ನೀವೇನಾದ್ರೂ 2 ದಿನ ಊಟ ಬಿಟ್ಟು, ಬರೀ ನೀರು ಕುಡಿದ್ರೆ ಏನಾಗುತ್ತೆ?

Published : May 14, 2025, 12:13 PM ISTUpdated : May 14, 2025, 12:16 PM IST

ನಾವು ಪ್ರತಿ ದಿನ ಊಟ, ತಿಂಡಿ ಮಾಡುತ್ತೇವೆ. ಆದ್ರೆ 2 ದಿನ ಊಟ ತಿಂಡಿ ಬಿಟ್ಟು, ಬರೀ ನೀರು ಕುಡಿದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಆ ಕುರಿತು ಮಾಹಿತಿ.   

PREV
17
ನೀವೇನಾದ್ರೂ 2 ದಿನ ಊಟ ಬಿಟ್ಟು, ಬರೀ ನೀರು ಕುಡಿದ್ರೆ ಏನಾಗುತ್ತೆ?

ನಾವು ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ ಊಟ ತಿಂಡಿ ಎಲ್ಲವನ್ನೂ ಸರಿಯಾಗಿ ಮಾಡಬೇಕು. ನಾವು ಮಾಡೋ ಊಟ ನಮ್ಮ ಹೊಟ್ಟೆಯನ್ನು ತುಂಬಿಸೋದು ಅಲ್ಲದೇ, ನಮಗೆ ದಿನದ ಕೆಲಸಗಳನ್ನು ಮಾಡಲು ಬೇಕಾದ ಶಕ್ತಿಯನ್ನು ನೀಡುತ್ತೆ.. ನಮ್ಮ ಬೆಳವಣಿಗೆಗೂ ಸಹ ಆಹಾರ ಮುಖ್ಯ. 
 

27

ಕೆಲವರು ವಾರದಲ್ಲಿ ಒಂದು ದಿನ ಉಪವಾಸ (fasting) ಇರುತ್ತಾರೆ. ಇದರಿಂದ ಆರೋಗ್ಯ ಉತ್ತಮವಾಗುತ್ತೆ ಎನ್ನುತ್ತಾರೆ. ಆದರೆ ನೀವು ಎರಡು ದಿನ ಊಟ, ತಿಂಡಿ ಬಿಟ್ಟು, ಕೇವಲ ನೀರು ಕುಡಿದು ಜೀವಿಸಿದ್ರೆ ಏನಾಗುತ್ತೆ ಅನ್ನೋದು ನಿಮಗೆ ಗೊತ್ತಾ? ಆ ಮಾಹಿತಿಯನ್ನು ನಾವಿಂದು ನಿಮಗೆ ಹೇಳ್ತೀವಿ. ಮುಂದೆ ಓದಿ. 
 

37

ನೀವು ಆಹಾರ ಸೇವನೆ ಮಾಡೋದು ಬಿಟ್ಟ 10 ಗಂಟೆಯ ನಂತರ ದೇಹದಲ್ಲಿರುವ ಕೊಬ್ಬು ಕರಗಲು (fat burn) ಶುರುವಾಗುತ್ತೆ. ಇದರಿಂದ ನೀವು ಸ್ಲಿಮ್ ಆಗೋದಂತೂ ಗ್ಯಾರಂಟಿ. 
 

47
Image Credit: Getty Images

ಎರಡು ದಿನ ಆಹಾರ ಸೇವನೆ ಮಾಡದೇ ಇದ್ದರೆ, 16 ಗಂಟೆಯ ನಂತರ ನಮ್ಮ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳು (cancer cells) ಸಾಯೋದಕ್ಕೆ ಶುರುವಾಗುತ್ತಂತೆ. ಅಂದ್ರೆ ಇದರಿಂದ ಕ್ಯಾನ್ಸರ್ ಬರುವ ಅಪಾಯ ಕೂಡ ದೂರವಾಗುತ್ತೆ. 
 

57

24 ಗಂಟೆಯ ನಂತರ ನಿಮ್ಮ ಕರುಳು ಶುದ್ಧವಾಗುತ್ತೆ. ಕರುಳು ಶುದ್ಧವಾಗಿದ್ರೆ ಅಜೀರ್ಣದ ಸಮಸ್ಯೆ (digestion problem) ಇರೋದಿಲ್ಲ. ಇದರಿಂದಾಗಿ ಗ್ಯಾಸ್ಟ್ರಿಕ್, ಆಸಿಡಿಟಿ ಮೊದಲಾದ ಸಮಸ್ಯೆಗಳು ಸಹ ದೂರವಾಗುತ್ತೆ. 
 

67

ಇನ್ನು ಆಹಾರ ಸೇವಿಸದೇ ಪಾನೀಯ ಸೇವಿಸುತ್ತಾ ಇದ್ದರೆ, 36 ಗಂಟೆಯ ನಂತರ ನಿವು ಚುರುಕ್ಕಾಗಿ ಇರೋದಕ್ಕೆ ಸಹಾಯ ಮಾಡುತ್ತೆ, ಅಲ್ಲದೇ ನಿಮ್ಮ ಮೆದುಳು ಸಹ ಹೆಚ್ಚು ಫೋಕಸ್ ಮಾಡುತ್ತೆ. 
 

77

ನೀವು ಆಹಾರ ಬಿಟ್ಟು 48 ಗಂಟೆಯ ನಂತರ ನಿಮ್ಮ ರೋಗ ನಿರೋಧಕ ಶಕ್ತಿ (immunity power) ನಿಜಕ್ಕೂ ಹೆಚ್ಚಾಗುತ್ತದೆ. ಇದರಿಂದ ನೀವು ಯಾವುದೇ ರೋಗ ಬಾರದಂತೆ ನಿಮ್ಮನ್ನು ನೀವು ತಡೆಯಲು ಸಾಧ್ಯವಾಗುತ್ತೆ. 

(ವಿ.ಸೂ : ಈ ಮಾಹಿತಿಯನ್ನು ಇತರ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ನೀವು ಎರಡು ದಿನ ಅನ್ನ ಆಹಾರ ಬಿಟ್ಟು ಪಾನೀಯ ಸೇವಿಸಲು ಬಯಸಿದರೆ, ಮೊದಲು ನಿಮ್ಮ ಆರೋಗ್ಯ ತಜ್ಞರಿಂದ ಸಲಹೆ ಪಡೆಯೋದು ಉತ್ತಮ.)
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories