ಇತ್ತೀಚಿನ ದಿನಗಳಲ್ಲಿ, ವೇಗದ ಜೀವನ ಮತ್ತು ಕೆಲಸದ ಹೊರೆಯಿಂದಾಗಿ ಒತ್ತಡವು ಸಾಮಾನ್ಯ ಸಮಸ್ಯೆಯಾಗುತ್ತಿದೆ. ಒತ್ತಡವು (stress) ದೇಹ ಹಾಗೂ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಆಯಾಸ (Tiredness), ಸ್ನಾಯು ನೋವು (Muscle Pain), ಎದೆ ನೋವು (Heart Pain), ಲೈಂಗಿಕ ಆರೋಗ್ಯದ (Sexual Health) ಮೇಲೆ ಕೆಟ್ಟ ಪರಿಣಾಮ, ಏಕಾಗ್ರತೆಯ ಕೊರತೆ, ಹಸಿವಾಗದಿರುವುದು, ಕೋಪ, ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.