Meat cooking tips: ಮಟನ್ ತಿನ್ನೋಕೆ ಇಷ್ಟ, ಆದ್ರೆ ಅದನ್ನ ಬೇಯಿಸೋದೆ ಕಷ್ಟ ಅಂತಾ ಹಲವರು ಅಂದ್ಕೋತಾರೆ. ಯಾಕಂದ್ರೆ ಮಟನ್ ಅಷ್ಟು ಸುಲಭವಾಗಿ ಬೇಯಲ್ಲ. ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಮಟನ್ ಬೇಗನೆ ಬೆಂದು ಹೋಗುತ್ತೆ.
ನಾವು ಸಾಮಾನ್ಯವಾಗಿ ಮನೆಯಲ್ಲಿ ಮಟನ್ ಸಾಂಬಾರ್, ಕರಿ ಅಥವಾ ಏನೇ ಮಾಡಿದರೂ ಅದು ಸರಿಯಾಗಿ ಬೆಂದಿರುವುದಿಲ್ಲ. ಚಿಂಗಮ್ ತರಹ ಜಗಿಯುತ್ತಿರಬೇಕಾಗುತ್ತೆ. ಅದೇ ರೆಸ್ಟೋರೆಂಟ್‌ನಲ್ಲಿ ಬೇಯಿಸಿದ ಮಟನ್ ಬೆಣ್ಣೆಯಂತೆ ಮೃದುವಾಗಿರುತ್ತದೆ ಮತ್ತು ಮಕ್ಕಳು ಸಹ ಅದನ್ನು ತಿನ್ನಬಹುದು. ಹಾಗಾದರೆ ಮನೆಯಲ್ಲಿಯೇ ಸುಲಭವಾಗಿ ಮಟನ್ ಮೃದುವಾಗಲು ಏನು ಮಾಡಬಹುದು ಎಂದು ನೀವು ತಲೆಕೆಡಿಸಿಕೊಳ್ಳುತ್ತಿದ್ದರೆ ಅದಕ್ಕೂ ಪರಿಹಾರವಿದೆ.
26
ಈ ಹಂತಗಳನ್ನು ಸರಿಯಾಗಿ ಅನುಸರಿಸಿ
ಹೌದು. ಮಟನ್ ಅನ್ನು ಸರಿಯಾಗಿ ಮ್ಯಾರಿನೇಟ್ ಮಾಡಿದರೆ ಮಾತ್ರ ಅದು ಮೃದುವಾಗಿರುವುದಲ್ಲದೆ, ರುಚಿಕರವಾಗಿರುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ.. ಸರಿಯಾದ ಪದಾರ್ಥ ಬಳಸುವುದು ಮತ್ತು ಕಡಿಮೆ ಶಾಖದಲ್ಲಿ ಬೇಯಿಸುವುದು ಅತ್ಯಗತ್ಯ. ಈ ಹಂತಗಳನ್ನು ಸರಿಯಾಗಿ ಅನುಸರಿಸಿದರೆ ಪ್ರತಿ ಬಾರಿಯೂ ಮಟನ್ ಅದ್ಭುತವಾದ ರುಚಿಯನ್ನು ಹೊಂದಿರುತ್ತದೆ. ತಿನ್ನುವುದಿರಲಿ, ಅದನ್ನು ನೋಡುತ್ತಿದ್ದರೇನೇ ಅದರ ರುಚಿಯನ್ನ ಹೊಗಳುತ್ತೀರಿ.
36
ಮೃದುವಾಗಿ ಬೇಯುತ್ತೆ, ರುಚಿಯೂ ಹೆಚ್ಚಾಗುತ್ತೆ
ಚಿಕನ್‌ಗಿಂತ ಮಟನ್ ತಿನ್ನೋಕೆ ಹೆಚ್ಚು ಜನ ಇಷ್ಟಪಡ್ತಾರೆ. ಆದ್ರೆ ಮಟನ್ ಬೇಯೋಕೆ ಹೆಚ್ಚು ಸಮಯ ಬೇಕು. ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ, ಮಟನ್ ಬೇಗನೆ ಮೃದುವಾಗಿ ಬೇಯುತ್ತೆ, ರುಚಿಯೂ ಹೆಚ್ಚಾಗುತ್ತೆ.
ಮಾಂಸವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದರೆ ಬೇಗ ಬೇಯುತ್ತದೆ ಸರಿ. ಆದರೆ ಅಡುಗೆಗೂ ಮುನ್ನ ನಿಂಬೆ, ವಿನೆಗರ್, ಮೊಸರು ಬಳಸಿ ಮ್ಯಾರಿನೇಟ್ ಮಾಡಿದರೆ ಮಾಂಸ ಮೃದುವಾಗಿ, ರುಚಿಯಾಗಿ ಬೇಯುತ್ತದೆ. ಅಷ್ಟೇ ಅಲ್ಲ, ಇದು ಅಡುಗೆ ಸಮಯವನ್ನು ಕಡಿಮೆ ಮಾಡುತ್ತದೆ.
56
ಹೆಚ್ಚು ಉರಿಯಲ್ಲಿ ಬೇಯಿಸಿ
ಇನ್ನು ಮಾಂಸವನ್ನು ಬೇಗ ಬೇಯಿಸಲು ಹೆಚ್ಚು ಉರಿಯಲ್ಲಿ ಬೇಯಿಸಿ. ಪ್ರೆಶರ್ ಕುಕ್ಕರ್ ಬಳಸಿದರೆ ಮಟನ್ ತುಂಬಾ ಬೇಗನೆ ಬೇಯುತ್ತದೆ. ಇದರಿಂದ ಮಾಂಸ ಮೃದುವಾಗುವುದಲ್ಲದೆ, ರುಚಿಯೂ ಕೂಡ ಹೆಚ್ಚಾಗುತ್ತದೆ.
66
ತುಪ್ಪ ಸೇರಿಸಲು ಮರೆಯದಿರಿ
ನೀವು ತೆಳ್ಳಗಿನ ಕುರಿಮರಿ ಬಳಸುತ್ತಿದ್ದರೆ ಅಡುಗೆ ಮಾಡುವಾಗ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಲು ಮರೆಯದಿರಿ. ಹಾಗೆಯೇ ಮ್ಯಾರಿನೇಡ್‌ಗೆ ಸಾಕಷ್ಟು ಮೊಸರು ಸೇರಿಸುವುದರಿಂದ ಮಾಂಸವು ಇನ್ನಷ್ಟು ಮೃದುವಾಗುತ್ತದೆ. ಅಲ್ಲದೆ ಮಾಂಸವನ್ನು ಚಿಕ್ಕದಾಗಿ ಕಟ್ ಮಾಡಿದಷ್ಟು ಮಸಾಲೆಗಳು ಉತ್ತಮವಾಗಿ ಹಿಡಿಯಲು ಅನುವು ಮಾಡಿಕೊಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.