Published : Aug 27, 2026, 08:19 PM ISTUpdated : Aug 27, 2026, 09:36 PM IST
ಬೇಳೆ ಬೇಯಿಸುವಾಗ ಬರುವ ಬಿಳಿ ನೊರೆಯು ಸಪೋನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಕರುಳಿನ ಒಳಪದರಕ್ಕೆ ಹಾನಿಯಾಗಬಹುದು. ಆದ್ದರಿಂದ, ತಜ್ಞರು ಬೇಳೆಯನ್ನು ಪಾತ್ರೆಯಲ್ಲಿ ಬೇಯಿಸಿ ನೊರೆ ತೆಗೆಯಲು ಅಥವಾ ಅಡುಗೆಗೂ ಮುನ್ನ ನೆನೆಸಿಡಲು ಸಲಹೆ ನೀಡುತ್ತಾರೆ.
ಅಡುಗೆ ಮನೆಯಲ್ಲಿರುವ ಕೆಲವು ವಿಷಯಗಳ ಬಗ್ಗೆ ಮಹಿಳೆಯರಿಗೆ ಸದಾ ಡೌಟ್ ಇದ್ದೇ ಇರುತ್ತದೆ. ಆದರೆ ಅದನ್ನು ಪರಿಹರಿಸಿಕೊಳ್ಳುವುದು ಅಷ್ಟೇ ಕಷ್ಟವಾಗಿದೆ. ಅದರಲ್ಲಿ ಒಂದು ಬೇಳೆ ಬೇಯಿಸುವಾಗ ಬರುವ ನೊರೆ. ಯಾವುದೇ ಬೇಳೆಯನ್ನು ಕುದಿಸುವಾಗ ರೂಪುಗೊಳ್ಳುವ ಬಿಳಿ ನೊರೆ ಅನೇಕ ಜನರಿಗೆ ಕಳವಳಕಾರಿಯಾಗಿದೆ. ಇದು ಸಾಮಾನ್ಯವಾಗಿ ಅಡುಗೆ ಪ್ರಕ್ರಿಯೆಯಲ್ಲಿ ಹೊರಹಾಕಲ್ಪಡುತ್ತದೆ, ಕೆಲವರು ಇದನ್ನು ಪೌಷ್ಟಿಕಾಂಶ ವಿರೋಧಿ ಎಂದು ಕರೆಯುತ್ತಾರೆ ಮತ್ತು ಕೆಲವರು ಇದನ್ನು ವಿಷ ಎಂದು ಸಹ ಕರೆಯುತ್ತಾರೆ.
26
ಕುಕ್ಕರ್‌ನಲ್ಲಿ ಅಡುಗೆ
ಅಷ್ಟಕ್ಕೂ ಈಗ ಕುಕ್ಕರ್ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಕುಕ್ಕರ್‌ನಲ್ಲಿ ಅನ್ನ ಮಾಡುವುದು ಸೇರಿದಂತೆ ಬೇಳೆಕಾಳುಗಳನ್ನು ಬೇಯಿಸುವುದು ಕೂಡ ಅಪಾಯಕಾರಿಯೇ. ಆದರೆ, ಗೊತ್ತಿದ್ದರೂ ಧಾವಂತದ ಈ ಬದುಕಿನಲ್ಲಿ ಕುಕ್ಕರ್ ನಮ್ಮ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದರಲ್ಲಿಯೂ ಗಂಟೆಗಟ್ಟಲೆ ಗ್ಯಾಸ್ ಮೇಲೆ ಪಾತ್ರೆಯಲ್ಲಿ ಅನ್ನ, ಬೇಳೆ ಬೇಯಿಸಿದರೆ ಗ್ಯಾಸ್ ಕೂಡ ನಷ್ಟ, ಟೈಮೂ ವೇಸ್ಟು ಎನ್ನುವುದು ಎಲ್ಲರ ಅನಿಸಿಕೆ, ಇದು ನಿಜ ಕೂಡ.
36
ಪಾತ್ರೆಯಲ್ಲಿ ತಿಳಿಯತ್ತೆ
ಪಾತ್ರೆಯಲ್ಲಿ ಬೇಳೆ ಬೇಯಿಸಿದಾಗ ಈ ನೊರೆ ಸ್ಪಷ್ಟವಾಗಿ ಕಂಡರೆ, ಕುಕ್ಕರ್‌ನಲ್ಲಿ ಇದು ಬೆಂದ ಬೇಳೆಯ ಜೊತೆ ಮಿಕ್ಸ್ ಆಗಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆದರೆ ಆತಂಕಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಈ ನೊರೆಯು ಅತಿಯಾದರೆ ವಿಷಕ್ಕೆ ಸಮಾನ ಎನ್ನುವುದು.
ಇದನ್ನು ಫೋಮ್ ಎಂದು ಇಂಗ್ಲಿಷ್ನಲ್ಲಿ ಕರೆಯಲಾಗುತ್ತದೆ. ಫೋಮ್ ಮೂಲತಃ ಪ್ರೋಟೀನ್ , ಸ್ವಲ್ಪ ಪಿಷ್ಟ ಮತ್ತು ಸಸ್ಯಗಳ ರಕ್ಷಣಾ ಕಾರ್ಯವಿಧಾನದ ಭಾಗವಾಗಿರುವ ಸಪೋನಿನ್ ಎಂಬ ಸಂಯುಕ್ತದಿಂದ ಮಾಡಲ್ಪಟ್ಟಿದೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ, ಸಪೋನಿನ್ ಉರಿಯೂತ ನಿವಾರಕ ಮತ್ತು ಕೊಲೆಸ್ಟ್ರಾಲ್ ವಿರೋಧಿ ಗುಣಗಳನ್ನು ತೋರಿಸುತ್ತದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ, ಸಪೋನಿನ್ ಬೇಳೆಯನ್ನು ಕಹಿಯಾಗಿ ರುಚಿ ನೋಡುವಂತೆ ಮಾಡುತ್ತದೆ ಮತ್ತು ಕರುಳಿನ ಒಳಪದರವನ್ನು ಹಾನಿಗೊಳಿಸುತ್ತದೆ. ಒಬ್ಬ ವ್ಯಕ್ತಿಯು ಕೆರಳಿಸುವ ಕರುಳಿನ ಸಹಲಕ್ಷಣದಿಂದ ಬಳಲುತ್ತಿದ್ದರೆ, ಸಾಮಾನ್ಯ ಪ್ರಮಾಣದ ಸಪೋನಿನ್ ನಿಂದ ಕೂಡ ಅವರ ಕರುಳಿನ ಒಳಪದರವು ತೊಂದರೆಗೊಳಗಾಗಬಹುದು.
56
ಏನು ಮಾಡಬೇಕು?
ಅದಕ್ಕಾಗಿ ತೆರೆಯ ಪಾತ್ರೆಯಲ್ಲಿ ಬೇಳೆ ಬೇಯಿಸುವ ಸಂದರ್ಭದಲ್ಲಿ ನೊರೆ ಬಂದರೆ ಅದನ್ನು ಸೌಟ್‌ನಿಂದ ತೆಗೆದು ಹಾಕಬೇಕು. ಹಾಗಿದ್ದರೆ ಕುಕ್ಕರ್‌ನಲ್ಲಿ ಬೇಳೆ ಬೇಯಿಸಿದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಇದಕ್ಕೆ ಉತ್ತರವಿಲ್ಲ. ಏಕೆಂದರೆ, ಈ ನೊರೆ ಬೇಳೆಯ ಜೊತೆ ಮಿಕ್ಸ್ ಆಗುವ ಕಾರಣ ಅದನ್ನು ಸೇವಿಸದೇ ಬೇರೆ ವಿಧಿಯಿಲ್ಲ.
66
ತಜ್ಞರು ಹೇಳೋದೇನು
ಇದೇ ಕಾರಣಕ್ಕೆ ತಜ್ಞರು ಹೇಳುವಂತೆ ಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಮೊದಲೇ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಬೇಳೆ ನೆನೆಸಿಟ್ಟು ಬಳಿಕ ಪಾತ್ರೆಯಲ್ಲಿಯೇ ಅದನ್ನು ಬೇಯಿಸಬೇಕು. ಹೀಗೆ ಮಾಡಿದಾಗ ನೊರೆ ಬಂದರೆ ಸುಲಭದಲ್ಲಿ ತೆಗೆಯಬಹುದು. ಒಂದು ವೇಳೆ ಅರ್ಧ ಗಂಟೆ ಮೊದಲು ಬೇಳೆ ನೆನೆಸಿ ಇಟ್ಟರೆ ಈ ರೀತಿಯ ನೊರೆ ಬರುವುದಿಲ್ಲ. ಎನ್ನುವುದು ಅವರ ಮಾತು. ಇಲ್ಲದಿದ್ದರೆ ಆರೋಗ್ಯಕ್ಕೆ ಈ ನೊರೆ ಮಾರಕ. ಪ್ರತಿನಿತ್ಯವೂ ಇದನ್ನು ಸೇವಿಸುತ್ತಾ ಬಂದರೆ ದೇಹ ಏನು ಆಗಬಹುದು ಎನ್ನುವುದನ್ನು ನೀವೇ ಊಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.