ದೋಸೆಯ ಹಿಟ್ಟು ಪ್ಯಾನ್‌ಗೆ ಅಂಟಿಕೊಂಡರೆ ಈ ಟೆಕ್ನಿಕ್ ಟ್ರೈ ಮಾಡಿ, ಗರಿಗರಿಯಾಗಿ ಬರುತ್ತೆ

Published : Dec 15, 2025, 01:19 PM IST

How to make dosa without sticking:  ಅದೆಷ್ಟೋ ಬಾರಿ  ದೋಸೆ ಹಿಟ್ಟು  ಪ್ಯಾನ್‌ ಅಥವಾ ತವಾಗೆ ಅಂಟಿಕೊಳ್ಳುತ್ತೆ. ಈ ಸಮಸ್ಯೆಯನ್ನ ಸಾಮಾನ್ಯವಾಗಿ  ಎಲ್ಲರೂ ಎದುರಿಸಿರುತ್ತಾರೆ. ಆದರೆ ಕೆಲವು ಟೆಕ್ನಿಕ್ಸ್‌ ತಿಳಿದುಕೊಂಡರೆ  ಇವೆಲ್ಲಾ ಸಮಸ್ಯೆಯೇ ಅಲ್ಲ ಅಂತಾರೆ ತಿಳಿದವರು.   

PREV
15
ಕಷ್ಟ ಅಂದುಕೊಳ್ತಾರೆ

ಸಾಮಾನ್ಯವಾಗಿ ದೋಸೆ ಮಾಡುವಾಗ ಹಿಟ್ಟನ್ನು ಪ್ಯಾನ್ ಅಥವಾ ಹಂಚಿನ ಮೇಲೆ ಹಾಕಿದಾಗ ಅದು ಚೆನ್ನಾಗಿ ಅಂಟಿಕೊಳ್ಳುವುದಿಲ್ಲ. ಆಗ ಈ ತಿಂಡಿ ಮಾಡುವುದೇ ತುಂಬಾ ಕಷ್ಟವೆಂದು ಕೆಲವರು ಹಿಂದೆ ಸರಿಯುತ್ತಾರೆ. ಇನ್ಮೇಲೆ ಹಾಗೆ ಮಾಡಬೇಡಿ.

25
ಈ ಟೆಕ್ನಿಕ್ಸ್‌ ಟ್ರೈ ಮಾಡಿ

ನೀವು ಮುಂದಿನ ಬಾರಿ ಪ್ಯಾನ್ ಮೇಲೆ ದೋಸೆ ಹಾಕುವಾಗ ಈ ಕೆಲವು ಟ್ರಿಕ್ಸ್‌ ಅನುಸರಿಸಿ. ಈ ಟೆಕ್ನಿಕ್ಸ್‌ ಹಿಟ್ಟು ಪ್ಯಾನ್‌ಗೆ ಅಂಟಿಕೊಳ್ಳದಂತೆ ತಡೆಯಲು ಸಹಾಯ ಮಾಡುತ್ತದೆ.

35
ಹಸಿ ಈರುಳ್ಳಿ

ಹಸಿ ಈರುಳ್ಳಿ ಹಿಟ್ಟು ಪ್ಯಾನ್‌ಗೆ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮೊದಲು ಹಸಿ ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ. ಈರುಳ್ಳಿಯನ್ನು ಎಣ್ಣೆಯಲ್ಲಿ ಅದ್ದಿ ನಂತರ ಬಿಸಿ ಪ್ಯಾನ್ ಮೇಲೆ ಉಜ್ಜಿ. ಈ ತಂತ್ರವನ್ನು ಅನುಸರಿಸುವುದರಿಂದ ಪ್ಯಾನ್ ಮೇಲೆ ನಾನ್-ಸ್ಟಿಕ್ ಪದರವು ರೂಪುಗೊಳ್ಳುತ್ತದೆ. ಅಂದರೆ ನೀವು ಹಿಟ್ಟನ್ನು ಪ್ಯಾನ್‌ಗೆ ಸುರಿದಾಗ ಅದು ಅಂಟಿಕೊಳ್ಳುವುದಿಲ್ಲ. ಇದರಿಂದ ನಿಮಗೆ ದೋಸೆ ತಯಾರಿಸಲು ಸುಲಭವಾಗುತ್ತದೆ.

45
ಹಿಟ್ಟಿನ ಸ್ಥಿರತೆ

ದೋಸೆ ಹಿಟ್ಟು ಪ್ಯಾನ್‌ಗೆ ಅಂಟಿಕೊಳ್ಳುತ್ತಿದ್ದರೆ ನೀವು ಹಿಟ್ಟಿನ ಸ್ಥಿರತೆಗೆ ಗಮನ ಕೊಡಬೇಕು. ಅಂದರೆ ಹಿಟ್ಟು ತುಂಬಾ ದಪ್ಪಗಿದ್ದರೆ ಅಥವಾ ತುಂಬಾ ತೆಳುವಾಗಿದ್ದರೆ ಪ್ಯಾನ್‌ಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಪ್ಯಾನ್ ಮೇಲೆ ಸುಲಭವಾಗಿ ಹರಡುವ ಹಿಟ್ಟನ್ನ ತಯಾರಿಸಬೇಕು. ಆದ್ದರಿಂದ ಹಿಟ್ಟು ತುಂಬಾ ದಪ್ಪಗಿರಬಾರದು ಅಥವಾ ತುಂಬಾ ತೆಳುಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.

55
ಗಮನಿಸಬೇಕಾದ ಅಂಶ

ಹಿಟ್ಟು ಸುರಿಯುವ ಮೊದಲು, ನೀವು ಪ್ಯಾನ್ ಅನ್ನು ಚೆನ್ನಾಗಿ ಬಿಸಿ ಮಾಡಬೇಕು. ಪ್ಯಾನ್ ತಣ್ಣಗಾಗಿದ್ದರೆ ಹಿಟ್ಟು ಖಂಡಿತವಾಗಿಯೂ ಅಂಟಿಕೊಳ್ಳುತ್ತದೆ. ನೀವು ದೋಸೆ ಹಿಟ್ಟು ಪ್ಯಾನ್‌ಗೆ ಅಂಟಿಕೊಳ್ಳಬಾರದು ಎಂದು ಬಯಸಿದರೆ ದೋಸೆ ಹಾಕುವ ಮೊದಲು ಅದನ್ನು ಸರಿಯಾಗಿ ಬಿಸಿ ಮಾಡಲು ಮರೆಯದಿರಿ. ಪ್ಯಾನ್ ಬಿಸಿಯಾದ ನಂತರ ಚೆನ್ನಾಗಿ ಎಣ್ಣೆ ಸವರಿ ನಂತರ ದೋಸೆ ಹಾಕಿ.

Read more Photos on
click me!

Recommended Stories