Store coconut fresh: ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಲ್ಲಿ ದೇವರಿಗೆ ಅರ್ಪಿಸಿದ ತೆಂಗಿನಕಾಯಿಗಳು ಅಡುಗೆಮನೆಯಲ್ಲಿ ರಾಶಿ ಬೀಳುತ್ತಿವೆಯೇ? ಬೆಲೆ ಏರಿಕೆಯ ಈ ಕಾಲದಲ್ಲಿ ಒಡೆದ ಕಾಯಿಗಳು ಬೇಗನೆ ಕೆಟ್ಟು ಹೋದಂತೆ ತಡೆಯಲು ಇಲ್ಲಿದೆ ಸೂಪರ್ ಟಿಪ್ಸ್..
ಅತ್ಯಂತ ಸರಳ ಮತ್ತು ಪರಿಣಾಮಕಾರಿ ಟಿಪ್ಸ್ ಶ್ರಾವಣ ಮಾಸದ ಪೂಜೆ-ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಿಸಿದ ತೆಂಗಿನಕಾಯಿಗಳು ಹೆಚ್ಚಾಗುತ್ತಿವೆಯೇ? ಬೆಲೆ ಏರಿಕೆಯ ಈ ಕಾಲದಲ್ಲಿ ತೆಂಗಿನಕಾಯಿ ಕೆಟ್ಟುಹೋದರೆ ಮನಸ್ಸಿಗೆ ಕಷ್ಟವಾಗುವುದು ಸಹಜ. ಒಡೆದ ತೆಂಗಿನಕಾಯಿಯನ್ನು ತಿಂಗಳುಗಟ್ಟಲೆ ತಾಜಾವಾಗಿರಿಸಲು ಇಲ್ಲಿವೆ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಟಿಪ್ಸ್..
26
ಈ ರೀತಿ ಸ್ಟೋರ್ ಮಾಡಿ
ಈ ರೀತಿ ಸ್ಟೋರ್ ಮಾಡಿ ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು. ಈ ಸಮಯದಲ್ಲಿ ದೇವರಿಗೆ ಅರ್ಪಿಸುವ ತೆಂಗಿನಕಾಯಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಒಡೆದ ಕಾಯಿಯನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅದು ಒಂದೆರಡು ದಿನದಲ್ಲೇ ವಾಸನೆ ಬರಲು ಅಥವಾ ಕೆಡಲು ಶುರುವಾಗುತ್ತದೆ. ತೆಂಗಿನಕಾಯಿ ರೇಟ್ ಕೂಡ ದುಬಾರಿಯಾಗಿರುವ ಕಾರಣ, ಅದನ್ನು ಎಸೆಯುವ ಬದಲು ಈ ರೀತಿ ಸ್ಟೋರ್ ಮಾಡಿ ನೋಡಿ.
36
ಹೆಚ್ಚಿನವರು ಮಾಡುವ ತಪ್ಪು
ಹೆಚ್ಚಿನವರು ಮಾಡುವ ತಪ್ಪು ಸಾಮಾನ್ಯವಾಗಿ ತೆಂಗಿನಕಾಯಿ ಒಡೆದ ನಂತರ ಅನೇಕರು ಅದನ್ನು ಹಾಗೆಯೇ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ತಪ್ಪು. ಹೀಗೆ ಮಾಡುವುದರಿಂದ ಕಾಯಿಯಲ್ಲಿರುವ ತೇವಾಂಶವು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸಿ ಕಾಯಿ ಬೇಗನೆ ಜಿಗುಟಾಗುವಂತೆ ಮಾಡುತ್ತದೆ.
ಸರಿಯಾದ ಸಂಗ್ರಹಣೆ ವಿಧಾನ ತೇವಾಂಶ ನಿವಾರಣೆ (Moisture control) ಮೊದಲು ತೆಂಗಿನಕಾಯಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ತೆಗೆಯಿರಿ. ನಂತರ ಒಂದು ಒಣ ಬಟ್ಟೆಯಿಂದ ಕಾಯಿಯ ಬಿಳಿ ಭಾಗವನ್ನು ಚೆನ್ನಾಗಿ ಒರೆಸಿ. ಅದರಲ್ಲಿ ಹನಿ ನೀರು ಕೂಡ ಇರದಂತೆ ನೋಡಿಕೊಳ್ಳಿ.
56
ಉಪ್ಪಿನ ಬಳಕೆ
ಉಪ್ಪಿನ ಬಳಕೆ ಒಂದು ಚಿಟಿಕೆ ಉಪ್ಪನ್ನು ತೆಗೆದುಕೊಂಡು ತೆಂಗಿನಕಾಯಿಯ ಬಿಳಿ ಭಾಗದ ಮೇಲೆ ಎಲ್ಲಾ ಕಡೆ ಹರಡಿ ಹಚ್ಚಿ. ಉಪ್ಪು ನೈಸರ್ಗಿಕ ಸಂರಕ್ಷಕವಾಗಿ (Preservative) ಕೆಲಸ ಮಾಡುತ್ತದೆ ಮತ್ತು ಪಾಚಿ ಅಥವಾ ಬೂಷ್ಟು ಬರದಂತೆ ತಡೆಯುತ್ತದೆ.
66
ಫ್ರೀಜರ್‌ನಲ್ಲಿ ಇಡಿ
ಫ್ರೀಜರ್‌ನಲ್ಲಿ ಇಡಿ ಹೀಗೆ ಸಿದ್ಧಪಡಿಸಿದ ಕಾಯಿಯನ್ನು ಒಂದು ಕವರ್ ಅಥವಾ ಡಬ್ಬಿಯಲ್ಲಿ ಹಾಕಿ ನೇರವಾಗಿ ಫ್ರೀಜರ್ (Freezer) ಒಳಗೆ ಇಡಿ.ಈ ವಿಧಾನವನ್ನು ಅನುಸರಿಸಿದರೆ ತೆಂಗಿನಕಾಯಿ ತಿಂಗಳಾದರೂ ಕೆಡುವುದಿಲ್ಲ, ಅದರ ರುಚಿ ಮತ್ತು ತಾಜಾತನ ಹಾಗೆಯೇ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.