ನೀವು ಯೋಗ ಮಾಡುವ ಟೈಮ್ ಸರಿ ಇದ್ಯಾ? ಇಲ್ಲಾಂದ್ರೆ ಆರೋಗ್ಯಕ್ಕೆ ಡೇಂಜರ್
First Published | Jun 19, 2022, 11:50 AM ISTಯೋಗ ಪದವು ಸಂಸ್ಕೃತದ 'ಯುಜ್' ದಾತುವಿನಿಂದ ಬಂದಿದೆ, ಇದರರ್ಥ ಸಂಪರ್ಕಿಸೋದು ಅಥವಾ ಎಚ್ಚರಗೊಳ್ಳೋದು. ಯೋಗ ಮಾಡೋದು ಅಂದ್ರೆ ಸುಮ್ನೆ ಅಲ್ಲ, ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಮನಸ್ಸು ನೆಮ್ಮದಿಯಿಂದ ಕೂಡಲು ಯೋಗ ಮಾಡಲಾಗುತ್ತೆ. ಯೋಗ ಇಂದು ನಿನ್ನೆಯದಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ, ಆದರೆ ಅನೇಕ ಬಾರಿ ಜನರಿಗೆ ಯೋಗ ಯಾವಾಗ ಅಭ್ಯಾಸ ಮಾಡಬೇಕು ಎಂಬುದರ ಬಗ್ಗೆ ತಿಳಿದಿರೋದಿಲ್ಲ. ಕೆಲವರು ಬೆಳಿಗ್ಗೆ ಯೋಗ ಮಾಡಲು ಸಜೆಸ್ಟ್ ಮಾಡಿದ್ರೆ, ಇನ್ನೂ ಕೆಲವರು ಸಂಜೆ ಯೋಗ ಮಾಡ್ತಾರೆ.