ನಿಮಗೆ ಪದೇ ಪದೇ ಆಕಳಿಕೆ ಬರುತ್ತಿದೆಯೇ? ಇದು ಒಳ್ಳೆ ಲಕ್ಷಣವಲ್ಲ, ಅಪಾಯದ ಸಂಕೇತ

ಅತಿಯಾದ ಆಕಳಿಕೆ ಕೇವಲ ನಿದ್ರೆಯ ಕೊರತೆಯಲ್ಲ, ಇದು ಹೃದಯ ರೋಗದ ಮುನ್ಸೂಚನೆಯೂ ಆಗಿರಬಹುದು. ನರಗಳ ತೊಂದರೆ, ಹೃದಯದ ಸಮಸ್ಯೆ ಅಥವಾ ಪಾರ್ಶ್ವವಾಯು ಕಾರಣದಿಂದಲೂ ಪದೇ ಪದೇ ಆಕಳಿಕೆ ಬರಬಹುದು. ಆದ್ದರಿಂದ, ಈ ಲಕ್ಷಣ ಕಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Do you yawn frequently It is a warning of some health issues

ಆಕಳಿಕೆ ಏಕೆ ಬರುತ್ತದೆ ಎಂಬುದರ ಬಗ್ಗೆ ಒಂದೊಂದು ರೀತಿಯ ಅಭಿಪ್ರಾಯಗಳಿವೆ. ನಮಗೆ ನಿದ್ರೆ ಬಂದಾಗ ಆಕಳಿಕೆ ಬರುತ್ತದೆ ಅಷ್ಟೇ ಅಲ್ವಾ?

ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತುಕೊಂಡು, ಬಸ್ಸು-ಟ್ರೇನುಗಳಲ್ಲಿ ಪ್ರಯಾಣಿಸುವಾಗಲೂ ಆಕಳಿಕೆ ಬರುತ್ತಿದೆಯೇ? ಇದು ಹೃದಯ ರೋಗದ ಮುನ್ಸೂಚನೆಯಾಗಿರಬಹುದು!


ದೇಹವು ತುಂಬಾ ಸುಸ್ತಾಗಿದ್ದರೆ ಅಥವಾ ಚೆನ್ನಾಗಿ ನಿದ್ರೆ ಮಾಡದಿದ್ದರೆ ಪದೇ ಪದೇ ಆಕಳಿಕೆ ಬರುವುದು ಸಹಜ. ಆದರೆ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡರೂ ಆಕಳಿಕೆ ಬರುತ್ತಿದ್ದರೆ ಗಂಭೀರ ಸಮಸ್ಯೆ ಇದೆ ಎಂದೇ ಅರ್ಥ.

ಯಾವ ಕಾರಣಗಳಿಂದ ಪದೇ ಪದೇ ಆಕಳಿಕೆ ಬರಬಹುದು ಎಂದು ಸಂಶೋಧಕರು ಹೇಳುತ್ತಾರೆ? ನರಗಳ ಸಮಸ್ಯೆ ಹೆಚ್ಚಾದರೆ ಅತಿಯಾಗಿ ಆಕಳಿಕೆ ಬರಬಹುದು.

ಪಾರ್ಶ್ವವಾಯುವಿಗೆ ಮುಂಚೆ ಮತ್ತು ನಂತರ ಅನೇಕರಿಗೆ ಅಸಹಜವಾಗಿ ಆಕಳಿಕೆ ಬರುತ್ತದೆ. ಹೀಗಾಗಿ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಹೀಗಾಗಿ ಪದೇ ಪದೇ ಆಕಳಿಕೆ ಬರುತ್ತಿದ್ದರೆ ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡುವುದರಿಂದ ಕೊಲೆಸ್ಟ್ರಾಲ್ ಸಾಮಾನ್ಯಕ್ಕಿಂತ ಹೆಚ್ಚಿದೆಯೇ ಎಂದು ತಿಳಿಯಬಹುದು.

ಅಲ್ಲದೇ ಪದೇ ಪದೇ ಆಕಳಿಸುವುದರಿಂದ ಹೃದ್ರೋಗ ಎಂದರೆ ಎದೆ ನೋವು, ತಲೆತಿರುಗುವಿಕೆ, ಪ್ರಜ್ಞಾಹೀನತೆ ಮುಂತಾದ ರೋಗಗಳ ಮುನ್ಸೂಚನೆಯೂ ಇದು ಆಗಿರಬಹುದು.

ಹೀಗಾಗಿ ನಿರಂತರ ಆಕಳಿಕೆ ಬಂದರೆ ನಿರ್ಲಕ್ಷಿಸಬೇಡಿ. ಇತ್ತೀಚಿನ ದಿನಗಳಲ್ಲಿ 30 ರಿಂದ 40 ವರ್ಷ ವಯಸ್ಸಿನವರೇ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.

ಹೀಗಾಗಿ ಚೆನ್ನಾಗಿ ನಿದ್ದೆ ಮಾಡಿದ ನಂತರವೂ ದೇಹವು ಸುಸ್ತಾಗದಿದ್ದರೂ ಆಕಳಿಕೆ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರ ಬಳಿ ಹೋಗುವುದು ಒಳ್ಳೆಯದು.

Latest Videos

tags
vuukle one pixel image
click me!