ಸ್ಟೀಲ್ ಬಾಟಲಿ ಎಷ್ಟೇ ತೊಳೆದ್ರೂ ಇನ್ನೂ ವಾಸನೆ ಬರುತ್ತಿದೆಯೇ?, ಪಲಾವ್ ಎಲೆಯನ್ನ ಹೀಗೆ ಬಳಸಿ ನೋಡಿ

Published : Sep 13, 2025, 02:58 PM IST

Viral Cleaning Hack: ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಬಾಟಲಿಯಿಂದ ವಾಸನೆಯನ್ನು ತೊಡೆದುಹಾಕಲು ಒಂದೊಳ್ಳೆ ಐಡಿಯಾ ಹೇಳಿ ಕೊಟ್ಟಿದ್ದಾರೆ. ಒಮ್ಮೆ ನೀವ್ಯಾಕೆ ಟ್ರೈ ಮಾಡಬಾರ್ದು. 

PREV
16
ಕೆಟ್ಟ ವಾಸನೆ ಬರ್ತವೆ

ಸಾಮಾನ್ಯವಾಗಿ ನೀರಿನ ಬಾಟಲಿಗಳು ಸ್ವಲ್ಪ ಸಮಯದ ನಂತರ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ. ಬಾಟಲಿಯು ಪ್ಲಾಸ್ಟಿಕ್ ಅಥವಾ ಥರ್ಮೋಪ್ಲಾಸ್ಟಿಕ್ ಅಥವಾ ಸ್ಟೀಲ್ ಯಾವುದಾದರೂ ಸರಿ ನೀರು ಕುಡಿಯುವಾಗ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ.

26
ತೊಳೆದ ನಂತರವೂ ಬರುತ್ತಿದ್ದರೆ

ಅದರಲ್ಲೂ ಹಾಲು ಅಥವಾ ಟೀ-ಕಾಫಿಯನ್ನ ಹಾಕಿಡುವ ಬಾಟಲಿಗಳು ಇನ್ನಷ್ಟು ದುರ್ವಾಸನೆ ಬೀರಲು ಪ್ರಾರಂಭಿಸುತ್ತವೆ. ಅಲ್ಲದೆ, ಜನರು ಜಿಮ್‌ಗೆ ತೆಗೆದುಕೊಂಡು ಹೋಗುವ ಸಿಪ್ಪರ್‌ಗಳು ತೊಳೆದ ನಂತರವೂ ವಿಚಿತ್ರವಾದ ವಾಸನೆಯನ್ನು ಬೀರಲು ಪ್ರಾರಂಭಿಸುತ್ತವೆ.

36
ವಿಡಿಯೋ ವೈರಲ್

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಬಾಟಲಿಯಿಂದ ವಾಸನೆಯನ್ನು ತೊಡೆದುಹಾಕಲು ಒಂದೊಳ್ಳೆ ಐಡಿಯಾ ಹೇಳಿ ಕೊಟ್ಟಿದ್ದಾರೆ. ಇದರಲ್ಲಿ ಮಹಿಳೆ ಪಲಾವ್‌ ಎಲೆಯನ್ನು ಸುಟ್ಟು ಸ್ಟೀಲ್ ಬಾಟಲಿಯಲ್ಲಿ ಹಾಕಿ ಮುಚ್ಚಳದಿಂದ ಮುಚ್ಚುತ್ತಾರೆ.

46
ಸ್ವಚ್ಛವಾಗಿ ಕಾಣುತ್ತೆ

ಕೆಲವು ನಿಮಿಷಗಳ ನಂತರ ಮುಚ್ಚಳವನ್ನು ತೆರೆದು ನೀರಿನಿಂದ ತೊಳೆಯುತ್ತಾರೆ. ನಂತರ ಬಾಟಲಿಯು ಒಳಗಿನಿಂದ ಹೊಳೆಯುವುದಲ್ಲದೆ, ಸ್ವಚ್ಛವಾಗಿ ಕಾಣುತ್ತದೆ. ಆದರೆ ನೆನಪಿಡಿ ಈ ಐಡಿಯಾ ಪ್ಲಾಸ್ಟಿಕ್ ಬಾಟಲಿಗಳಿಗೆ ಅಪ್ಲೈ ಆಗಲ್ಲ. ನೀವು ಈ ಹ್ಯಾಕ್ ಅನ್ನು ಸ್ಟೀಲ್ ಬಾಟಲಿಗಳ ಮೇಲೆ ಮಾತ್ರ ಪ್ರಯತ್ನಿಸಬಹುದು.

56
ಪಲಾವ್ ಎಲೆ

ಈ ಹ್ಯಾಕ್‌ನಿಂದ ಬಾಟಲಿಯಲ್ಲಿರುವ ಎಲ್ಲಾ ಕೊಳೆಯೂ ಯಾವುದೇ ಶ್ರಮವಿಲ್ಲದೆ ಸ್ವಚ್ಛವಾಗುತ್ತದೆ. ವಾಸನೆಯೂ ಸಹ ಕಣ್ಮರೆಯಾಗುತ್ತದೆ. ನೀವು ಮಾಡಬೇಕಾಗಿರುವುದಿಷ್ಟು.. ಮೊದಲಿಗೆ ಗ್ಯಾಸ್ ಮೇಲೆ ಪಲಾವ್ ಎಲೆಯನ್ನು ಸುಟ್ಟು, ಬಾಟಲಿಯಲ್ಲಿ ಹಾಕಿ ಮುಚ್ಚಿ. ಕೆಲವು ನಿಮಿಷಗಳ ನಂತರ, ಬಾಟಲಿಯ ಮುಚ್ಚಳವನ್ನು ತೆರೆಯಿರಿ. ಹೊಗೆ ಹೋದ ನಂತರ ಅದನ್ನು ಶುದ್ಧ ನೀರು ಅಥವಾ ಡಿಟರ್ಜೆಂಟ್‌ನಿಂದ ತೊಳೆದು ಒಣಗಿಸಿ ಬಳಸಿ.

66
ಪ್ಲಾಸ್ಟಿಕ್‌ ಬಾಟಲಿ ಉಪಯೋಗಿಸ್ಬೇಡಿ

ಈ ವೈರಲ್ ಹ್ಯಾಕ್ ಅನ್ನು @pari.gound.31 ಹೆಸರಿನ Instagram ಪೇಜ್‌ನಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ವಿಡಿಯೋ 2 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇದನ್ನು ಇಷ್ಟಪಟ್ಟಿದ್ದಾರೆ. ಜನರು ವಿಡಿಯೋದ ಬಗ್ಗೆ ಸಾಕಷ್ಟು ಕಾಮೆಂಟ್ಸ್ ಮಾಡಿದ್ದು, 'ವಾವ್! ಇದು ನಿಜಕ್ಕೂ ಅದ್ಭುತ ಹ್ಯಾಕ್', ಆದರೆ 'ಪ್ಲಾಸ್ಟಿಕ್ ಬಾಟಲಿಗಳಲ್ಲಿ ಈ ಹ್ಯಾಕ್ ಮಾಡಬೇಡಿ' ಎಂದು ಹೇಳಿದ್ದಾರೆ.

Read more Photos on
click me!

Recommended Stories