ತಂದೆಯಾಗಲು ಸರಿಯಾದ ವಯಸ್ಸು ಎಷ್ಟು ಗೊತ್ತಾ ..?

First Published | Oct 12, 2022, 5:05 PM IST

ಪೇರೆಂಟ್ಸ್ ಆಗೋದು ಯಾವುದೇ ದಂಪತಿಗಳ ಪರಸ್ಪರ ಒಪ್ಪಿತ ನಿರ್ಧಾರ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಅವರು ಸ್ವಲ್ಪ ತಡವಾಗಿ ಪೋಷಕರಾಗಲು ನಿರ್ಧರಿಸುತ್ತಾರೆ. ಆದರೂ, ವೈದ್ಯಕೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಮಹಿಳೆಯರು 30-32 ನೇ ವಯಸ್ಸಿನಲ್ಲಿ ಮಗುವಿನ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಆದರೆ, ಮಹಿಳೆಯರು 30 ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರೆ, ಎರಡನೇ ಮಗುವನ್ನು ಸ್ವಲ್ಪ ತಡವಾಗಿ ಯೋಜಿಸೋದು ಕಷ್ಟವಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ 32-34 ರ ನಂತರ ಮೊದಲ ಗರ್ಭಧಾರಣೆಯನ್ನು ಯೋಜಿಸಿದರೆ, ದಂಪತಿಗಳು ಅನೇಕ ಸಮಸ್ಯೆ ಎದುರಿಸಬೇಕಾಗುತ್ತೆ ಮತ್ತು ಮಗುವಿನಲ್ಲಿ ಅನೇಕ ರೋಗಗಳ ಅಪಾಯವೂ ಹೆಚ್ಚಾಗುತ್ತೆ.

ಆರೋಗ್ಯವಂತ ಮಗುವಿಗೆ ಜನ್ಮ ನೀಡೋದು ಮಹಿಳೆಯ ವಯಸ್ಸಿನ ಮೇಲೆ ಮಾತ್ರ ಅವಲಂಬಿತವಾಗಿರುತ್ತೆಂದಲ್ಲ. ಮೆಡಿಕಲ್ ಸೈನ್ಸ್ ಪುರುಷರೂ ಸಹ 35 ವರ್ಷದ ನಂತರ ತಂದೆಯಾಗಲು(Father) ನಿರ್ಧರಿಸಿದರೆ, ಮಗುವಿನಲ್ಲಿ ಅನೇಕ ಮಾನಸಿಕ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತೆ ಎಂದು ನಂಬುತ್ತೆ . ಇದಕ್ಕೆ ಕಾರಣಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ. 

35 ವರ್ಷದ ನಂತರ ಪುರುಷರಲ್ಲಿ ಏನೆಲ್ಲಾ ಸಮಸ್ಯೆ ಕಾಡುತ್ತೆ?
ಸ್ಪರ್ಮ್ ಕೌಂಟ್ (Sperm count)ಕಡಿಮೆಯಾಗುತ್ತೆ 
ವೀರ್ಯಾಣುವಿನ ಗುಣಮಟ್ಟದಲ್ಲಿ ಕುಸಿತ ಉಂಟಾಗುತ್ತೆ
ಸ್ಪರ್ಮ್ ನ ಚಲನಶೀಲತೆ ಕಡಿಮೆಯಾಗುತ್ತೆ
ವೀರ್ಯದ ಡಿಎನ್ ಎ ಅನೇಕ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತೆ 
ಈ ಎಲ್ಲಾ ಕಾರಣದಿಂದ ಗರ್ಭಧಾರಣೆ ಸ್ವಲ್ಪ ಕಷ್ಟವಾಗುತ್ತೆ. 
 

Tap to resize

ಯಾವ ವಯಸ್ಸಿನಲ್ಲಿ ತಂದೆಯಾಗಬೇಕು?
ವೈದ್ಯಕೀಯ ಸ್ಥಿತಿ ಮತ್ತು ವೀರ್ಯದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡರೆ, ಪುರುಷನು 25 ನೇ ವಯಸ್ಸಿನಲ್ಲಿ ತಂದೆಯಾಗಲು ನಿರ್ಧರಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿ, ಸ್ಪರ್ಮ್ ಕೌಂಟ್ ಮತ್ತು ಚಲನೆ ಅತ್ಯಧಿಕವಾಗಿರುತ್ತೆ. ಆದರೆ ಇಂದಿನ ಕಾಲದಲ್ಲಿ, ಈ ವಯಸ್ಸಿನಲ್ಲಿ, ಯುವಕರು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುತ್ತಾರೆ ಅಥವಾ ಪ್ರೊಫೆಷನಲ್ ಡಿಗ್ರಿ(Professional degree) ತೆಗೆದುಕೊಳ್ಳುತ್ತಿರುತ್ತಾರೆ, ಆಗ ಅವರು ತಂದೆಯಾಗಲು ಸಾಧ್ಯವಿಲ್ಲ. 

ಆದ್ದರಿಂದ, 25 ರಿಂದ 30 ನೇ ವಯಸ್ಸಿನಲ್ಲಿ ತಂದೆಯಾಗಲು ಆದ್ಯತೆ ನೀಡಬೇಕು. ಏಕೆಂದರೆ ವೈದ್ಯಕೀಯ ವಿಜ್ಞಾನದ ಪ್ರಕಾರ, 25 ವರ್ಷದ ನಂತರ, ವೀರ್ಯಾಣುವಿನ ಚಲನೆ ನಿಧಾನವಾಗಲು ಪ್ರಾರಂಭಿಸುತ್ತೆ. ಕೆರಿಯರ್ ನಲ್ಲಿ(Career) ಸೆಟಲ್ ಆದ ನಂತರ, ನೀವು 30 ರಿಂದ 35 ರ ವಯಸ್ಸಿನ ನಡುವೆ ಪೇರೆಂಟಾಗಲು ನಿರ್ಧರಿಸಬೇಕು ಯಾಕಂದ್ರೆ 30 ರಿಂದ 35 ನೇ ವಯಸ್ಸಿನಲ್ಲಿ, ವೀರ್ಯಾಣುವಿನ ಚಲನೆ ಕಡಿಮೆಯಾಗುತ್ತೆ ಮತ್ತು ವೀರ್ಯಾಣು ಗುಣಮಟ್ಟವು ಹೆಚ್ಚಾಗಿರುತ್ತೆ. 

ಆದರೆ 35 ರ ನಂತರ, ವೀರ್ಯಾಣುವಿನ ಗುಣಮಟ್ಟ ಕಡಿಮೆಯಾಗಲು ಪ್ರಾರಂಭಿಸುತ್ತೆ. ಪುರುಷರು 35 ವರ್ಷದ ನಂತರ ತಂದೆಯಾಗಲು ಸಮಸ್ಯೆ ಹೊಂದಬಹುದು, ಯಾಕಂದ್ರೆ ಈ ವಯಸ್ಸಿನಲ್ಲಿ, ವೀರ್ಯಾಣುಗಳಿಂದ ಎಗ್ ಫರ್ಟೈಲ್(Fertile) ಆಗೋದರಲ್ಲಿ ಸಮಸ್ಯೆ ಆಗುತ್ತೆ. ಆದುದರಿಂದ ಬೇಗನೆ ಮಗು ಪಡೆಯುವ ಬಗ್ಗೆ ಪ್ಲ್ಯಾನ್ ಮಾಡಿದ್ರೆ ಉತ್ತಮ. 

40 ರ ನಂತರ ತಂದೆಯಾದಾಗ ಏನನ್ನು ಗಮನದಲ್ಲಿಟ್ಟುಕೊಳ್ಳಬೇಕು?
ವೃತ್ತಿಜೀವನ ಅಥವಾ ಕುಟುಂಬ ಎಲ್ಲಾ ವಿಷಯದ ಬಗ್ಗೆ ಯೋಚನೆ ಮಾಡಿ, ನೀವು 40 ವರ್ಷದ ನಂತರ ತಂದೆಯಾಗಲು ನಿರ್ಧರಿಸಿದರೆ ಅದರಿಂದ ಸಮಸ್ಯೆ ಖಂಡಿತಾ. ಆರೋಗ್ಯಕರ ಮಗುವಿಗೆ ಜನ್ಮ ನೀಡಲು, ನೀವು ಮೊದಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರ, ಮುಕ್ತ ಮತ್ತು ಸಂತೋಷದಿಂದ(Happy) ಇರುವುದು ಬಹಳ ಮುಖ್ಯ. 

ಈ ವಯಸ್ಸಿನಲ್ಲಿ ತಂದೆಯಾಗುವ ನಿರ್ಧಾರವು ಮಗುವಿನಲ್ಲಿ ಕೆಲವು ವೈದ್ಯಕೀಯ ಸವಾಲು ಉಂಟುಮಾಡಬಹುದು. 40 ವರ್ಷದ ನಂತರ ತಂದೆಯಾಗೋದು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಎರಡನ್ನೂ ಕಡಿಮೆ ಮಾಡುತ್ತೆ ಮತ್ತು ವೀರ್ಯಾಣುವಿನ ಚಲನೆಯನ್ನು ನಿಧಾನಗೊಳಿಸುತ್ತೆ. ಈ ಕಾರಣದಿಂದಾಗಿ, ಗರ್ಭಾವಸ್ಥೆಯಲ್ಲಿ(Pregnancy) ಮೊದಲಿಗೆ ಸಮಸ್ಯೆ ಆಗುತ್ತೆ.

ವೃದ್ಧಾಪ್ಯದ ಕಾರಣದಿಂದಾಗಿ, ವೀರ್ಯದಲ್ಲಿ ಡಿಎನ್ಎ ಹಾನಿಯ ಸಾಧ್ಯತೆ ಹೆಚ್ಚಾಗುತ್ತೆ, ಇದರಿಂದಾಗಿ ಹೆರಿಗೆಯಲ್ಲಿ ಸಮಸ್ಯೆ ಉಂಟಾಗಬಹುದು. ವಯಸ್ಸಾದ ವಯಸ್ಸಿನಲ್ಲಿ ತಂದೆಯಾಗಲು ಪ್ರಯತ್ನಿಸೋದು ಎಡಿಎಚ್ ಡಿ(ADHD), ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್, ಡೌನ್ ಸಿಂಡ್ರೋಮ್, ಸ್ಕಿಜೋಫ್ರೇನಿಯಾ ಮುಂತಾದ ಮಾನಸಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತೆ.
 

Latest Videos

click me!