ಹಿಮಾಲಯನ್ ಪಿಂಕ್ ಸಾಲ್ಟ್ ಸೌಂದರ್ಯಕ್ಕೆ ಬಳಕೆಯಾಗುವ ಉಪ್ಪು.ಆದರೆ ಇದನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸಿದ್ರೆ ಏನಾಗುತ್ತೆ? ಇದರ ಬಗ್ಗೆ ವೈದ್ಯರು ಕೊಟ್ಟಿರೋ ಎಚ್ಚರಿಕೆ ನೋಡಿ...
ಉಪ್ಪಿನಲ್ಲಿ ಹಲವಾರು ಬಗೆಗಳಿವೆ. ಆದರೆ ಸಾಮಾನ್ಯವಾಗಿ ಬಹುತೇಕ ಮಂದಿ ದಿನನಿತ್ಯ ಉಪಯೋಗಿಸುವ ಬಿಳಿಬಣ್ಣದ ಪುಡಿ ಉಪ್ಪು ಕೂಡ ಹಲವು ರೀತಿಯಲ್ಲಿ ಹಾನಿಕಾರಕ ಎಂದು ಇದಾಗಲೇ ಸಾಬೀತಾಗಿದೆ. ಇದೇ ಕಾರಣಕ್ಕೆ ಕೆಂಪು ಬಣ್ಣದ ಕಲ್ಲುಪ್ಪು ಅಡುಗೆಗೆ ಬಳಸುವುದು ಅತಿಮುಖ್ಯ.
27
ಸಾಣೆಕಟ್ಟಾ ಉಪ್ಪು ಶ್ರೇಷ್ಠ
ಆರೋಗ್ಯವನ್ನು ಕಾಪಾಡಲು ಕಲ್ಲುಪ್ಪು ಸಹಕಾರಿಯಾಗಿದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಸಿಗುವ ಸಾಣೆಕಟ್ಟಾ ಉಪ್ಪು (Sanekatta Salt) ಮಾತ್ರ ಬಹಳಷ್ಟು ಆರೋಗ್ಯವರ್ಧಕ ಎಂದು ಹೇಳಲಾಗುತ್ತದೆ. ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಈ ಉಪ್ಪು ಲಭ್ಯವಿದೆ. ಇದು ಸಿಗದೇ ಹೋದರೆ ಕಲ್ಲುಪ್ಪು ಬಳಸುವುದು ಬೆಸ್ಟ್.
37
ದಿನನಿತ್ಯವೂ ಪಿಂಕ್ ಸಾಲ್ಟ್ ಬೇಡ
ಆದರೆ ಕೆಲವರು ದಿನನಿತ್ಯವೂ ಪಿಂಕ್ ಸಾಲ್ಟ್ ಉಪಯೋಗಿಸುತ್ತಾರೆ. ಇದಕ್ಕೆ ಹಿಮಾಲಯನ್ ಪಿಂಕ್ ಸಾಲ್ಟ್ (Himalayan pink Salt) ಎನ್ನುತ್ತಾರೆ. ಆದರೆ ಇದನ್ನು ಹೆಚ್ಚು ಬಳಸಿದ್ರೆ ಏನಾಗುತ್ತದೆ ಎನ್ನುವ ಬಗ್ಗೆ ಹಲವು ವೈದ್ಯರು ಹೇಳಿದ್ದಾರೆ ಕೇಳಿ.
ಪಿಂಕ್ ಉಪ್ಪು, ಅಥವಾ ಹಿಮಾಲಯನ್ ಪಿಂಕ್ ಸಾಲ್ಟ್, ಪಾಕಿಸ್ತಾನದ ಹಿಮಾಲಯ ಪರ್ವತ ಪ್ರದೇಶದ ಖೇವ್ರಾ ಉಪ್ಪು ಗಣಿಯಿಂದ ಹೊರತೆಗೆಯಲಾದ ಒಂದು ರೀತಿಯ ಕಲ್ಲು ಉಪ್ಪು. ಇದನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಆದರೆ ಕೆಲವರು ಇದನ್ನು ದಿನನಿತ್ಯವೂ ಅಡುಗೆಯಲ್ಲಿ ಬಳಸುತ್ತಾರೆ. ಇದು ಒಳ್ಳೆಯದಲ್ಲ ಎನ್ನುವುದು ವೈದ್ಯರ ಮಾತು. ಇದಕ್ಕೆ ಕಾರಣ ಏನೆಂದರೆ, ಈ ಉಪ್ಪಿನಲ್ಲಿ ಅಯೋಡಿನ್ ಕೊರತೆ ಇದೆ.
57
ದೇಹಕ್ಕೆ ಅಯೋಡಿನ್ ಹೆಚ್ಚಾಗಿ ಸಿಗುವುದೇ ಉಪ್ಪಿನ ಮೂಲಕ
ಅಷ್ಟಕ್ಕೂ ದೇಹಕ್ಕೆ ಅಯೋಡಿನ್ ಹೆಚ್ಚಾಗಿ ಸಿಗುವುದೇ ಉಪ್ಪಿನ ಮೂಲಕ. ಇದರ ಕೊರತೆಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಇದಾಗಲೇ ಈ ಸಮಸ್ಯೆಯಿಂದ ಬಳಸುತ್ತಿದ್ದರೆ ಮತ್ತಷ್ಟು ಉಲ್ಬಣವಾಗುತ್ತದೆ. ಏಕೆಂದರೆ, ಥೈರಾಯ್ಡ್ ಕಾರ್ಯನಿರ್ವಹಣೆಗೆ ಅಯೋಡಿನ್ ಅತ್ಯಗತ್ಯ. ಆದ್ದರಿಂದ ಥೈರಾಯ್ಡ್ ಸಮಸ್ಯೆಗಳಿರುವವರು, ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದರೆ, ಗುಲಾಬಿ ಉಪ್ಪನ್ನು ಕಡಿಮೆ ಮಾಡುವುದು ಒಳ್ಳೆಯದು. ಬೇಕಿದ್ದರೆ ಮಿತವಾಗಿ ಬಳಸಬಹುದೇ ವಿನಾ ದಿನವೂ ಇದನ್ನು ಬಳಸುತ್ತಿದ್ದರೆ ಹಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
67
ಸೌಂದರ್ಯಕ್ಕೆ ಬಳಕೆ
ಅಷ್ಟೇ ಅಲ್ಲದೇ, ಅತಿಯಾದ ಗುಲಾಬಿ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಎನ್ನುತ್ತಾರೆ ತಜ್ಞರು. ಥೈರಾಯ್ಡ್ ಸಮಸ್ಯೆಗಳಿರುವವರು, ಗುಲಾಬಿ ಉಪ್ಪನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎನ್ನಲಾಗುತ್ತದೆ. ಅದೇ ಇನ್ನೊಂದೆಡೆ, ಇದನ್ನು ಮೊದಲೇ ಹೇಳಿದಂತೆ ಸೌಂದರ್ಯವರ್ಧಕಕ್ಕೆ ಬಳಸಲಾಗುತ್ತದೆ. ಆಲಂಕಾರಿಕ ದೀಪಗಳು ಮತ್ತು ಸ್ಪಾ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.
77
ಥೈರಾಯ್ಡ್ ಸಮಸ್ಯೆಗೆ ಕಾರಣ
ಮೊದಲೇ ಹೇಳಿದಂತೆ ಥೈರಾಯ್ಡ್ ಸಮಸ್ಯೆಗೆ ಪಿಂಕ್ ಸಾಲ್ಟ್ ಬಹುಮುಖ್ಯ ಕಾರಣವಾಗುತ್ತದೆ. ಥೈರಾಯ್ಡ್ ಗ್ರಂಥಿಯು ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದಲ್ಲಿ ಇರುತ್ತದೆ. ಇದು ನಮ್ಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ಅದರ ವೇಗವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುವುದು ಇದೇ ಗ್ರಂಥಿ. ಅವು ದೇಹದಲ್ಲಿನ ಜೀವಕೋಶಗಳಿಗೆ ಶಕ್ತಿಯನ್ನು ಬಳಸಲು ನಿರ್ದೇಶಿಸುತ್ತವೆ.