How to peel ginger: ನಿಮಗೆಲ್ಲರಿಗೂ ತಿಳಿದಿರುವಂತೆ ಶುಂಠಿ ಸಿಪ್ಪೆ ಸುಲಿಯುವಾಗ ಹೆಚ್ಚಿನ ಭಾಗ ವ್ಯರ್ಥವಾಗುತ್ತದೆ. ಆದ್ದರಿಂದ ಶುಂಠಿ ಸಿಪ್ಪೆ ತೆಗೆಯುವ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಗೃಹಿಣಿ ಮತ್ತು ಅಡುಗೆ ಪ್ರಿಯರಿಗೆ ತುಂಬಾ ಉಪಯುಕ್ತವಾಗಿದೆ.
ಭಾರತೀಯರು ಶುಂಠಿ ಬಳಸದೆ ಮಸಾಲೆ ಖಾದ್ಯಗಳನ್ನು ಮಾಡುವುದು ಕಡಿಮೆಯೇ. ವಿಶೇಷವಾಗಿ ನಾನ್ ವೆಜ್ ಅಡುಗೆಗೆ ಇದು ಬಹಳ ಮುಖ್ಯವಾದ ಮಸಾಲೆ ಪದಾರ್ಥವಾಗಿದ್ದು, ಇದು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಚಹಾ-ಸಾಂಬಾರ್, ಗ್ರೇವಿ-ಸೂಪ್ ಏನೇ ಮಾಡಬೇಕೆಂದರೂ ಬಹುತೇಕ ಎಲ್ಲಾ ಮನೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ.
26
ಪ್ರತಿಯೊಬ್ಬ ಗೃಹಿಣಿಗೆ ತುಂಬಾ ಉಪಯುಕ್ತ
ಆದರೆ ಶುಂಠಿಯ ರುಚಿ, ಪರಿಮಳ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸಲು ಸರಿಯಾದ ರೀತಿಯಲ್ಲಿ ಸಿಪ್ಪೆ ತೆಗೆಯುವುದು ಅಷ್ಟೇ ಮುಖ್ಯ ಎಂದು ಕೆಲವೇ ಜನರಿಗೆ ತಿಳಿದಿದೆ. ತಪ್ಪು ತಪ್ಪಾಗಿ ಶುಂಠಿ ಸಿಪ್ಪೆ ಸುಲಿದಾಗ ಶುಂಠಿಯ ಹೆಚ್ಚಿನ ಭಾಗ ವ್ಯರ್ಥವಾಗುತ್ತದೆ. ಆದ್ದರಿಂದ ಶುಂಠಿಯನ್ನು ಸಿಪ್ಪೆ ತೆಗೆಯುವ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಗೃಹಿಣಿ ಮತ್ತು ಅಡುಗೆ ಪ್ರಿಯರಿಗೆ ತುಂಬಾ ಉಪಯುಕ್ತವಾಗಿದೆ.
36
ಶುಂಠಿ ಸಿಪ್ಪೆ ತೆಗೆಯುವ ಸರಿಯಾದ ವಿಧಾನ
ಚಾಕುವಿನಿಂದ ಅಲ್ಲ, ಚಮಚದಿಂದ ಸಿಪ್ಪೆ ತೆಗೆಯಿರಿ. ಶುಂಠಿ ಸಿಪ್ಪೆ ತೆಗೆಯಲು ಚಾಕು ಬಳಸುವುದರಿಂದ ಅದರ ಹೆಚ್ಚಿನ ಭಾಗ ವ್ಯರ್ಥವಾಗುತ್ತದೆ. ಬದಲಾಗಿ ಸಿಂಪಲ್ಲಾಗಿ ಒಂದು ಚಮಚವನ್ನು ತೆಗೆದುಕೊಂಡು ಸಿಪ್ಪೆಯನ್ನು ಅದರ ಅಂಚಿನಿಂದ ನಿಧಾನವಾಗಿ ಕೆರೆದು ತೆಗೆಯಿರಿ. ಇದರಿಂದ ಇದು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ಪೌಷ್ಠಿಕಾಂಶದ ಒಳಭಾಗವು ಹಾಗೆಯೇ ಉಳಿಯುತ್ತದೆ. ಸಣ್ಣ ಉಬ್ಬುಗಳನ್ನು ಸಹ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಖಾದ್ಯದ ಪ್ರಕಾರ ಕಟ್ ಮಾಡಿ ಶುಂಠಿಯನ್ನು ಕತ್ತರಿಸುವ ವಿಧಾನವು ನೀವು ಅದನ್ನು ಬಳಸುತ್ತಿರುವ ಖಾದ್ಯವನ್ನು ಅವಲಂಬಿಸಿರುತ್ತದೆ.
ಚಹಾ ಅಥವಾ ಸೂಪ್‌ಗಾಗಿ: ಶುಂಠಿಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ತರಕಾರಿ ಅಥವಾ ದಾಲ್‌ಗೆ: ನುಣ್ಣಗೆ ಕತ್ತರಿಸಿ ಅಥವಾ ತುರಿ ಮಾಡಿ. ಚಟ್ನಿಗೆ: ಸಣ್ಣ ತುಂಡುಗಳಾಗಿ ಕಟ್ ಮಾಡಿ ರುಬ್ಬಿಕೊಳ್ಳಿ. ಒಗ್ಗರಣೆಗೆ: ಜೂಲಿಯೆನ್ ಶೈಲಿಯಲ್ಲಿ ಕಟ್ ಮಾಡಿ (ಉದ್ದವಾದ ತೆಳುವಾದ ತುಂಡುಗಳು).
56
ಶುಂಠಿಯನ್ನು ಕಟ್ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು..
*ಯಾವಾಗಲೂ ತಾಜಾ ಮತ್ತು ಹಸಿ ಶುಂಠಿಯನ್ನು ಬಳಸಿ. *ಕತ್ತರಿಸುವ ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆಯಿರಿ. *ತುಂಬಾ ನುಣ್ಣಗೆ ಕತ್ತರಿಸುವುದರಿಂದ ಅದರ ರುಚಿ ಗಾಢವಾಗಿರುತ್ತದೆ. *ಚೂಪಾದ ಸ್ಟೀಲ್ ಚಾಕುವನ್ನು ಮಾತ್ರ ಬಳಸಿ.
66
ಶುಂಠಿಯನ್ನು ಸರಿಯಾಗಿ ಬಳಸುವುದರಿಂದಾಗುವ ಪ್ರಯೋಜನಗಳು
*ಆಹಾರದ ರುಚಿ ಮತ್ತು ವಾಸನೆ ಹೆಚ್ಚುತ್ತದೆ. *ಪೋಷಕಾಂಶಗಳು ಉಳಿಯುತ್ತವೆ. *ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. *ಕಡಿಮೆ ಶುಂಠಿಯಲ್ಲಿ ಹೆಚ್ಚಿನ ಸುವಾಸನೆ ಲಭ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.