ಒಂದೇ ಒಂದು ಮುಳ್ಳಿಲ್ಲದ ಈ 5 ಮೀನನ್ನ ತಿಂದ್ರೆ ಮಕ್ಕಳು ಮಾತ್ರವಲ್ಲ, ಹಿರಿಯರ ಆರೋಗ್ಯವೂ ಸೂಪರೋ ಸೂಪರ್

Published : Sep 16, 2025, 11:06 AM IST

Top Fish For Toddlers: ಬಹುತೇಕರಿಗೆ ತಿಳಿದಿರುವಂತೆ ಕೆಲವು ರೀತಿಯ ಮೀನುಗಳಲ್ಲಿ ಮುಳ್ಳುಗಳಿರಲ್ಲ ಅಥವಾ ಬಹಳ ಕಡಿಮೆ ಮುಳ್ಳುಗಳಿರುತ್ತವೆ. ಹಾಗಾದರೆ ಬನ್ನಿ, ಮುಳ್ಳುಗಳಿಲ್ಲದ, ನಮ್ಮ ಆರೋಗ್ಯಕ್ಕೂ ಬಹಳ ಒಳ್ಳೆಯದಾಗಿರುವ ಆ 5 ಮೀನುಗಳು ಯಾವುವು ಎಂದು ನೋಡೋಣ..

PREV
18
ಮೀನಿನಲ್ಲಿರುವ ಪೋಷಕಾಂಶಗಳು

ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ

ಚಿಕನ್, ಮಟನ್ ಇಲ್ದೆ ಇದ್ರು ಪರವಾಗಿಲ್ಲ, ನಮಗೆ ಮೀನು ಬೇಕೆ ಬೇಕು ಎನ್ನುವ ಜನರು ನಮ್ಮ ಮಧ್ಯೆ ಇದ್ದಾರೆ. ಹೌದು. ನಮ್ಮಲ್ಲಿ ಅನೇಕ ಜನರಿಗೆ ಮೀನು ಅಂದ್ರೆ ಪಂಚಪ್ರಾಣ. ಅಂದಹಾಗೆ ಮೀನಿನಲ್ಲಿ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಇವು ವಿಶೇಷವಾಗಿ ಮುಖ್ಯವಾಗಿವೆ.

28
ಬಹಳ ಕಡಿಮೆ ಮುಳ್ಳುಗಳಿರುತ್ತವೆ

ಆ 5 ಮೀನುಗಳು ಯಾವುವು?
 

ಮಕ್ಕಳ ಆರೋಗ್ಯಕ್ಕೆ ಮೀನು ಒಳ್ಳೆಯದಾದರೂ ಇದನ್ನು ತಿನ್ನಲು ಹೆದರುತ್ತಾರೆ. ಏಕೆಂದರೆ ಅವುಗಳಲ್ಲಿ ಹೆಚ್ಚಾಗಿ ಮುಳ್ಳುಗಳಿರುತ್ತವೆ. ಆದ್ದರಿಂದ ಮುಳ್ಳುಗಳಿಲ್ಲದ ಮೀನು ತಿನ್ನುವುದು ಉತ್ತಮ. ಬಹುತೇಕರಿಗೆ ತಿಳಿದಿರುವಂತೆ ಕೆಲವು ರೀತಿಯ ಮೀನುಗಳಲ್ಲಿ ಮುಳ್ಳುಗಳಿರಲ್ಲ ಅಥವಾ ಬಹಳ ಕಡಿಮೆ ಮುಳ್ಳುಗಳಿರುತ್ತವೆ. ಹಾಗಾದರೆ ಬನ್ನಿ, ಮುಳ್ಳುಗಳಿಲ್ಲದ, ನಮ್ಮ ಆರೋಗ್ಯಕ್ಕೂ ಬಹಳ ಒಳ್ಳೆಯದಾಗಿರುವ ಆ 5 ಮೀನುಗಳು ಯಾವುವು ಎಂದು ನೋಡೋಣ..

38
ಟ್ಯೂನ (Tuna Fish)

ಟ್ಯೂನ ಮೀನಿನಲ್ಲಿ ಕಡಿಮೆ ಕೊಬ್ಬಿರುತ್ತದೆ. ಇದು ರುಚಿಕರವಾಗಿರುವುದಲ್ಲದೆ ಪ್ರೋಟೀನ್, ವಿಟಮಿನ್ ಡಿ ಮತ್ತು ಒಮೆಗಾ-3 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಸ್ಟೀಕ್ ಕಟ್ಸ್ ಅಥವಾ ಡಬ್ಬಿಯಲ್ಲಿಯೂ ಲಭ್ಯವಿದೆ. ನೀವಿದನ್ನು ಸಲಾಡ್ ಮತ್ತು ಸ್ಯಾಂಡ್‌ವಿಚ್‌ಗಳಲ್ಲಿ ಬಳಸಬಹುದು.

48
ಡೋರಿ ಮೀನು (Dory Fish)

ಡೋರಿ ಮೀನು ತುಂಬಾ ಮೃದುವಾಗಿರುತ್ತದೆ. ರುಚಿಯಲ್ಲಿಯೂ ಅಷ್ಟೇ ಸೌಮ್ಯವಾಗಿರುತ್ತದೆ. ವಿಶೇಷವಾಗಿ ಮಕ್ಕಳು ಇದನ್ನು ಬಹಳ ಇಷ್ಟಪಡ್ತಾರೆ. ಇದು ಫಿಲೆಟ್ ರೂಪದಲ್ಲಿ ಲಭ್ಯವಿದೆ. ಡೋರಿ ಮೀನು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನಂಶವನ್ನು ಹೊಂದಿರುತ್ತದೆ. ಇದನ್ನು ಬ್ರೆಡ್ ಜೊತೆಗೆ, ಗ್ರಿಲ್ ಮಾಡಿದ ಫಿಲೆಟ್ ಅಥವಾ ಬೆಣ್ಣೆ ಸಾಸ್ ನೊಂದಿಗೆ ಬೇಯಿಸಿ ತಿನ್ನಬಹುದು.

58
ಗ್ರೂಪರ್ (Grouper Fish)

ಗ್ರೂಪರ್ ಮೀನಿನಲ್ಲಿ ಮುಳ್ಳುಗಳು ಬಹಳ ಕಡಿಮೆ. ಇದರ ಮಾಂಸ ತುಂಬಾ ದಪ್ಪ ಮತ್ತು ಕೋಮಲವಾಗಿರುತ್ತದೆ. ನೀವು ಇದರಿಂದ ಮೀನಿನ ಸೂಪ್ ಮತ್ತು ಫ್ರೈಗಳನ್ನು ಮಾಡಬಹುದು. ಗ್ರೂಪರ್ ನಲ್ಲಿ ಸೆಲೆನಿಯಮ್ ಮತ್ತು ಮೆಗ್ನಿಶಿಯಂನಂತಹ ಖನಿಜಗಳು ಸಮೃದ್ಧವಾಗಿವೆ. ಇವು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.

68
ಸಾಲ್ಮನ್ (Salmon Fish)

ಇದು ಬಹಳ ಜನಪ್ರಿಯ ಮೀನು. ಜೊತೆಗೆ ಬಹಳ ಕಡಿಮೆ ಮುಳ್ಳುಗಳನ್ನು ಹೊಂದಿರುತ್ತದೆ. ಇದರ ರುಚಿ ಅದ್ಭುತವಾಗಿದೆ. ಸಾಲ್ಮನ್ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಮಕ್ಕಳ ಮೆದುಳಿನ ಬೆಳವಣಿಗೆಗೆ ಇವು ಬಹಳ ಮುಖ್ಯ. ಇದು ಫಿಲೆಟ್ ರೂಪದಲ್ಲಿ ಲಭ್ಯವಿದೆ. ಸೂಪ್, ಗ್ರಿಲ್ಲಿಂಗ್, ಮೀನಿನ ಗಟ್ಟಿಗಳನ್ನು ಇದರಿಂದ ಸುಲಭವಾಗಿ ತಯಾರಿಸಬಹುದು.

78
ಸ್ನ್ಯಾಪರ್(Snapper Fish)

ಸ್ನ್ಯಾಪರ್ ಮೀನುಗಳು ದೊಡ್ಡ ಮುಳ್ಳುಗಳನ್ನು ಹೊಂದಿದ್ದು ಅವುಗಳನ್ನು ಸುಲಭವಾಗಿ ತೆಗೆಯಬಹುದು. ಕೆಂಪು ಸ್ನ್ಯಾಪರ್ ಮತ್ತು ಬಿಳಿ ಸ್ನ್ಯಾಪರ್ ತುಂಬಾ ರುಚಿಕರವಾಗಿರುತ್ತವೆ. ಇವು ವಿಟಮಿನ್ ಬಿ6, ರಂಜಕ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ.

88
ಸಲಹೆ

*ಮೀನು ಖರೀದಿಸುವಾಗ ಅದು ತಾಜಾವಾಗಿದೆಯೇ ಎಂದು ನೋಡಿ ಖರೀದಿಸಿ. ತಾಜಾ ಮೀನುಗಳು ಸ್ಪಷ್ಟವಾದ ಕಣ್ಣುಗಳು ಮತ್ತು ಕೆಂಪು ಕಿವಿರುಗಳನ್ನು ಹೊಂದಿರುತ್ತವೆ. ಅದು ಯಾವುದೇ ಕೆಟ್ಟ 
ವಾಸನೆಯನ್ನು ಹೊಂದಿರುವುದಿಲ್ಲ.
*ಮೀನಿನ ರುಚಿ ಹೆಚ್ಚಿಸಲು ಸರಳವಾದ ಮಸಾಲೆಗಳನ್ನು ಬಳಸಿ. ನಿಂಬೆ ರಸ, ಶುಂಠಿ ಮತ್ತು ಬೆಳ್ಳುಳ್ಳಿ ಸಾಕು. ಇವು ರುಚಿಗೆ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

Read more Photos on
click me!

Recommended Stories