ಉಪ್ಪಿಲ್ಲದ ಪದಾರ್ಥ ಕಸದ ಬುಟ್ಟಿಗೆ ಅಂತಾರೆ. ಆದ್ರೆ ಇವತ್ತಿನ ಕಾಲದಲ್ಲಿ ಕಸನ ಕಡಿಮೆ ತಿಂದ್ರೆನೇ ಆರೋಗ್ಯ ಚೆನ್ನಾಗಿರುತ್ತೆ. ಕೆಲವರಿಗೆ ಜಾಸ್ತಿ ಉಪ್ಪು ಹಾಕಿದ್ರೆ ಮಾತ್ರ ಊಟ ರುಚಿ ಅನ್ಸುತ್ತೆ. ನೀವು ಸಹ ಅದೇ ಹವ್ಯಾಸದವರಾಗಿದ್ರೆ ಈ ಮಾಹಿತಿ ನಿಮಗಾಗಿಯೇ.
ಜಾಸ್ತಿ ಉಪ್ಪು ತಿಂದ್ರೆ ದೇಹದಲ್ಲಿ ಸೋಡಿಯಂ ಜಾಸ್ತಿ ಆಗುತ್ತೆ. ಇದ್ರಿಂದ ರಕ್ತನಾಳಗಳು ಹಿಗ್ಗಿ ಹೃದಯಕ್ಕೆ ಒತ್ತಡ ಜಾಸ್ತಿ ಆಗುತ್ತೆ. ಇದ್ರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು.
25
ಹೊಟ್ಟೆ ಉಬ್ಬರ
ಜಾಸ್ತಿ ಉಪ್ಪು ತಿಂದ್ರೆ ಹೊಟ್ಟೆ ಉಬ್ಬರಿಸುತ್ತೆ. ದೇಹದಲ್ಲಿ ನೀರು ಜಾಸ್ತಿ ಸೇರಿಕೊಂಡು ಈ ಸಮಸ್ಯೆ ಆಗುತ್ತದೆ. ಆದ್ರಿಂದ ಆಹಾರದಲ್ಲಿ ಉಪ್ಪು ಮಿತವಾಗಿರಬೇಕು ಎಂದು ನೋಡಿಕೊಳ್ಳಬೇಕು.
35
ಬಿಪಿ ಸಮಸ್ಯೆ
ಜಾಸ್ತಿ ಉಪ್ಪು ತಿಂದ್ರೆ ಬಿಪಿ ಜಾಸ್ತಿ ಆಗುತ್ತೆ. ರಕ್ತನಾಳಗಳು ಸಂಕುಚಿತಗೊಂಡು ರಕ್ತ ಸಂಚಾರಕ್ಕೆ ತೊಂದರೆ ಆಗುತ್ತದೆ. ಕೆಲವರಿಗೆ ಊಟ ಮಾಡುವಾಗ ಹೆಚ್ಚು ಉಪ್ಪು ಸೇರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಕೆಟ್ಟ ಅಭ್ಯಾಸವಾಗಿದೆ.
ಜಾಸ್ತಿ ಉಪ್ಪು ತಿಂದ್ರೆ ಕಿಡ್ನಿಗೆ ಒತ್ತಡ ಜಾಸ್ತಿ ಆಗುತ್ತೆ. ಕಿಡ್ನಿ ಸ್ಟೋನ್ ಸಮಸ್ಯೆ ಕೂಡ ಬರಬಹುದು. ಮೂತ್ರಕೋಶದ ತೊಂದರೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭವೂ ಬರುತ್ತದೆ.
55
ಚರ್ಮದ ಸಮಸ್ಯೆ
ಜಾಸ್ತಿ ಉಪ್ಪು ತಿಂದ್ರೆ ಚರ್ಮ ಒಣಗುತ್ತೆ. ಚರ್ಮದ ತೇವಾಂಶ ಕಡಿಮೆ ಆಗುತ್ತದೆ. ಅತಿಯಾದ ಉಪ್ಪು ಸೇವನೆ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.