ಹಾಲು ಪೌಷ್ಟಿಕ ಆಹಾರದ ಅತ್ಯಗತ್ಯ ಭಾಗ. ಬೆಳಗಿನ ಉಪಾಹಾರಕ್ಕಾಗಿ ಟೋಸ್ಟ್ ಮತ್ತು ಬ್ರೆಡ್ ಮೇಲೆ ಹರಡಿದ ಬೆಣ್ಣೆಯಿಂದ ಹಿಡಿದು ಜನರು ಫಿಟ್ ಆಗಿರಲು ಪ್ರತಿದಿನ ಸೇವಿಸುವ ಒಂದು ಲೋಟ ಹಾಲಿನವರೆಗೆ, ಎಲ್ಲವೂ ಲೆಕ್ಕಕ್ಕೆ ಬರುತ್ತದೆ! ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದವರಿಗೆ, ಹಾಲು ಅವರ ದಿನದ ಅಗತ್ಯ ಭಾಗವಾಗಿದೆ, ಮತ್ತು ದಿನಕ್ಕೆ ಎರಡು ಬಾರಿ ಹಾಲು ಕುಡಿಯುವುದು (drinking milk) ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.
2022 ರಲ್ಲಿ, ಭಾರತವು ವಿಶ್ವಾದ್ಯಂತ ಅತಿ ಹೆಚ್ಚು ಹಾಲನ್ನು ಸೇವಿಸಿದ ದೇಶವಾಗಿ ಹೊರಹೊಮ್ಮಿದೆ. ಇದು 85 ಮಿಲಿಯನ್ ಮೆಟ್ರಿಕ್ ಟನ್ ಹಾಲು, ನಂತರ ಯುರೋಪಿಯನ್ ಯೂನಿಯನ್ 23.8 ಮಿಲಿಯನ್ ಮೆಟ್ರಿಕ್ ಟನ್ ಮತ್ತು ಯುನೈಟೆಡ್ ಸ್ಟೇಟ್ಸ್ 20.975 ಮಿಲಿಯನ್ ಮೆಟ್ರಿಕ್ ಟನ್ ಹಾಲು ಸೇವಿಸಿದೆ. ಈ ದತ್ತಾಂಶವು ಜೀವನದಲ್ಲಿ ಹಾಲಿನ ಮಹತ್ವವನ್ನು (importance of Milk) ತೋರಿಸುತ್ತದೆ.
ಹೀಗಾಗಿ, ಹಾಲು ಮತ್ತು ಜನರ ಜೀವನದಲ್ಲಿ ಹಾಲಿನ ಪ್ರಾಮುಖ್ಯತೆಯನ್ನು ಆಚರಿಸಲು, ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು (world milk day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸದ ಬಗ್ಗೆ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
ವಿಶ್ವ ಹಾಲು ದಿನದ ಇತಿಹಾಸ (History of World Milk Day)
2001 ರಲ್ಲಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆರಂಭಿಸಿತು. ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಮತ್ತು ಡೈರಿ ಕ್ಷೇತ್ರ ಮತ್ತು ಅದರ ನಿರಂತರ ಪ್ರಯತ್ನಗಳನ್ನು ಆಚರಿಸಲು ಈ ದಿನವನ್ನು ಆಚರಿಸಲಾಗಿದೆ.
ವಿಶ್ವ ಹಾಲು ದಿನವನ್ನು ಆಚರಿಸುವ ದಿನಾಂಕವಾಗಿ ಜೂನ್ 1 ಅನ್ನು ಆಯ್ಕೆ ಮಾಡಲು ಕಾರಣವೆಂದರೆ ಅನೇಕ ದೇಶಗಳು ಈಗಾಗಲೇ ವರ್ಷದ ಈ ಸಮಯದಲ್ಲಿ ತಮ್ಮ ರಾಷ್ಟ್ರೀಯ ಹಾಲಿನ ದಿನಗಳನ್ನು ಆಚರಿಸುತ್ತಿವೆ. ಆರಂಭದಲ್ಲಿ, ಮೇ ಕೊನೆಯಲ್ಲಿ ಕೆಲವು ದಿನಾಂಕವನ್ನು ಆಚರಿಸಲು ಸಲಹೆ ನೀಡಲಾಯಿತು ಆದರೆ ಅಂತಿಮವಾಗಿ, ಜೂನ್ 1 ಎಲ್ಲದಕ್ಕೂ ಸಂಬಂಧಿಸಿದಂತೆ ಅತ್ಯಂತ ಅನುಕೂಲಕರವಾಗಿತ್ತು.
ವಿಶ್ವ ಹಾಲು ದಿನದ ಮಹತ್ವ (Importance of Milk Day)
ವಿಶ್ವ ಹಾಲು ದಿನವು ಜನರಿಗೆ ಹಾಲಿನ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತಮ ಮತ್ತು ಆರೋಗ್ಯಕರ ಆಹಾರದ ಅತ್ಯಂತ ಅಗತ್ಯವಾದ ಭಾಗದತ್ತ ಜನರ ಗಮನವನ್ನು ಸೆಳೆಯಲು ನಮಗೆ ಅವಕಾಶವನ್ನು ಒದಗಿಸುತ್ತದೆ.
ತಮ್ಮ ನಿರಂತರ ಪ್ರಯತ್ನದಿಂದ ವಿಶ್ವದ ಪ್ರತಿಯೊಂದು ಮನೆಗೂ ಹಾಲನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಹಾಲು ವಲಯದ ಕಾರ್ಮಿಕರು ಮತ್ತು ಡೈರಿಗಳನ್ನು ಸೆಲೆಬ್ರೆಟ್ ಮಾಡುವ ಸಲುವಾಗಿ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಅಂಕಿಅಂಶಗಳ ಪ್ರಕಾರ, ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜೀವನೋಪಾಯವನ್ನು ಡೈರಿ ಕ್ಷೇತ್ರವು ನೋಡಿಕೊಳ್ಳುತ್ತದೆ ಮತ್ತು ಜಾಗತಿಕವಾಗಿ ಆರು ಶತಕೋಟಿಗೂ ಹೆಚ್ಚು ಜನರು ಹೈನುಗಾರಿಕೆ ಮಾಡುತ್ತಿದ್ದಾರೆ.
ವಿಶ್ವ ಹಾಲು ದಿನದ ಥೀಮ್ ಮತ್ತು ಆಚರಣೆ
2023 ರ ವಿಶ್ವ ಹಾಲು ದಿನದ ಥೀಮ್ ಇಂಗಾಲವನ್ನು ಕಡಿಮೆ ಮಾಡುವಲ್ಲಿ ಡೈರಿಯ ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪೌಷ್ಟಿಕ ಆಹಾರ ಮತ್ತು ಜೀವನೋಪಾಯವನ್ನು ಒದಗಿಸುವುದು. ವಿಶ್ವ ಹಾಲು ದಿನದ ಆಚರಣೆಯು ಜನರ ಜೀವನದಲ್ಲಿ ಹಾಲಿನ ಮಹತ್ವವನ್ನು ತೋರಿಸುವ ವಿಶ್ವದಾದ್ಯಂತ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳು, ಚಟುವಟಿಕೆಗಳು, ಸೆಮಿನಾರ್ಸ್ ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಆಚರಣೆಗಳನ್ನು #WorldMilkDay ಮತ್ತು #EnjoyDairy ಹ್ಯಾಶ್ಟ್ಯಾಗ್ಗಳ ಮೂಲಕವೂ ನಡೆಸಲಾಗುತ್ತದೆ.