ಪ್ರತಿದಿನ ತಿನ್ನುವ ಈ ಆಹಾರಗಳಿಂದ ಆಗುತ್ತೆ ಲಿವರ್ ಡ್ಯಾಮೇಜ್

First Published | Nov 26, 2022, 2:10 PM IST

ತಿನ್ನುವಾಗ ಮತ್ತು ಕುಡಿಯುವಾಗ ನೀವು ಮಾಡೋ ತಪ್ಪುಗಳಿಂದಾಗಿ, ಯಕೃತ್ತು ಹದಗೆಡಲು ಪ್ರಾರಂಭಿಸುತ್ತೆ. ಈ ಕಾರಣದಿಂದಾಗಿ, ಅನೇಕ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನೀವು ಪ್ರತಿದಿನ ತಿನ್ನುವ ಲಿವರ್  ಹಾಳುಮಾಡುವ ವಸ್ತುಗಳ ಬಗ್ಗೆ ತಿಳಿಯೋದು ಮುಖ್ಯ. ಇಲ್ಲಿದೆ ನೋಡಿ ಅಂತಹ ಆಹಾರಗಳ ಬಗ್ಗೆ ಫುಲ್ ಡೀಟೇಲ್ಸ್.  

ಲಿವರ್(Liver) ಕ್ಷೀಣಿಸಲು ಪ್ರಾರಂಭಿಸಿದಾಗ, ದೇಹದಲ್ಲಿ ಅನೇಕ ಸಮಸ್ಯೆಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ, ಜನರು ಚಿಕ್ಕ ವಯಸ್ಸಿನಲ್ಲಿಯೇ ಯಕೃತ್ತಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಲಿವರ್ ಹೇಗೆ ಹಾನಿಗೊಳಗಾಗುತ್ತೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಲಿವರ್ ಫೇಲ್ಯೂರ್ ಗೆ ಮುಖ್ಯ ಕಾರಣವೆಂದರೆ ಕಳಪೆ ಜೀವನಶೈಲಿ ಮತ್ತು ತಪ್ಪಾದ ಆಹಾರ ಪದ್ಧತಿಗಳು. ಕೆಲವು ಜನರು ಪ್ರತಿದಿನ ಹೊರಗಿನ ಆಹಾರ ತಿನ್ನಲು ಮತ್ತು ಪ್ಯಾಕ್ ಮಾಡಿದ ವಸ್ತುಗಳನ್ನು ತಿನ್ನಲು ಇಷ್ಟಪಡ್ತಾರೆ. ಯಕೃತ್ತಿಗೆ ಹಾನಿಯುಂಟುಮಾಡುವ ಅಂತಹ ವಿಷಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ. 

ಮೈದಾ: ಮೈದಾದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಮಿನರಲ್ಸ್(Minerals), ಫೈಬರ್ ಮತ್ತು ಅಗತ್ಯ ವಿಟಮಿನ್ಸ್ಗಳ ಕೊರತೆಯಿರುವ ಅವುಗಳನ್ನು ಸಂಸ್ಕರಿಸಲಾಗುತ್ತೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.ಲಿವರ್ಗೆ ತೊಂದರೆ ಉಂಟುಮಾಡುವಂತಹ  ಮೈದಾದಿಂದ ತಯಾರಿಸಿದ ಪಾಸ್ತಾ, ಪಿಜ್ಜಾ, ಬಿಸ್ಕೆಟ್, ಬ್ರೆಡ್ ನಂತಹ ಆಹಾರ ತಿನ್ನೋದನ್ನು ತಪ್ಪಿಸಿ. ಈ ಆಹಾರಗಳ ಬದಲು ಆರೋಗ್ಯಕರ ಆಹಾರ ಸೇವಿಸಿ. 

Tap to resize

ಆಲ್ಕೋಹಾಲ್ (Alcohol):  ಪಿತ್ತಜನಕಾಂಗದ ಕಾಯಿಲೆಗಳಿಗೆ ಪ್ರಮುಖ ಕಾರಣಗಳಲ್ಲಿ ಆಲ್ಕೋಹಾಲ್ ಒಂದಾಗಿದೆ. ಅತಿಯಾದ ಆಲ್ಕೋಹಾಲ್ ಲಿವರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಲಿವರ್  ಆಲ್ಕೋಹಾಲನ್ನು ವಿಭಜಿಸಲು ಪ್ರಯತ್ನಿಸಿದಾಗ, ಸೆಲ್ಸ್ಗಳನ್ನು ಹಾನಿಗೊಳಿಸುವ ಕೆಮಿಕಲ್ ರಿಯಾಕ್ಷನ್ ನಡೆಯುತ್ತೆ, ಇದು ಉರಿಯೂತ ಮತ್ತು ಫೈಬ್ರೋಸಿಸ್ ಗೆ ಕಾರಣವಾಗುತ್ತೆ.

ದೀರ್ಘಕಾಲದವರೆಗೆ ಅತಿಯಾದ ಆಲ್ಕೋಹಾಲ್ ಸೇವನೆ ಲಿವರ್ ಸಿರೋಸಿಸ್ ಗೆ ಕಾರಣವಾಗುತ್ತೆ, ಇದು ರಕ್ತದ ವಾಂತಿ(Blood vomit), ಕಾಮಾಲೆ, ದೇಹದಲ್ಲಿ ಹೆಚ್ಚುವರಿ ದ್ರವದ ಶೇಖರಣೆ ಮತ್ತು ಲಿವರ್  ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ, ಸಾಧ್ಯವಾದರೆ, ಅದನ್ನು ಕ್ರಮೇಣವಾಗಿ ತಪ್ಪಿಸಿ.

ಸಕ್ಕರೆ (Sugar): ಹೆಚ್ಚುತ್ತಿರುವ ಬೊಜ್ಜಿನ ಜೊತೆಗೆ, ಸಕ್ಕರೆ ದೇಹಕ್ಕೆ ಹೆಚ್ಚು ಹಾನಿಕಾರಕ. ಇದು ಲಿವರ್ ಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಬಹುದು. ಕ್ಯಾಂಡಿ, ಕುಕೀಸ್, ಸೋಡಾದಂತಹ ಎಲ್ಲವೂ ಕಚ್ಚಾ ಮತ್ತು ಸಂಸ್ಕರಿಸಿದ ಸಕ್ಕರೆ ಮತ್ತು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ನಿಂದ ತಯಾರಿಸಲಾಗಿರುತ್ತೆ, ಇದು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತೆ, ಇದು ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು. 

ಅತಿಯಾದ ಸಕ್ಕರೆಯು ಆಲ್ಕೋಹಾಲ್ ನಂತೆ ಯಕೃತ್ತಿಗೆ ಹಾನಿಯನ್ನುಂಟುಮಾಡಬಹುದು.ಹಾಗಾಗಿ ಸಾಧ್ಯವಾದಷ್ಟು ಸಕ್ಕರೆ ಸೇವನೆ ಅವಾಯ್ಡ್ ಮಾಡಿ. ಅದರ ಬದಲಾಗಿ ನೀವು ಬೆಲ್ಲ (Jaggery) ಸೇವಿಸಬಹುದು. ಜೊತೆಗೆ ಹಣ್ಣುಗಳ ಜ್ಯೂಸ್ ಸೇವಿಸೋವಾಗ ಅದನ್ನು ಫ್ರೆಶ್ ಆಗಿಯೇ ಸೇವಿಸಿ, ಅದಕ್ಕೆ ಸಕ್ಕರೆ ಸೇರಿಸದೇ ಇದ್ದರೆ ಅದು ಬೆಸ್ಟ್.

ರೆಡ್ ಮೀಟ್ (Red Meat): ಪ್ರೋಟೀನ್ ಭರಿತ ರೆಡ್ ಮೀಟ್ ಜೀರ್ಣಿಸೋದು ಲಿವರ್ಗೆ ಕಷ್ಟ. ಯಕೃತ್ತು ಪ್ರೋಟೀನನ್ನು ವಿಭಜಿಸೋದು ಸುಲಭವಲ್ಲ, ಹೆಚ್ಚುವರಿ ಪ್ರೋಟೀನ್ ಪ್ರೊಡಕ್ಷನ್ ಮೆದುಳು ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟುಮಾಡುವ ಫ್ಯಾಟಿ ಲಿವರ್ ಸೇರಿದಂತೆ ಅನೇಕ ಯಕೃತ್ತು-ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಫಾಸ್ಟ್ ಫುಡ್ (Fast food): ಫಾಸ್ಟ್ ಫುಡ್ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ. ಬರ್ಗರ್, ಫ್ರೆಂಚ್ ಫ್ರೈ, ವೇಫರ್ ಗಳಂತಹ ಆಹಾರ ಪದಾರ್ಥಗಳು ಯಕೃತ್ತಿಗೆ ಒಳ್ಳೆಯದಲ್ಲ ಯಾಕಂದ್ರೆ ಈ ವಸ್ತುಗಳನ್ನು ಸಂಸ್ಕರಿಸಿದ ರೀತಿಯಲ್ಲಿ ತಯಾರಿಸಲಾಗುತ್ತೆ . ಫ್ಯಾಟಿ ಲಿವರ್ ಜೊತೆಗೆ, ಸ್ಯಾಚುರೇಟೆಡ್ ಫ್ಯಾಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ನೀವು ಸೇವಿಸೋ ಫುಡ್ಸ್ ಬಗ್ಗೆ ಹೆಚ್ಚು ಕಾನ್ಸನ್ಟ್ರೇಟ್ ಮಾಡಿ.  

Latest Videos

click me!