ಸಾಮಾನ್ಯವಾಗಿ ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ಸೀಟಿಯಿಂದ ಬೇಳೆ ಹೊರಬಂದು ಗಲೀಜಾಗುತ್ತದೆ. ಈ ಸಮಸ್ಯೆಯನ್ನು ತಡೆಯಲು, ಕುಕ್ಕರ್ ಮುಚ್ಚಳದ ರಂಧ್ರಕ್ಕೆ ಎಣ್ಣೆ ಹಾಕುವುದು ಅಥವಾ ಬೇಳೆ ಹಾಕುವ ಮುನ್ನ ಕುಕ್ಕರ್ ಬಿಸಿ ಮಾಡುವಂತಹ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ.
ಸಾಮಾನ್ಯವಾಗಿ ಬೇಳೆ ಬೇಯಿಸುವ ಸಮಯದಲ್ಲಿ, ಕುಕ್ಕರ್‌ನ ಸೀಟಿಯಿಂದ ಬೇಳೆ ಹೊರಕ್ಕೆ ಬರುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಹಲವು ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಿ ಇರುತ್ತಾರೆ.
26
ಜಾಗವೂ ಗಲೀಜು
ಇದರಿಂದ ಕುಕ್ಕರ್ ಗಲೀಜಾಗುವುದು ಮಾತ್ರವಲ್ಲದೇ, ಪುಸ್ ಎಂದು ಹೊರಕ್ಕೆ ಬಂದು ಕುಕ್ಕರ್ ಜೊತೆ ಗ್ಯಾಸ್ ಹಾಗೂ ಸುತ್ತಲಿನ ಜಾಗವೂ ಗಲೀಜಾಗುತ್ತದೆ.
36
ಸುಲಭದ ಉಪಾಯ
ಈ ಸಮಸ್ಯೆಯಿಂದ ಹೇಗೆ ಹೊರಕ್ಕೆ ಬರುವುದು ಎನ್ನುವ ಚಿಂತೆ ಮಾಡುತ್ತಿದ್ದರೆ ಇಲ್ಲಿದೆ ನಿಮಗಾಗಿ ಸುಲಭದ ಉಪಾಯ.
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಕುಕ್ಕರ್‌ನ ಮುಚ್ಚಳನ್ನು ಉಲ್ಟಾ ಮಾಡಿ ಸೀಟಿಯ ರಂಧ್ರಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿ. ಹೀಗೆ ಮಾಡಿದರೆ, ಕುಕ್ಕರ್‌ನ ಸೀಟಿಯಿಂದ ಬೇಳೆ ಹೊರಕ್ಕೆ ಬರುವುದಿಲ್ಲ.
56
ಕುಕ್ಕರ್‌ನಿಂದ ನೀರು ಹೊರಕ್ಕೆ ಬಾರದಿರಲು
ಇನ್ನು ಕುಕ್ಕರ್‌ನಿಂದ ನೀರು ಹೊರಕ್ಕೆ ಬರಬಾರದು ಎಂದರೆ ಈ ಟಿಪ್ಸ್ ಫಾಲೋ ಮಾಡಿ. ಮೊದಲು ಖಾಲಿ ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಡಬೇಕು. ಸುಮಾರು 10 ಸೆಕೆಂಡ್ ಬಿಟ್ಟ ನಂತರ ಕುಕ್ಕರ್ ಸ್ವಲ್ಪ ಬಿಸಿಯಾಗುತ್ತದೆ. ನಂತರ ಕುಕ್ಕರ್‌ಗೆ ಬೇಳೆ ಮತ್ತು ನೀರನ್ನು ಹಾಕಿ. ಅದಕ್ಕೆ ಬೇಕಾದ ಉಪ್ಪು ಮತ್ತು ಅರಿಶಿನ ಸೇರಿಸಿ.
66
ಬಳಿಕ ಹೀಗೆ ಮಾಡಿ
50-60 ಸೆಕೆಂಡ್‌ಗಳ ಕಾಲ ಕಾಯಿರಿ, ನೀರಿನಲ್ಲಿ ಸ್ವಲ್ಪ ಚಲನೆ ಉಂಟಾಗಲು ಬಿಡಿ. ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆ ತಕ್ಷಣ ಹಬೆ ಬರಲು ಆರಂಭವಾಗುತ್ತದೆ. ಸರಿಯಾಗಿ ಈ ಹಂತದಲ್ಲಿ ಕುಕ್ಕರ್‌ನ ಮುಚ್ಚಳವನ್ನು ಮುಚ್ಚಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.