ಫಳ ಫಳ ಹೊಳೆಯುವ ಆಕರ್ಷಕ ತ್ವಚೆ ನಿಮ್ಮದಾಗಿಸಲು ಪಪ್ಪಾಯ ಫೇಸ್‌ಮಸ್ಕ್‌ ಹೀಗೆ ಬಳಸಿ

ಬೇಸಿಗೆಯಲ್ಲಿ ಮುಖ ಹೊಳೆಯಲು ಪಪ್ಪಾಯಿಯನ್ನು ಬಳಸಿ ಈ ಫೇಸ್ ಪ್ಯಾಕ್‌ಗಳನ್ನು ಮನೆಯಲ್ಲೇ  ಮಾಡಿ ಟ್ರೈ ಮಾಡಿ ನೋಡಿ.

use homemade papaya face mask to get radiant attractive skin

ಮುಖದ ಹೊಳಪಿಗಾಗಿ ಮನೆಯಲ್ಲಿ ತಯಾರಿಸಿದ ಪಪ್ಪಾಯಿ ಫೇಸ್ ಪ್ಯಾಕ್  : ಪಪ್ಪಾಯಿ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಒಂದು. ಇದರಲ್ಲಿ ಫೈಬರ್, ವಿಟಮಿನ್ ಬಿ ಮತ್ತು ಅನೇಕ ಪೋಷಕಾಂಶಗಳಿವೆ. ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚರ್ಮದ ಆರೋಗ್ಯದ ಬಗ್ಗೆ ಹೇಳುವುದಾದರೆ, ಪಪ್ಪಾಯಿ ಚರ್ಮಕ್ಕೂ ಒಳ್ಳೆಯದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮವನ್ನು ಯೌವನವಾಗಿ ಮತ್ತು ಹೊಳೆಯುವಂತೆ ಇಡಲು ಸಹಾಯ ಮಾಡುತ್ತದೆ.

use homemade papaya face mask to get radiant attractive skin

ಪಪ್ಪಾಯಿಯನ್ನು ತಿನ್ನುವುದರ ಜೊತೆಗೆ ಅದನ್ನು ಫೇಸ್ ಪ್ಯಾಕ್ ಆಗಿ ಮುಖಕ್ಕೆ ಹಾಕಬಹುದು. ಪಪ್ಪಾಯಿ ಫೇಸ್ ಪ್ಯಾಕ್ ಚರ್ಮಕ್ಕೆ ಹೊಳಪನ್ನು ನೀಡುವುದಲ್ಲದೆ, ಸತ್ತ ಜೀವಕೋಶಗಳನ್ನು ತೆಗೆದುಹಾಕಲು, ರಂಧ್ರಗಳನ್ನು ತೆರೆಯಲು ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈಗ ಮನೆಯಲ್ಲಿ ತಯಾರಿಸಿದ ಕೆಲವು ಪಪ್ಪಾಯಿ ಫೇಸ್ ಪ್ಯಾಕ್‌ಗಳ ಬಗ್ಗೆ ಇಲ್ಲಿ ನೋಡೋಣ. 


ಪಪ್ಪಾಯಿ ಮತ್ತು ಅರಿಶಿನ ಫೇಸ್ ಪ್ಯಾಕ್:

ಪಪ್ಪಾಯಿ ಮತ್ತು ಅರಿಶಿನ ಫೇಸ್ ಪ್ಯಾಕ್ ತಯಾರಿಸಲು, ಒಂದು ಬಟ್ಟಲಿನಲ್ಲಿ ಪಪ್ಪಾಯಿಯನ್ನು ಮ್ಯಾಶ್ ಮಾಡಿ. ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಉತ್ತಮ ಬದಲಾವಣೆಗಳನ್ನು ಕಾಣಬಹುದು.

ಪಪ್ಪಾಯಿ ಮತ್ತು ಶ್ರೀಗಂಧದ ಫೇಸ್ ಪ್ಯಾಕ್:

ಈ ಫೇಸ್ ಪ್ಯಾಕ್ ತಯಾರಿಸಲು, ಒಂದು ಬಟ್ಟಲಿನಲ್ಲಿ ಪಪ್ಪಾಯಿಯನ್ನು ಮ್ಯಾಶ್ ಮಾಡಿ. ಅದಕ್ಕೆ ಶ್ರೀಗಂಧದ ಪುಡಿ, ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ದಪ್ಪ ಪೇಸ್ಟ್ ರೀತಿ ತಯಾರಿಸಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಹಾಗೆಯೇ ಇಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಬಾಳೆಹಣ್ಣು, ಸೌತೆಕಾಯಿ ಮತ್ತು ಪಪ್ಪಾಯಿ ಫೇಸ್ ಪ್ಯಾಕ್:

ಸೌತೆಕಾಯಿ ಮತ್ತು ಬಾಳೆಹಣ್ಣು ಚರ್ಮವನ್ನು ತೇವಾಂಶದಿಂದ ಇಡುತ್ತದೆ.   ಸೌತೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಪ್ಪಾಯಿ ಮತ್ತು ಬಾಳೆಹಣ್ಣಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ರೀತಿ ತಯಾರಿಸಿ. ಆ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು. 15 ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ.

Latest Videos

vuukle one pixel image
click me!