ಮುಖದ ಮೇಲಿನ ಮೊಡವೆಗಳಿಂದ ಬೇಸತ್ತಿದ್ದೀರಾ? ಇನ್ಮುಂದೆ ಆ ಚಿಂತೆ ಬಿಟ್ಟುಬಿಡಿ. ನಿಮ್ಮ ಮನೆಯಲ್ಲಿಯೇ ಸಿಗುವ ಈ ಸರಳ ವಸ್ತುಗಳನ್ನು ಬಳಸುವ ಮೂಲಕ ಮೊಡವೆಗಳನ್ನು ಸುಲಭವಾಗಿ ನಿವಾರಿಸಬಹುದು.
ಮುಖದ ಮೇಲಿನ ಮೊಡವೆಗಳಿಂದ ಬೇಸತ್ತಿದ್ದೀರಾ? ಇನ್ಮುಂದೆ ಆ ಚಿಂತೆ ಬಿಟ್ಟುಬಿಡಿ. ನಿಮ್ಮ ಮನೆಯಲ್ಲಿಯೇ ಸಿಗುವ ಈ ಸರಳ ವಸ್ತುಗಳನ್ನು ಬಳಸುವ ಮೂಲಕ ಮೊಡವೆಗಳನ್ನು ಸುಲಭವಾಗಿ ನಿವಾರಿಸಬಹುದು.
27
ಗ್ರೀನ್ ಟೀ
ಗ್ರೀನ್ ಟೀ ತಯಾರಿಸಿ ತಣ್ಣಗಾಗಲು ಬಿಡಿ. ನಂತರ ಚರ್ಮದ ಮೇಲಿನ ಎಣ್ಣೆಯಂಶ ಮತ್ತು ಊತವನ್ನು ಕಡಿಮೆ ಮಾಡಲು ಹತ್ತಿಯ ಪ್ಯಾಡ್ ಬಳಸಿ ಮುಖಕ್ಕೆ ಹಚ್ಚಿ.
37
ಮುಲ್ತಾನಿ ಮಿಟ್ಟಿ
ಚರ್ಮದಲ್ಲಿನ ಹೆಚ್ಚುವರಿ ಎಣ್ಣೆಯಂಶವನ್ನು ತೆಗೆದುಹಾಕಲು ಮತ್ತು ಮುಚ್ಚಿಹೋಗಿರುವ ರಂಧ್ರಗಳನ್ನು ಸ್ವಚ್ಛಗೊಳಿಸಲು ಮುಲ್ತಾನಿ ಮಿಟ್ಟಿ ಸಹಾಯಕವಾಗಿದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಬಹುದು.
ಅಲೋವೆರಾ ಜೆಲ್ ಊತ ಮತ್ತು ಕಿರಿಕಿರಿಯುಂಟುಮಾಡುವ ತ್ವಚೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ರಾತ್ರಿಯಿಡೀ ಮುಖಕ್ಕೆ ಹಚ್ಚಿ ಮಲಗಬಹುದು.
57
ಜೇನುತುಪ್ಪ
ಜೇನುತುಪ್ಪವು ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಸ್ವಲ್ಪ ಜೇನುತುಪ್ಪವನ್ನು ಮೊಡವೆಗಳ ಮೇಲೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.
67
ಟೀ ಟ್ರೀ ಆಯಿಲ್
ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಲು ಟೀ ಟ್ರೀ ಆಯಿಲ್ ಅತ್ಯುತ್ತಮವಾಗಿದೆ. ವಾರದಲ್ಲಿ ಎರಡು ಅಥವಾ ಮೂರು ದಿನ ಟೀ ಟ್ರೀ ಆಯಿಲ್ ಅನ್ನು ಮುಖಕ್ಕೆ ಹಚ್ಚಿ.
77
ಐಸ್ ಕ್ಯೂಬ್
ಐಸ್ ಕ್ಯೂಬ್ ಬಳಸಿ ಮುಖವನ್ನು ಮಸಾಜ್ ಮಾಡಿ. ಇದು ಮುಖದ ಮೇಲಿನ ಊತ, ನೋವು ಮತ್ತು ಕೆಂಪಾಗುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಮಾಡುವುದು ಮುಖದ ತ್ವಚೆಗೆ ತುಂಬಾ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.