ಫ್ಲಾಸ್ಕ್‌ನಿಂದ ಕೆಟ್ಟ ವಾಸನೆ ಬರುತ್ತಿದ್ರೆ, ಕೊಳೆಯಾಗಿದ್ರೆ ಕೆಲವೇ ನಿಮಿಷದಲ್ಲಿ ತೆಗೆದುಹಾಕಲು ಈ ಟಿಪ್ಸ್ ಫಾಲೋ ಮಾಡಿ

Published : Dec 18, 2025, 11:37 AM IST

Bad smell in flask: ಕೆಲವೊಮ್ಮೆ ಟೀ ಅಥವಾ ಕಾಫಿ ಫ್ಲಾಸ್ಕ್‌ನಿಂದ ಅದೆಷ್ಟು ವಾಸನೆ ಬರುತ್ತದೆಯೆಂದರೆ ನೀವು ಅದನ್ನು ಎಷ್ಟೇ ಸ್ವಚ್ಛಗೊಳಿಸಿದರೂ ವಾಸನೆ ಹಾಗೆಯೇ ಇರುತ್ತದೆ. ಆದ್ದರಿಂದ ಫ್ಲಾಸ್ಕ್‌ನಿಂದ ಕೆಲವೇ ನಿಮಿಷದಲ್ಲಿ ವಾಸನೆ ತೆಗೆದುಹಾಕಲು ಇಲ್ಲಿ ಟಿಪ್ಸ್‌ ಕೊಡಲಾಗಿದೆ ನೋಡಿ.. 

PREV
15
ಪ್ರತಿದಿನ ಡೀಪ್‌ ಕ್ಲೀನ್ ಮಾಡಕ್ಕೆ ಆಗಲ್ಲ

ಬೆಳಗ್ಗೆ ಒಂದು ಕಪ್‌ ಟೀ ಇಲ್ಲ ಅಂದ್ರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವ ನಮ್ಮ ಜನರು ಇನ್ನು ಚಳಿಗಾಲದಲ್ಲಿ ಸುಮ್ಮನಿರುತ್ತಾರೆಯೇ?. ಥಂಡಿ ತಾಳಲಾರದೆ ಪದೇ ಪದೇ ಟೀ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಪದೇ ಪದೇ ಟೀ ಅಥವಾ ಕಾಫಿ ಬಿಸಿ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಅದನ್ನು ಫ್ಲಾಸ್ಕ್ ಅಥವಾ ಕೆಟಲ್‌ನಲ್ಲಿ ಹಾಕಿಡುತ್ತವೆ. ಇದರಲ್ಲಿ ಟೀ ಬಿಸಿಯಾಗಿರುತ್ತದೆ ಮತ್ತು ನಾವು ಬಯಸಿದಾಗಲೆಲ್ಲಾ ಅದನ್ನು ಕುಡಿಯಬಹುದು. ಅಂದಹಾಗೆ ಫ್ಲಾಸ್ಕ್ ಅನ್ನು ಪ್ರತಿದಿನ ಡೀಪ್‌ ಕ್ಲೀನ್ ಮಾಡುವುದಕ್ಕೆ ಆಗುವುದಿಲ್ಲ. 

25
ಈ ಟಿಪ್ಸ್‌ ಫಾಲೋ ಮಾಡಿ

ಇನ್ನು ಫ್ಲಾಸ್ಕ್‌ನಲ್ಲಿ ಯಾವಾಗಲೂ ಚಹಾ ಅಥವಾ ಟೀ ತುಂಬಿಸಿಡುವುದರಿಂದ ಅದು ವಾಸನೆ ಬರಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಇದರಿಂದ ಹೇಗೆ ವಾಸನೆ ಬರುತ್ತದೆ ಅಂದರೆ ಎಷ್ಟೇ ಸ್ವಚ್ಛಗೊಳಿಸಿದರೂ ಹೋಗುವುದಿಲ್ಲ. ಆದ್ದರಿಂದ ಈ ಲೇಖನದಲ್ಲಿ ನಿಮ್ಮ ಫ್ಲಾಸ್ಕ್‌ನಿಂದ ವಾಸನೆ ತೆಗೆದುಹಾಕಲು ಕೆಲವು ಟಿಪ್ಸ್‌ ಶೇರ್ ಮಾಡುತ್ತಿದ್ದೇವೆ. ಈ ಟಿಪ್ಸ್‌ ಫಾಲೋ ಮಾಡುವುದರಿಂದ ಕೆಲವೇ ನಿಮಿಷದಲ್ಲಿ ವಾಸನೆಯನ್ನು ತೆಗೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

35
ಅಕ್ಕಿ ನೀರು ಮತ್ತು ನಿಂಬೆಹಣ್ಣು

ಫ್ಲಾಸ್ಕ್‌ನಿಂದ ವಾಸನೆ ತೆಗೆಯಲು ಅಕ್ಕಿಯನ್ನು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ನೀರನ್ನು ಬಸಿದು, ಈ ನೀರಿನಲ್ಲಿ ಅರ್ಧ ನಿಂಬೆಹಣ್ಣನ್ನು ಹಿಂಡಿ. ಈ ದ್ರಾವಣವನ್ನು ಟೀ ಫ್ಲಾಸ್ಕ್‌ಗೆ ಸುರಿಯಿರಿ ಮತ್ತು ಮುಚ್ಚಳವನ್ನು ಹಾಕಿ. ದ್ರಾವಣವನ್ನು ಅಲ್ಲಾಡಿಸಿ ಸುಮಾರು ಒಂದು ಗಂಟೆ ಹಾಗೆಯೇ ಬಿಡಿ. 30 ನಿಮಿಷಗಳ ನಂತರ ಬಾಟಲ್ ಬ್ರಷ್ ನಿಂದ ಫ್ಲಾಸ್ಕ್ ಸ್ವಚ್ಛಗೊಳಿಸಿ. ನಂತರ ನೀರಿನಿಂದ ತೊಳೆಯಿರಿ. ಇದರಿಂದಾಗಿ ಖಂಡಿತ ವಾಸನೆ ಮಾಯವಾಗುತ್ತದೆ.

45
ಕಾಫಿ ಪುಡಿ ಅಥವಾ ಬೀನ್ಸ್

ನಿಮ್ಮ ಫ್ಲಾಸ್ಕ್ ನಿಂದ ವಾಸನೆಯನ್ನು ತೆಗೆದುಹಾಕಲು ನೀವು ಕಾಫಿ ಪುಡಿ ಅಥವಾ ಬೀನ್ಸ್ ಅನ್ನು ನೀರಿನಲ್ಲಿ ಕುದಿಸಿ. ಮೊದಲಿಗೆ ಕಾಫಿ ಬೀಜಗಳು ಅಥವಾ ಪುಡಿಯನ್ನು ನೀರಿಗೆ ಸೇರಿಸಿ ಕುದಿಸಿ. ಈಗ ಅದನ್ನು ಟೀಪಾಟ್‌ಗೆ ಸುರಿಯಿರಿ. ಕಾಫಿ ಯಾವುದೇ ಬಲವಾದ ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸುಮಾರು 30 ನಿಮಿಷಗಳ ನಂತರ ಕಾಫಿ ನೀರಿಗೆ ಪಾತ್ರೆ ತೊಳೆಯುವ ಲಿಕ್ವಿಡ್ ಸೇರಿಸಿ ಅಲ್ಲಾಡಿಸಿ. ನಂತರ, ಸಾಮಾನ್ಯ ನೀರಿನಿಂದ ಕೆಟಲ್ ತೊಳೆಯಿರಿ.

55
ಶುಂಠಿ ನೀರು

ನಿಮ್ಮ ಟೀ ಅಥವಾ ಕಾಫಿ ಫ್ಲಾಸ್ಕ್ ನಲ್ಲಿ ವಾಸನೆ ಹಾಗೆಯೇ ಮುಂದುವರಿದರೆ ಶುಂಠಿಯನ್ನು ಪುಡಿಮಾಡಿ ನೀರಿನಲ್ಲಿ ಚೆನ್ನಾಗಿ ಕುದಿಸಿ. ಈ ನೀರನ್ನು ಫ್ಲಾಸ್ಕ್ ನಲ್ಲಿ ಸಂಗ್ರಹಿಸಿ. ನಂತರ ನೀವು ಪಾತ್ರೆ ತೊಳೆಯುವ ಲಿಕ್ವಿಡ್ ಬಳಸಿ ಕೆಟಲ್ ಅನ್ನು ಸ್ವಚ್ಛಗೊಳಿಸಬಹುದು. ಶುಂಠಿ ನೀರು ಕೆಟಲ್‌ನಿಂದ ವಾಸನೆ ಮತ್ತು ಕೊಳೆ ಎರಡನ್ನೂ ತೆಗೆದುಹಾಕುತ್ತದೆ.

Read more Photos on
click me!

Recommended Stories