ಈ ಯೋಗಾಸನಗಳ ಮೂಲಕ ಮಲಬದ್ಧತೆಯನ್ನು ನಿವಾರಿಸಿ

First Published May 17, 2022, 1:57 PM IST

ನೀವು ಸಹ ಪದೇ ಪದೇ ಮಲಬದ್ಧತೆ (Constipation)ಯಿಂದ ಬಳಲುತ್ತಿದ್ದರೆ, ಈ ಯೋಗಾಸನಗಳ (Yogasana) ಮೂಲಕ ನೀವು ಸಮಸ್ಯೆ ನಿವಾರಿಸಬಹುದು. ಮಲಬದ್ಧತೆಯ ಸಮಸ್ಯೆಗೆ, ನೀವು ಅನೇಕ ರೀತಿಯ ಔಷಧಿ (Medicine)ಗಳನ್ನು ಬಳಸಿರಬಹುದು, ಆದರೆ ಅದರಿಂದ ಏನು ಪ್ರಯೋಜನ ಆಗದೇ ಇರಬಹುದು. ಅದಕ್ಕಾಗಿಯೇ ನೀವು ಈ ಯೋಗಾಸನಗಳನ್ನು ಟ್ರೈ ಮಾಡಬಹುದು. 

ವಾಸ್ತವವಾಗಿ, ವ್ಯಕ್ತಿಯು ತನ್ನ ದೊಡ್ಡ ಕರುಳನ್ನು ಖಾಲಿ ಮಾಡಲು ಕಷ್ಟಪಟ್ಟಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದಾಗಿ, ವ್ಯಕ್ತಿಯು ಇನ್ನೂ ಅನೇಕ ಇತರ ರೋಗಗಳನ್ನು ಎದುರಿಸಬೇಕಾಗಬಹುದು. ನಿಮಗೂ ಮಲಬದ್ಧತೆಯ(Constipation) ಸಮಸ್ಯೆಯಿದ್ದರೆ, ಈ ಯೋಗಾಸನಗಳು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತವೆ. ಈ ಯೋಗಾಸನಗಳ ಬಗ್ಗೆ ತಿಳಿಯೋಣ.

ಪವನ ಮುಕ್ತಾಸನ (Pavana Muktasana)
ಪವನಮುಕ್ತಾಸನವು ಜೀರ್ಣಾಂಗದಿಂದ ಅನಗತ್ಯ ಗ್ಯಾಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಈ ಆಸನವು ಅತ್ಯುತ್ತಮವಾಗಿದೆ. ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಗಳಿಗೆ  ಈ ಆಸನವನ್ನು ಮಾಡಲು ಸಲಹೆ ನೀಡಲಾಗುತ್ತದೆ. 

ಭುಜಂಗಾಸನ(Bhujangasana)
ಈ ಆಸನ  ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಬೆಸ್ಟ್ ಎಂದು ಪರಿಗಣಿಸಲಾಗಿದೆ. ಈ ಆಸನದ ಮೂಲಕ, ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಇದು ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಸನವನ್ನು ಅಭ್ಯಾಸ ಮಾಡಿ. 

ಅರ್ಧ ಚಕ್ರಾಸನ (Arda chakrasana)
ಈ ಆಸನವು ಮಲಬದ್ಧತೆಯನ್ನು ನಿವಾರಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ. ಈ ಆಸನವನ್ನು ಮಾಡುವಾಗ ದೇಹವು ಅರ್ಧ ಚಕ್ರದಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಆಸನವನ್ನು ಅರ್ಧಚಕ್ರಾಸನ ಎಂದು ಕರೆಯಲಾಗುತ್ತದೆ. ಈ ಆಸನವು ಮಲಬದ್ಧತೆಯ ಜೊತೆಗೆ ಮಧುಮೇಹ ಮತ್ತು ಹೊಟ್ಟೆಯ ಕೊಬ್ಬನ್ನು ಕೂಡ ತೆಗೆದುಹಾಕುತ್ತದೆ.  

ವಜ್ರಾಸನ (Vajrasana)
ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿರಿಸುವುದು ಮಾತ್ರವಲ್ಲದೆ, ನಿಮ್ಮ ಕೆಳಭಾಗದ ಬೆನ್ನುಹುರಿಯ ನೋವನ್ನು ನಿವಾರಿಸುತ್ತದೆ. ಪ್ರತಿದಿನ ವಜ್ರಾಸನ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಿ. 

click me!