ಈ ಮೂರನ್ನ ಎಣ್ಣೇಲಿ ಬೆರೆಸಿ ಹಚ್ಚಿದ್ರೆ ಮೊಣಕಾಲು ನೋವು ಬೇಗ ಕಡಿಮೆಯಾಗುತ್ತೆ ಎಂದ ಪೌಷ್ಟಿಕ ತಜ್ಞೆ

Published : Aug 16, 2025, 11:55 AM IST

ನೈಸರ್ಗಿಕವಾಗಿ ಕೀಲು ನೋವಿನಿಂದ ಪರಿಹಾರ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ..

PREV
18

Knee Treatment: ಮೊಣಕಾಲು ಅಥವಾ ಕೀಲು ನೋವು ವಯಸ್ಸಾದವರಿಗೆ ಮಾತ್ರವಲ್ಲದೆ, ಯುವಕರಿಗೂ ತೊಂದರೆಯುಂಟು ಮಾಡುತ್ತಿದೆ. ಜೀವನಶೈಲಿ ಸರಿಯಾಗಿರದಿದ್ದರೆ, ಕುಳಿತುಕೊಂಡೇ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಈ ಎಲ್ಲಾ ಕಾರಣಗಳಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೂ ಕೀಲು ನೋವಿನಿಂದ ಬಳಲುತ್ತಿದ್ದಾರೆ.

28

ನೀವು ಸಹ ಈ ನೋವಿನಿಂದ ಬಳಲುತ್ತಿದ್ದರೆ ಈ ಲೇಖನವು ನಿಮಗೆ ಖಂಡಿತ ಸಹಾಯಕವಾಗಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕ ರೀತಿಯಲ್ಲಿ ಕೀಲು ನೋವಿನಿಂದ ಪರಿಹಾರ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ..

38

ಇತ್ತೀಚೆಗೆ ಪ್ರಸಿದ್ಧ ಪೌಷ್ಟಿಕ ತಜ್ಞೆ ಶ್ವೇತಾ ಶಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಕುರಿತಾಗಿ ಮನೆಮದ್ದನ್ನು ಶೇರ್ ಮಾಡಿದ್ದು,  ಪೋಸ್ಟ್ ಸಮೇತ ಮಾಹಿತಿ ಇಲ್ಲಿದೆ ನೋಡಿ…

48

ಈ ಪರಿಣಾಮಕಾರಿ ಪರಿಹಾರ ಯಾವುದು?
ಕೀಲು ನೋವಿನಿಂದ ಪರಿಹಾರ ಪಡೆಯಲು ನೀವು ಮನೆಯಲ್ಲಿಯೇ ಪೇಸ್ಟ್ ತಯಾರಿಸಬಹುದು. ಇದನ್ನು ತಯಾರಿಸಲು ನಿಮಗೆ ಕೇವಲ 4 ಪದಾರ್ಥಗಳು ಬೇಕಾಗುತ್ತವೆ. ಅವು ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯ.

58

ಬೇಕಾಗುವ ಪದಾರ್ಥಗಳು
ಪೇಸ್ಟ್ ತಯಾರಿಸಲು ನಿಮಗೆ 1 ಟೀಸ್ಪೂನ್ ಹರಳೆಣ್ಣೆ
1 ಟೀಸ್ಪೂನ್ ಜೇನುತುಪ್ಪ
1 ಟೀಸ್ಪೂನ್ ದಾಲ್ಚಿನ್ನಿ ಪುಡಿ ಮತ್ತು
1 ಟ್ಯೂಬ್ ಸುಣ್ಣ ಬೇಕಾಗುತ್ತದೆ.

68

ಪೇಸ್ಟ್ ತಯಾರಿಸುವುದು ಹೇಗೆ?
* ಮೊದಲಿಗೆ ಈ ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ ಒಂದು ಸ್ವಚ್ಛವಾದ ಬಟ್ಟಲಿನಲ್ಲಿ ಹಾಕಿ.
* ನಂತರ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಪೇಸ್ಟ್ ತುಂಬಾ ದಪ್ಪಗಿರಬಾರದು ಅಥವಾ ತುಂಬಾ ತೆಳ್ಳಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಸುಲಭವಾಗಿ ಹಚ್ಚುವಂತಿರಬೇಕು.

78

ಪೇಸ್ಟ್ ಹಚ್ಚುವುದು ಹೇಗೆ?
* ಮೊಣಕಾಲು ಅಥವಾ ಕೀಲುಗಳ ಮೇಲೆ ನೋವು ಇರುವ ಕಡೆ ಈ ಪೇಸ್ಟ್‌ನ ತೆಳುವಾದ ಪದರವನ್ನು ಹಚ್ಚಿ.
* ನಂತರ ಪೇಸ್ಟ್ ಅನ್ನು ಮೃದುವಾದ ಹತ್ತಿ ಬಟ್ಟೆಯಿಂದ ಕಟ್ಟಿ.
* 8-10 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಬಿಡಿ.
* ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ.

88

ಇದು ಹೇಗೆ ಉಪಯುಕ್ತವಾಗಿದೆ?
* ಆಯುರ್ವೇದ ತಜ್ಞರು ಹೇಳುವಂತೆ ಹರಳೆಣ್ಣೆ ಮತ್ತು ದಾಲ್ಚಿನ್ನಿ ಎರಡೂ ದೇಹಕ್ಕೆ ಉಷ್ಣತೆಯನ್ನು ತರುವ ಮೂಲಕ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
* ಇದಲ್ಲದೆ ಜೇನುತುಪ್ಪವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಮೊಣಕಾಲುಗಳ ಊತ ಮತ್ತು ನೋವನ್ನು ಸಹ ಶಮನಗೊಳಿಸುತ್ತದೆ.
* ಈ ರೀತಿಯಾಗಿ ಪೇಸ್ಟ್ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ನೀವು ಇದನ್ನು ಖಂಡಿತ ಪ್ರಯತ್ನಿಸಬೇಕು.

Read more Photos on
click me!

Recommended Stories