ಉಗುರು, ಕೂದಲಿನಲ್ಲಿ ಈ ರೀತಿಯಾದ್ರೆ ಕ್ಯಾಲ್ಸಿಯಂ ಕೊರತೆ ಎಂದರ್ಥ

First Published | May 17, 2022, 1:48 PM IST

ನೀವು ನಿಮ್ಮ ಕೂದಲಿನ (Hair) ಬಗ್ಗೆ ಎಷ್ಟೇ ಕಾಳಜಿ (Care) ವಹಿಸಿದರೂ ಕೂದಲು ದುರ್ಬಲವಾಗುತ್ತಿದೆಯೇ? ಮತ್ತು ನಿಮ್ಮ ಕೂದಲಿಗೆ ಉತ್ತಮ ಉತ್ಪನ್ನವನ್ನು ಉಪಯೋಗಿಸಿದ ನಂತರವೂ ಕೂದಲು ಉದುರುವಿಕೆ ಸಹ ಹೆಚ್ಚುತ್ತಿದ್ಯಾ? ಇದಕ್ಕೇನಪ್ಪಾ ಕಾರಣ ಎಂದು ನೀವು ಯೋಚನೆ ಮಾಡುತ್ತಿದ್ದರೆ ನೀವು ನಿಮ್ಮ ಆಹಾರದ (Food) ಬಗ್ಗೆ ಗಮನ ಹರಿಸಬೇಕು ಎಂದು ಅರ್ಥ. ಅಂದ್ರೆ ಆಹಾರದಲ್ಲಿ ನೀವು ಕಡಿಮೆ ಕ್ಯಾಲ್ಸಿಯಂ (Calcium) ಸಮೃದ್ಧ ಆಹಾರವನ್ನು ಬಳಸುತ್ತಿರೋದ್ರಿಂದಾನೆ ಕೂದಲು ಉದುರುತ್ತಿದೆ ಅನ್ನೋದನ್ನು ನೀವು ತಿಳಿಯಬೇಕು.   

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದ್ರೆ ಇದರಿಂದ ಕೂದಲು(Hair) ಮೊದಲಿಗೆ ತುಂಬಾ ವೇಗವಾಗಿ ತೆಳುವಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಆದರೆ, ಕೂದಲಿನ ಈ ಲಕ್ಷಣವನ್ನು ಆಧರಿಸಿ, ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದೆ ಎಂದು ಹೇಳೋದು ತಪ್ಪಾಗುತ್ತೆ. ಏಕೆಂದರೆ ಈ ರೋಗಲಕ್ಷಣಗಳು ಬೇರೆ ಯಾವುದಾದರೂ ಸಮಸ್ಯೆಯಿಂದಲೂ ಬಂದಿರೋ ಚಾನ್ಸ್ ಇದೆ. 

ನಿಮಗೆ ಇದು ಕ್ಯಾಲ್ಸಿಯಂ ಕೊರತೆ ಹೌದೋ? ಅಲ್ವೋ? ಅನ್ನೋ ಸಂಶಯ ಇದ್ರೆ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಉಗುರುಗಳನ್ನು(Nails) ಒಮ್ಮೆ ನೋಡಿ. ಏಕೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ, ಉಗುರುಗಳು ಸಹ ತೆಳ್ಳಗಾಗಲು ಪ್ರಾರಂಭಿಸುತ್ತವೆ ಮತ್ತು ಬೇಗನೆ ತುಂಡಾಗುತ್ತೆ.  

Tap to resize

ಈ ಎರಡು ರೋಗಲಕ್ಷಣಗಳನ್ನು ನೀವು ಒಟ್ಟಿಗೆ ನೋಡಿದ್ರೆ, ನಿಮ್ಮ ದೈನಂದಿನ ಆಹಾರದಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ(Calcium) ಆಹಾರ ಸೇವನೆ ಮಾಡಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಉಗುರುಗಳು ಮತ್ತು ಕೂದಲುಗಳೆರಡಕ್ಕೂ ಉತ್ತಮ ಬೆಳವಣಿಗೆ ಮತ್ತು ಬಲಕ್ಕಾಗಿ ಕ್ಯಾಲ್ಸಿಯಂ ಅಗತ್ಯವಿದೆ.

ಆಹಾರದಲ್ಲಿ ಏನೆಲ್ಲಾ ಸೇರಿಸಬೇಕು ನೋಡಿ
ಕೂದಲನ್ನು ದಟ್ಟವಾಗಿ, ಬಲವಾಗಿ ಮತ್ತು ಹೊಳೆಯುವಂತೆ ಮಾಡಲು, ನಿಮ್ಮ ದೈನಂದಿನ ಆಹಾರದಲ್ಲಿ ದಾಲ್, ಹಾಲು, ಮೊಸರು(Curd) ಮತ್ತು ಪನ್ನೀರ್ ಅನ್ನು ತಪ್ಪದೇ ಸೇರಿಸಿ. ಇದನ್ನು ಯಾವತ್ತೂ ಮರೆಯಲೇಬೇಡಿ. ಏಕೆಂದರೆ ಈ ಎಲ್ಲಾ ಆಹಾರಗಳು ದೇಹದಲ್ಲಿ ಕ್ಯಾಲ್ಸಿಯಂನ ಕೊರತೆಯನ್ನು ನಿವಾರಿಸಲು ಕೆಲಸ ಮಾಡುತ್ತವೆ. 

ಇದನ್ನೆಲ್ಲಾ ಸೇವಿಸಿದ ಬಳಿಕವೂ, ದೇಹದಲ್ಲಿ ವಿಟಮಿನ್ ಡಿ(Vitamin D) ಕೊರತೆಯಿದ್ದರೆ, ನೀವು ಕ್ಯಾಲ್ಸಿಯಂ ಆಹಾರದ ಪ್ರಯೋಜನವನ್ನು ಪಡೆಯುತ್ತಿಲ್ಲ ಎಂದು ತಿಳ್ಕೊಳ್ಳಿ. ಏಕೆಂದರೆ ವಿಟಮಿನ್-ಡಿ ಕೊರತೆಯಿದ್ದಾಗ ದೇಹದಲ್ಲಿ ಕ್ಯಾಲ್ಸಿಯಂ ಜೀರ್ಣವಾಗುವುದಿಲ್ಲ. ಈ ಸಮಯದಲ್ಲಿ ಪೂರಕಗಳನ್ನು ಸೇವಿಸುವುದು ಉತ್ತಮ. 

Latest Videos

click me!