ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಈ ಕಾಯಿಲೆಯಿಂದ ಬಳಲುವುದು ಸಾಮಾನ್ಯವಾಗಿದೆ. ಆದರೆ ಗುಡ್ ನ್ಯೂಸ್ ಎಂದರೆ ಯಕೃತ್ತಿಗೆ ಕ್ರಮೇಣ ಕೊಬ್ಬನ್ನು ತೊಡೆದುಹಾಕುವ ಶಕ್ತಿಯಿದೆ. ಇದರಿಂದ ಅದು ಮತ್ತೆ ಆರೋಗ್ಯಕರವಾಗುತ್ತದೆ.
ಲಿವರ್ ಅಂದರೆ ಯಕೃತ್ತು ದೇಹದ ಅತಿದೊಡ್ಡ ಭಾಗವಾಗಿದ್ದು, ಅದು ರಕ್ತವನ್ನು ಶೋಧಿಸುತ್ತದೆ ಮತ್ತು ಟಾಕ್ಸಿನ್ ತೆಗೆದುಹಾಕುತ್ತದೆ. ಇದು ಮೌನವಾಗಿ ಕೆಲಸ ಮಾಡುತ್ತದೆ. ಆದರೆ ಒಂದು ವೇಳೆ ಅದಕ್ಕೆ ಸಮಸ್ಯೆಯಾಯ್ತು ಅಂದಿಟ್ಟುಕೊಳ್ಳಿ. ಅದು ಸಿಕ್ಕಾಪಟ್ಟೆ ಡೇಂಜರ್. ಈಗಂತೂ ಫ್ಯಾಟಿ ಲಿವರ್ ಸಮಸ್ಯೆ ತುಂಬಾ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಅಂದರೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಈ ಕಾಯಿಲೆಯಿಂದ ಬಳಲುವುದು ಸಾಮಾನ್ಯವಾಗಿದೆ. ಆದರೆ ಗುಡ್ ನ್ಯೂಸ್ ಎಂದರೆ ಯಕೃತ್ತಿಗೆ ಕ್ರಮೇಣ ಕೊಬ್ಬನ್ನು ತೊಡೆದುಹಾಕುವ ಶಕ್ತಿಯಿದೆ. ಇದರಿಂದ ಅದು ಮತ್ತೆ ಆರೋಗ್ಯಕರವಾಗುತ್ತದೆ.
28
ದೈನಂದಿನ ದಿನಚರಿಯಲ್ಲಿ ಬದಲಾವಣೆ
ನೀವೂ ಸಹ ಫ್ಯಾಟಿ ಲಿವರ್ ಸಮಸ್ಯೆಯಿಂದ ಹೊರಬರಲು ಬಯಸಿದರೆ ಉತ್ತಮ ಆಹಾರದೊಂದಿಗೆ ಕೇವಲ 90 ದಿನಗಳಲ್ಲಿ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು. ಮತ್ತೇಕೆ ತಡ, ನಿಮ್ಮ ದೈನಂದಿನ ದಿನಚರಿಯಲ್ಲಿ ಈ 7 ಬದಲಾವಣೆ ಮಾಡಿಕೊಳ್ಳಿ. ಲಿವರ್ ಗುಣವಾಗಲು ಪ್ರಾರಂಭಿಸುತ್ತದೆ.
38
ಸಕ್ಕರೆ ಕಡಿಮೆ ಮಾಡಿ
ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಫ್ಯಾಟಿ ಲಿವರ್ ಗುಣಪಡಿಸಲು ನೀವು ನಿಮ್ಮ ಆಹಾರದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಬೇಕು ಅಥವಾ ತೆಗೆದುಹಾಕಬೇಕು. ಒಟ್ಟಾರೆ ಪ್ಯಾಕೇಜ್ ಮಾಡಿದ ಜ್ಯೂಸ್, ಸುವಾಸನೆಯ ಮೊಸರು ಮತ್ತು ಡಯಟ್ ಸೋಡಾದಂತಹ ಪದಾರ್ಥ ಸೇವಿಸುವುದನ್ನ ತಪ್ಪಿಸಿ.
ಜೀರ್ಣಕ್ರಿಯೆ ಇರಬಹುದು, ಮೆದುಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಇರಬಹುದು ಪಾಲಿಫಿನಾಲ್‌ಗಳು ಉತ್ತಮ. ಆದ್ದರಿಂದ ನೀವು ಹಣ್ಣುಗಳು, ಆಲಿವ್ ಎಣ್ಣೆ, ದಾಳಿಂಬೆಗಳನ್ನು ಸೇವಿಸಬೇಕು. ಇವೆಲ್ಲವೂ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ.
58
ಫೈಬರ್ ಹೆಚ್ಚಿಸಿ
ಫೈಬರ್ ಭರಿತ ಆಹಾರಗಳು ಯಕೃತ್ತಿಗೆ ಅಮೃತಕ್ಕಿಂತ ಕಡಿಮೆಯಿಲ್ಲ. ಆದ್ದರಿಂದ ಚಿಯಾ ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಬ್ರೊಕೊಲಿಯನ್ನು ಸಾಧ್ಯವಾದಷ್ಟು ಸೇವಿಸಿ.
68
ಪ್ಯಾಕ್ ಮಾಡಿದ ಆಹಾರ ತಿನ್ಲೇಬೇಡಿ
ಪ್ಯಾಕ್ ಮಾಡಿದ ಆಹಾರಗಳು ನಮ್ಮ ದೇಹಕ್ಕೆ ಮತ್ತು ವಿಶೇಷವಾಗಿ ಯಕೃತ್ತಿಗೆ ಒಳ್ಳೆಯದಲ್ಲ, ಆದ್ದರಿಂದ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿ. ಬದಲಾಗಿ ನೀವು ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು, ಬೇಯಿಸಿದ ಕಡಲೆಕಾಯಿ ಮತ್ತು ಒಣ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
78
ಆರೋಗ್ಯಕರ ಕೊಬ್ಬು ಸೇವಿಸಿ
ದೇಹಕ್ಕೆ ಉತ್ತಮ ಕೊಬ್ಬು ಕೂಡ ಅಗತ್ಯ. ಇದಕ್ಕಾಗಿ ನೀವು ಒಮೆಗಾ -3 ಭರಿತ ಮೀನು, ಅಗಸೆಬೀಜದ ಎಣ್ಣೆ ಮತ್ತು ವಾಲ್ನಟ್ಸ್ ತಿನ್ನಲು ಪ್ರಾರಂಭಿಸಬೇಕು.
88
ತಡವಾಗಿ ಊಟ ಮಾಡಬೇಡಿ
ಮಲಗುವ 2-3 ಗಂಟೆಗಳ ಮೊದಲು ಭೋಜನ ಮಾಡಿ. ಬೇಗ ಭೋಜನವು ಫ್ಯಾಟಿ ಲಿವರ್‌ಗೆ ಮಾತ್ರವಲ್ಲದೆ ನಮ್ಮ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.