Brain fog : ಮೆದುಳನ್ನು ಗಂಭೀರವಾಗಿ ಕಾಡೋ ಈ ಸಮಸ್ಯೆಗೆ ಪರಿಹಾರ ಏನು?
First Published | Oct 12, 2022, 4:52 PM ISTನೀವು ಎಂದಾದರೂ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುವ ಅಥವಾ ಅಸ್ಪಷ್ಟವಾದ ಆಲೋಚನೆಯನ್ನು ಹೊಂದಿರುವ ಪರಿಸ್ಥಿತಿಯನ್ನು ಎದುರಿಸಿದ್ದೀರಾ? ಇದು ಬ್ರೈನ್ ಫಾಗ್ ಸಮಸ್ಯೆಯಾಗಿರಬಹುದು. ಈ ಬ್ರೈನ್ ಫಾಗ್ ಒಂದು ವೈದ್ಯಕೀಯ ಸ್ಥಿತಿಯಲ್ಲ, ಬದಲಿಗೆ ವ್ಯಕ್ತಿಯು ಯೋಚಿಸಲು ಕಷ್ಟ, ಒಂದು ವಿಚಾರದ ಮೇಲೆ ಕೇಂದ್ರೀಕರಿಸಲು ಅಸಮರ್ಥತೆ, ತನ್ನ ಆಲೋಚನೆಗಳಿಂದ ಸೂಕ್ತವಾದ ವಾಕ್ಯಗಳನ್ನು ರಚಿಸಲು ಅಸಮರ್ಥನಾಗಿರುವ ಮತ್ತು ನೇರವಾಗಿ ಯೋಚಿಸಲು ಅಸಮರ್ಥರಾಗಿರುತ್ತಾರೆ. ಈ ಸಮಸ್ಯೆಗೆ ಕಳಪೆ ಜೀವನ ಶೈಲಿಯೂ ಕಾರಣವಾಗಿರಬಹುದು.