿನಿಂದ ಹಲವಾರು ಬಾರಿ ತೊಳೆಯುತ್ತೀರಿ ಅಲ್ಲವೇ. ಅದು ಒಳ್ಳೆಯ ಅಭ್ಯಾಸವೇ. ಆದರೆ ಕಟ್ ಮಾಡಿ ತೊಳೆಯೋದ್ರಿಂದ ಏನಾಗುತ್ತೆ ಎಂಬುದನ್ನ ಯೋಚನೆ ಮಾಡಿದ್ದೀರಾ?.
ವಿವಿಧ ತರಕಾರಿಗಳು ಗಮನಾರ್ಹ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ನೀವು ಅವುಗಳನ್ನು ಸರಿಯಾಗಿ ಕತ್ತರಿಸಿ, ಸಿಪ್ಪೆ ಸುಲಿದು, ತೊಳೆದು, ಬೇಯಿಸಿದರೆ ಮಾತ್ರ ಅವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತವೆ. ಈ ಯಾವುದೇ ಹಂತಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ತರಕಾರಿಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಹಾಗಾದ್ರೆ ತರಕಾರಿಗಳನ್ನು ಕಟ್ ಮಾಡಿದ ನಂತರ ನೀರಿನಿಂದ ತೊಳೆಯಬೇಕೇ ಅಥವಾ ಮುಂಚಿತವಾಗಿ ತೊಳೆಯುವುದು ಒಳ್ಳೆಯದೇ?. ಇಲ್ಲಿದೆ ನೋಡಿ ಉತ್ತರ.
26
ಗಮನಿಸಬೇಕಾದ ವಿಷಯ
ನೀವು ತರಕಾರಿಗಳನ್ನ ಕಟ್ ಮಾಡಿದ ನಂತ್ರ 2-4 ಬಾರಿ ನೀರಿನಿಂದ ತೊಳೆಯುತ್ತೀರಾ?. ಹಾಗಿದ್ದಲ್ಲಿ, ಈ ಅಭ್ಯಾಸವನ್ನು ಇಂದೇ ಬದಲಾಯಿಸಿಕೊಳ್ಳಲೇಬೇಕು. ಏಕೆಂದರೆ ಕತ್ತರಿಸಿದ ತಕ್ಷಣ ತರಕಾರಿಗಳನ್ನು ತೊಳೆಯಬಾರದು. ಕತ್ತರಿಸಿದ ನಂತರ ತರಕಾರಿಗಳನ್ನು ತೊಳೆಯುವುದರಿಂದ ಅವುಗಳ ಅಗತ್ಯ ಪೋಷಕಾಂಶಗಳು ನಾಶವಾಗಬಹುದು. ಆದ್ದರಿಂದ ತರಕಾರಿಗಳನ್ನು ಕಟ್ ಮಾಡೋ ಮೊದಲೇ ನೀರಿನಿಂದ ಚೆನ್ನಾಗಿ ತೊಳೆಯಬೇಕು.
36
FDA ಮಾರ್ಗಸೂಚಿ
ಆಹಾರ ಮತ್ತು ಔಷಧ ಆಡಳಿತ (Food and Drug Administration)ದ ಪ್ರಕಾರ, ನೀವು ತರಕಾರಿಗಳನ್ನು ಖರೀದಿಸಿದ ಮೇಲೆ ಮೊದಲು ನಿಮ್ಮ ಕೈಗಳನ್ನು ಬೆಚ್ಚಗಿನ ನೀರು ಮತ್ತು ಸೋಪಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಬೇಕು. ನಂತರ, ನೀವು ತರಕಾರಿಗಳನ್ನು ಸ್ಕ್ರಬ್ ಮಾಡಿ ಹರಿಯುವ ನೀರಿನ ಅಡಿಯಲ್ಲಿ ತೊಳೆಯಬಹುದು. ತರಕಾರಿಗಳ ಹೊರ ಪದರವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ತರಕಾರಿಗಳನ್ನು ಸಿಪ್ಪೆ ತೆಗೆಯುವ ಮೊದಲು ಕನಿಷ್ಠ ಎರಡು ಬಾರಿ ತೊಳೆಯಬೇಕು.