ಯಕೃತ್ತಿನಲ್ಲಿ (ಲಿವರ್ ) ಕೊಬ್ಬು ಸಂಗ್ರಹವಾಗುವುದರಿಂದ ಕೊಬ್ಬಿನ ಯಕೃತ್ ಉಂಟಾಗುತ್ತದೆ. ಅತಿಯಾದ ತೂಕ ಅಥವಾ ಜಡ ಜೀವನಶೈಲಿಯಿಂದ ಇದು ಉಂಟಾಗಬಹುದು. ತೆಳ್ಳಗಿರುವವರಿಗೆ ಫ್ಯಾಟಿ ಲಿವರ್ ಇರುವ ಸಾಧ್ಯತೆ ಇದೆ. ವ್ಯಾಯಾಮವಿಲ್ಲದ ದೇಹ, ಜೀವನ ಶೈಲಿ, ಆಹಾರ ಸೇರಿದಂತೆ ಹಲವು ಕಾರಣಗಳಿಂದ ಫ್ಯಾಟಿ ಲಿವರ್ ಸಮಸ್ಯೆ ಕಾಣಿಸಿಕೊಳ್ಳಬುದು.
27
ಕೊಬ್ಬಿನ ಯಕೃತ್ ಕಾಯಿಲೆ
ಕೊಬ್ಬಿನ ಯಕೃತ್ ಕಾಯಿಲೆ ಎರಡು ವಿಧಗಳಲ್ಲಿ ಬರುತ್ತದೆ. ಮದ್ಯಪಾನದಿಂದ ಉಂಟಾಗುವುದು ಮತ್ತು ಆಲ್ಕೋಹಾಲ್ ಅಲ್ಲದ ಕೊಬ್ಬಿನ ಯಕೃತ್ ಕಾಯಿಲೆ. ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ...
37
ಹೊಟ್ಟೆ ನೋವು
ಕೊಬ್ಬಿನ ಯಕೃತ್ ಇರುವವರಿಗೆ ಹೊಟ್ಟೆಯ ಮೇಲ್ಭಾಗದ ಬಲಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಚಿಕ್ಕ ಅಸ್ವಸ್ಥತೆಯನ್ನೂ ನಿರ್ಲಕ್ಷಿಸಬೇಡಿ.
47
ತೂಕ ಇಳಿಕೆ
ಹಠಾತ್ ತೂಕ ಇಳಿಕೆ ಮತ್ತೊಂದು ಲಕ್ಷಣ. ಕೊಬ್ಬಿನ ಯಕೃತ್ ಕಾಯಿಲೆ ಮುಂದುವರೆದಂತೆ, ಅದು ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.
57
ವಾಕರಿಕೆ
ಯಾವುದೇ ಸ್ಪಷ್ಟ ಕಾರಣವಿಲ್ಲದೆ ದಿನಗಳು ಅಥವಾ ವಾರಗಳವರೆಗೆ ವಾಕರಿಕೆ ಕಾಣಿಸಿಕೊಳ್ಳುವುದು ಕೊಬ್ಬಿನ ಯಕೃತ್ತಿನ ಮತ್ತೊಂದು ಲಕ್ಷಣ.
67
ಮಲದ ಬಣ್ಣ ಬದಲಾವಣೆ
ಮಲದ ಬಣ್ಣ ಬದಲಾವಣೆ ಮತ್ತೊಂದು ಲಕ್ಷಣ. ಯಕೃತ್ತು ಪಿತ್ತರಸವನ್ನು ಉತ್ಪಾದಿಸುತ್ತದೆ, ಇದು ಮಲಕ್ಕೆ ಬಣ್ಣವನ್ನು ನೀಡುತ್ತದೆ.
77
ಹೊಟ್ಟೆ ಮತ್ತು ಕಾಲುಗಳಲ್ಲಿ ಊತ
ಹೊಟ್ಟೆ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಮತ್ತೊಂದು ಲಕ್ಷಣ. ಊತವು ಯಕೃತ್ತು ಹೆಚ್ಚು ಅಪಾಯಕಾರಿ ಹಂತಕ್ಕೆ ಹೋಗುತ್ತಿದೆ ಎಂಬುದರ ಸಂಕೇತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.