ನಿಮ್ಮ ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸುವುದು ಇನ್ನು ಮುಂದೆ ಕಷ್ಟದ ಕೆಲಸವಲ್ಲ. ಈ ಮೂರು ಸುಲಭ ಅಡುಗೆ ತಂತ್ರಗಳನ್ನು ಅನುಸರಿಸುವ ಮೂಲಕ ದೀರ್ಘಕಾಲದವರೆಗೆ ಹೊಸದಾಗಿ ಕಾಣುವಂತೆ ಮಾಡಬಹುದು. ಮುಂದಿನ ಬಾರಿ ನೀವು ಅದನ್ನು ಸ್ವಚ್ಛಗೊಳಿಸಬೇಕಾ? ಎಂದು ರಾಗ ತೆಗೆಯುವ ಮುನ್ನ ಈ ವಿಧಾನಗಳನ್ನು ಪ್ರಯತ್ನಿಸಿ.
ಈಗಂತೂ ಬ್ಲೆಂಡರ್ಸ್ ಅಥವಾ ಮಿಕ್ಸರ್‌ಗಳಿಲ್ಲದೆ ಅಡುಗೆಮನೆಯಲ್ಲಿ ಅಡುಗೆ ರೆಡಿಯಾಗುವುದಿಲ್ಲ ಬಿಡಿ. ಸ್ಮೂಥಿ, ಮಸಾಲೆ, ಜ್ಯೂಸ್, ಶೇಕ್..ಹೀಗೆ ಏನೇ ಮಾಡಲಿ ಇವುಗಳು ಬೇಕೆ ಬೇಕು. ಇಷ್ಟೆಲ್ಲಾ ಉಪಯೋಗವಿರುವ ಇವುಗಳನ್ನು ಕ್ಲೀನ್ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಒಂದು ವೇಳೆ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲಿಲ್ಲ ಅಂತಿಟ್ಟುಕೊಳ್ಳಿ. ವಾಸನೆ ಮತ್ತು ಕಲೆ ಎರಡೂ ಉಂಟಾಗುತ್ತದೆ. ಆದ್ದರಿಂದ ಇವುಗಳನ್ನು ಕ್ಲೀನ್ ಮಾಡುವುದಕ್ಕೆ ಮೂರು ಸುಲಭವಾದ ಕಿಚನ್ ಟಿಪ್ಸ್ ನೋಡೋಣ ಬನ್ನಿ…
25
1.ಯಾವುದೇ ಕೊಳಕಿದ್ದರೆ ನಿಂಬೆಹಣ್ಣು ಬೆಸ್ಟ್
ಬ್ಲೆಂಡರ್ ಸ್ವಚ್ಛಗೊಳಿಸಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬಿಸಿನೀರು ಮತ್ತು ನಿಂಬೆಹಣ್ಣು. ಬ್ಲೆಂಡರ್ ಜಾರ್‌ಗೆ ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಕೆಲವು ಹನಿ ಡಿಶ್ ಲಿಕ್ವಿಡ್ ಸೇರಿಸಿ. ಜೊತೆಗೆ ಅರ್ಧ ನಿಂಬೆಹಣ್ಣಿನಿಂದ ರಸವನ್ನೂ ಹಿಂಡಿ. ಈಗ ಬ್ಲೆಂಡರ್ ಅನ್ನು 1 ನಿಮಿಷ ರನ್ ಮಾಡಿ. ಇದು ಯಾವುದೇ ಕೊಳಕಿದ್ದರೆ ಮತ್ತು ಗ್ರೀಸ್ ಇದ್ದರೆ ಬಹಳ ಬೇಗ ತೆಗೆದುಹಾಕುತ್ತದೆ. ಈಗ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
35
2.ಮೊಂಡುತನದ ಕಲೆಗೆ ಅಡುಗೆ ಸೋಡಾ
ನಿಮ್ಮ ಬ್ಲೆಂಡರ್‌ನಲ್ಲಿ ಅರಿಶಿನ ಅಥವಾ ಮಸಾಲೆ ಕಲೆಗಳು ಸಂಗ್ರಹವಾಗಿದ್ದರೆ ಅಡುಗೆ ಸೋಡಾ ತುಂಬಾ ಉಪಯುಕ್ತವಾಗಿದೆ. ಬ್ಲೆಂಡರ್ ಜಾರ್‌ಗೆ ಒಂದು ಚಮಚ ಅಡುಗೆ ಸೋಡಾ ಸೇರಿಸಿ, ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ. ಅದನ್ನು ಹಾಗೇ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ಲೆಂಡರ್ ಅನ್ನು ನಿಧಾನವಾಗಿ ರನ್ ಮಾಡಿ. ನಂತರ ಬ್ರಷ್‌ನಿಂದ ಸ್ವಚ್ಛಗೊಳಿಸಿ. ಇದು ಕಲೆಗಳು ಮತ್ತು ವಾಸನೆ ಎರಡನ್ನೂ ತೆಗೆದುಹಾಕುತ್ತದೆ.
ಹೆಚ್ಚಾಗಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಸಾಲೆಗಳನ್ನು ಬ್ಲೆಂಡರ್‌ನಲ್ಲಿ ರುಬ್ಬಿದ ನಂತರ ಸಿಕ್ಕಾಪಟ್ಟೆ ವಾಸನೆ ಬರುತ್ತದೆ. ಈ ಸಮಸ್ಯೆಗೆ ವಿನೆಗರ್ ಉತ್ತಮ ಪರಿಹಾರವಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ..ಒಂದು ಕಪ್ ನೀರು ಮತ್ತು ಎರಡು ಚಮಚ ಬಿಳಿ ವಿನೆಗರ್ ಅನ್ನು ಒಂದು ಜಾರ್‌ಗೆ ಸೇರಿಸಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ಲೆಂಡರ್ ಅನ್ನು ರನ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಇದು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.
55
ಈ ವಿಧಾನ ಟ್ರೈ ಮಾಡಿ
ನಿಮ್ಮ ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸುವುದು ಇನ್ನು ಮುಂದೆ ಕಷ್ಟದ ಕೆಲಸವಲ್ಲ. ಈ ಮೂರು ಸುಲಭ ಅಡುಗೆ ತಂತ್ರಗಳನ್ನು ಅನುಸರಿಸುವ ಮೂಲಕ ದೀರ್ಘಕಾಲದವರೆಗೆ ಹೊಸದಾಗಿ ಕಾಣುವಂತೆ ಮಾಡಬಹುದು. ಮುಂದಿನ ಬಾರಿ ನೀವು ಅದನ್ನು ಸ್ವಚ್ಛಗೊಳಿಸಬೇಕಾ? ಎಂದು ರಾಗ ತೆಗೆಯುವ ಮುನ್ನ ಈ ವಿಧಾನಗಳನ್ನು ಪ್ರಯತ್ನಿಸಿ ಮತ್ತು ಹೊಳೆಯುವ ಬ್ಲೆಂಡರ್ ಅನ್ನು ಪಡೆಯಿರಿ.