ಹೃದಯಾಘಾತ , ಹೃದಯ ಸ್ತಂಭನವನ್ನು ತಪ್ಪಿಸಲು ಜಿಮ್ ಮೊದಲು ಹೀಗ್ ಮಾಡಿ

First Published | May 31, 2023, 1:04 PM IST

ಜನರು ಹೆಚ್ಚಾಗಿ ತಮ್ಮ ದೇಹವನ್ನು ಬಲಪಡಿಸಲು ಜಿಮ್ ಗೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಿಮ್ ಸಮಯದಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ಘಟನೆಗಳು ಸಂಭವಿಸಿವೆ. ಇದನ್ನು ತಪ್ಪಿಸಲು, ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. 

ಇತ್ತೀಚಿನ ದಿನಗಳಲ್ಲಿ, ಹಠಾತ್ ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನದ (Heart attack and Cardiac Arrest) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಪ್ರಕರಣಗಳು ಕಳವಳಕಾರಿ. ಏಕೆಂದರೆ ಯುವಕರೇ ಅವುಗಳಿಗೆ ಹೆಚ್ಚು ಗುರಿಯಾಗುತ್ತಾರೆ. 30 ರಿಂದ 50 ವರ್ಷದೊಳಗಿನ ಜನರು ಹೃದಯ ಸ್ತಂಭನ ಮತ್ತು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯವಂತ ವ್ಯಕ್ತಿಯು ಜಿಮ್ ಅಥವಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಹೃದಯ ಸ್ತಂಭನಕ್ಕೆ ಬಲಿಯಾದ ಕೆಲವು ಪ್ರಕರಣಗಳಿವೆ. ಇಂತಹ ಪ್ರಕರಣಗಳ ಹಿಂದೆ ಅನೇಕ ಕಾರಣಗಳಿರಬಹುದು. ಆದಾಗ್ಯೂ, ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ನೀವು ಜಿಮ್ ಗೆ ಹೋದರೆ, ಕೆಲವು ವಿಷಯಗಳ ಬಗ್ಗೆ ಗಮನ ಹರಿಸೋದ್ರಿಂದ ಹೃದಯಾಘಾತ ಸಮಸ್ಯೆ ನಿವಾರಿಸಬಹುದು.

ಜಿಮ್‌ಗೆ ಹೋಗೋ ಮುನ್ನ ಈ ವಿಷಯ ನೆನಪಿನಲ್ಲಿಡಿ
ನಿಯಮಿತವಾಗಿ ವ್ಯಾಯಾಮ (regular exercise) ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರುತ್ತೆ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ತಜ್ಞರ ಪ್ರಕಾರ, ದೈನಂದಿನ ವ್ಯಾಯಾಮ ಹೃದ್ರೋಗಗಳನ್ನು ದೂರವಿರಿಸುತ್ತದೆ. ಆದಾಗ್ಯೂ, ನೀವು ವೈದ್ಯಕೀಯವಾಗಿ ಸದೃಢವಾಗಿಲ್ಲದಿದ್ದರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. 

Tap to resize

ಹೃದ್ರೋಗದ (heart problem) ಬಗ್ಗೆ ನಿಮ್ಮ ವೈದ್ಯರು ನಿಮಗೆ ಸಲಹೆ ನೀಡಿದ್ದರೆ, ಅದಕ್ಕೆ ಅನುಗುಣವಾಗಿ ನೀವು ಜಿಮ್ ಮಾಡಬೇಕು. ಹೃದ್ರೋಗದಿಂದ ಬಳಲುತ್ತಿರುವ ಜನರು ಪ್ರತಿದಿನ ಜಿಮ್ ಅಥವಾ ವ್ಯಾಯಾಮ ಸಹ ಮಾಡಬಹುದು, ಇದಕ್ಕಾಗಿ ಅವರು ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಹಾಗಿದ್ರೆ ಹೃದಯಾಘಾತ ತಪ್ಪಿಸಲು ಏನು ಮಾಡಬೇಕು ನೋಡೋಣ…

ಇದ್ದಕ್ಕಿದ್ದಂತೆ ಭಾರಿ ವ್ಯಾಯಾಮ ಮಾಡಬೇಡಿ - ದೀರ್ಘಕಾಲದವರೆಗೆ ವ್ಯಾಯಾಮ ಮಾಡದೇ ಇದ್ದು, ಇದ್ದಕ್ಕಿದ್ದಂತೆ ಭಾರಿ ವ್ಯಾಯಾಮ (heavy exercise) ಮಾಡೋದನ್ನು ತಪ್ಪಿಸಬೇಕು. ಅದೇ ಸಮಯದಲ್ಲಿ, ನೀವು ಇತ್ತೀಚೆಗೆ ಯಾವುದೇ ರೀತಿಯ ಹೃದಯ ಸಂಬಂಧಿತ ಸಮಸ್ಯೆಯನ್ನು ಹೊಂದಿದ್ದರೆ, ಜಿಮ್ ನಿಂದ ದೂರವಿರಬೇಕು ಅಥವಾ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು

ಸಾಮಾನ್ಯ ವ್ಯಾಯಾಮದೊಂದಿಗೆ ಪ್ರಾರಂಭಿಸಿ - ಎಲ್ಲಾ ಜನರ ಆರೋಗ್ಯ ಸ್ಥಿತಿ ಒಂದೇ ಆಗಿರುವುದಿಲ್ಲ, ಆದ್ದರಿಂದ ಯಾವ ರೀತಿಯ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಮತ್ತು ಜಿಮ್ ತರಬೇತುದಾರರನ್ನು ಸಂಪರ್ಕಿಸಲು ಮರೆಯದಿರಿ. ನೀವು ಹೊಸಬರಾಗಿದ್ದರೆ ಮತ್ತು ಜಿಮ್ ಪ್ರಾರಂಭಿಸಲು ಹೊರಟಿದ್ದರೆ, ತುಂಬಾ ಹಗುರ ಮತ್ತು ಸಾಮಾನ್ಯ ವ್ಯಾಯಾಮದಿಂದ ಪ್ರಾರಂಭಿಸಬೇಕು. ಜಿಮ್ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ತಕ್ಷಣ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಕು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 

ಜಿಮ್ಮಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತವನ್ನು ತಪ್ಪಿಸುವುದು ಹೇಗೆ?
ಜಿಮ್ ನಲ್ಲಿ ವ್ಯಾಯಾಮ ಮಾಡಿದರೆ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ, ಜಿಮ್ಮಲ್ಲಿ ವ್ಯಾಯಾಮ ಮಾಡಲು ಮತ್ತು ನಿಮ್ಮ ಹೃದಯ ರಕ್ಷಿಸಲು ಏನು ಮಾಡಬೇಕೆಂದು ಅನ್ನೋದನ್ನು ತಿಳಿಯಿರಿ.

ನೀವು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ನೀವು ಜಿಮ್‌ಗೆ ಹೋಗಲು ಪ್ರಾರಂಭಿಸುತ್ತಿದ್ದರೆ, ಮೊದಲು ಹೃದ್ರೋಗ ತಜ್ಞರಿಂದ (heart expert) ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಅಥವಾ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
 

ವರ್ಕ್ ಔಟ್ ಮಾಡುವಾಗ ನಿಮಗೆ ಎದೆ ನೋವು ಇದ್ದರೆ ಅಥವಾ ಉಸಿರಾಟದ ತೊಂದರೆ (breathing problem) ಅಥವಾ ಲಘು ತಲೆನೋವು ಅನುಭವಿಸಿದರೆ, ನೀವು ನಿಲ್ಲಿಸಿ ನಿಮ್ಮ ವೈದ್ಯರನ್ನು ನೋಡಬೇಕು. ವೈದ್ಯರ ಸಲಹೆಯ ಮೇರೆಗೆ ಮಾತ್ರ ತಾಲೀಮು ಪ್ರಾರಂಭಿಸಬೇಕು.

ಯಾವುದೇ ರೀತಿಯ  ಹೆವಿ ವ್ಯಾಯಾಮವನ್ನು ಹೆಚ್ಚಾಗಿ ಮಾಡಬೇಡಿ. ಅಲ್ಲದೇ ಹೃದಯಾಘಾತದ ಅಪಾಯ ಕಡಿಮೆ ಮಾಡಲು ಮಧ್ಯಮ ವ್ಯಾಯಾಮವು ಸಾಕಷ್ಟು ಒಳ್ಳೆಯದು. ವ್ಯಾಯಾಮಗಳನ್ನು ಸಮತೋಲಿತ ರೀತಿಯಲ್ಲಿ ಮಾಡಬೇಕು.

ವ್ಯಾಯಾಮದ ಸಮಯದಲ್ಲಿ ನಿಮ್ಮನ್ನು ಸರಿಯಾಗಿ ಹೈಡ್ರೇಟ್ ಆಗಿರಿಸಿಕೊಳ್ಳಿ ಮತ್ತು ಪೂರ್ಣ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದನ್ನು ತಪ್ಪಿಸಿ. ಇದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ತುಂಬಾನೆ ಕಡಿಮೆ ಆಗುತ್ತೆ, ಅನ್ನೋದನ್ನು ನೆನಪಿನಲ್ಲಿಡಿ. 

Latest Videos

click me!