ಹುಬ್ಬುಗಳಲ್ಲಿ ನೋವು ಇದ್ಯಾ? ಇಲ್ಲಿದೆ ನೋಡಿ ಮನೆಮದ್ದು!

First Published Nov 24, 2022, 5:05 PM IST

ಹುಬ್ಬು ನೋವಿಗೆ ಅನೇಕ ಕಾರಣಗಳಿರಬಹುದು. ಕಣ್ಣಿನ ಮೇಲೆ ಬೀಳುವ ಒತ್ತಡದಿಂದಾಗಿಯೂ ಹುಬ್ಬುಗಳಲ್ಲಿ ನೋವು ಕಾಣಿಸಬಹುದು. ಹಾಗಾಗಿ ಕಣ್ಣಿನ ಒತ್ತಡಕ್ಕೆ (Stress) ಕಾರಣವೇನು ಮತ್ತು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳೋದು ಬಹಳ ಮುಖ್ಯ. ಅದಕ್ಕಾಗಿಯೇ ಇಲ್ಲಿ ಕೆಲವು ಸುಲಭವಾದ ಮನೆಮದ್ದುಗಳನ್ನು ಹೇಳಲಾಗಿದೆ. ಇವುಗಳನ್ನು ಟ್ರೈ ಮಾಡಿ ನಿಮ್ಮ ಹುಬ್ಬು ನೋವಿನ್ನು ದೂರ ಮಾಡಬಹುದು.   
 

ಕಣ್ಣು ಮತ್ತು ಹುಬ್ಬುಗಳಲ್ಲಿನ(Eye brow) ನೋವು ಕೆಲವೊಮ್ಮೆ ಅಸಹನೀಯವಾಗಬಹುದು. ಈ ನೋವಿಗೆ ಅನೇಕ ವಿಭಿನ್ನ ಕಾರಣಗಳಿವೆ. ಸಾಮಾನ್ಯವಾಗಿ, ಈ ನೋವು ಹುಬ್ಬುಗಳ ಸುತ್ತಲೂ ಅಥವಾ ಕೆಳಗೆ ಕಾಣಿಸಿಕೊಳ್ಳುತ್ತೆ. ಈ ನೋವು ತಲೆನೋವು ಮೊದಲಾದ ವಿಭಿನ್ನ ಕಾರಣಗಳಿಂದಾಗಿ ಉಂಟಾಗಿರುವ ಸಾಧ್ಯತೆ ಇದೆ ಅಥವಾ ಹೆಚ್ಚು ಗಂಭೀರ ಸ್ಥಿತಿಯನ್ನು ಸೂಚಿಸಬಹುದು. ಹಾಗಾಗಿ, ಹುಬ್ಬು ನೋವಿಗೆ ಕಾರಣವೇನು, ಅದನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಹುಬ್ಬುಗಳಲ್ಲಿ ನೋವಿಗೆ ಕಾರಣಗಳು ಹೀಗಿವೆ

ತಲೆನೋವು (Head ache)
ಒತ್ತಡದಿಂದ ಉಂಟಾಗುವ ತಲೆನೋವು ಸಾಮಾನ್ಯ. ಇದು ಸಾಮಾನ್ಯವಾಗಿ ಒತ್ತಡ ಅಥವಾ ನಿದ್ರೆಯ ಕೊರತೆಯಿಂದ ಉಂಟಾಗುತ್ತೆ, ಇದು ಹುಬ್ಬುಗಳಲ್ಲಿ ನೋವಿಗೆ ಕಾರಣವಾಗಬಹುದು.ಹಾಗಾಗಿ ಒತ್ತಡವಿಲ್ಲದೆ, ಆರಾಮಾಗಿ ನಿದ್ದೆ ಮಾಡೋದು ತುಂಬಾ ಮುಖ್ಯ.   
 

ಮೈಗ್ರೇನ್ (Migraine)

ಮೈಗ್ರೇನ್ ಒಂದು ರೀತಿಯ ತಲೆನೋವು, ಇದು ಹುಬ್ಬುಗಳಲ್ಲಿ ನೋವನ್ನು ಉಂಟು ಮಾಡಬಹುದು. ಇದು ಮಿಡಿಯುವ ನೋವಿನ ರೂಪದಲ್ಲಿ ಸಂಭವಿಸುತ್ತೆ, ಇದು ಸಾಮಾನ್ಯವಾಗಿ ತಲೆಯ ಒಂದು ಬದಿಯಲ್ಲಿ ಮಾತ್ರ ಸಂಭವಿಸುತ್ತೆ. ಹಾಗಾಗಿ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳೋದು ಒಳ್ಳೆದು.  

ಕ್ಲಸ್ಟರ್(Cluster) ತಲೆನೋವು

ಕ್ಲಸ್ಟರ್ ತಲೆನೋವು ಹೆಚ್ಚಾಗಿ ಅತ್ಯಂತ ನೋವಿನ ತಲೆನೋವಾಗಿದೆ. ಇವು ಒಂದು ರೀತಿಯ ಪ್ಯಾಟರ್ನ್‌ನಲ್ಲಿ ಉಂಟಾಗುತ್ತೆ. ಕ್ಲಸ್ಟರ್ ತಲೆನೋವಿಗೆ ಸಂಬಂಧಿಸಿದ ನೋವು ಆಗಾಗ್ಗೆ ವ್ಯಕ್ತಿಯನ್ನು ನಿದ್ರೆಯಿಂದ ಎಚ್ಚರಗೊಳಿಸುವಷ್ಟು ತೀಕ್ಷ್ಣವಾಗಿರುತ್ತೆ. ಇದು ಸಾಮಾನ್ಯವಾಗಿ ತಲೆ ಒಂದು ಬದಿಯಲ್ಲಿ, ವಿಶೇಷವಾಗಿ ಕಣ್ಣಿನ ಸುತ್ತಲೂ ಸಂಭವಿಸುತ್ತೆ.

ಸೈನಸೈಟಿಸ್ (sinusitis)

ಸೈನಸ್ ಸೋಂಕು ಎಂದೂ ಕರೆಯಲ್ಪಡುವ ಸೈನಸೈಟಿಸ್, ಮೂಗಿನ ಬಳಿಯ ಸೈನಸ್ ನ ಒಳಪದರವು ಸೋಂಕಿಗೆ ಒಳಗಾದಾಗ ಉಂಟಾಗುತ್ತೆ. ಶೀತ (Col), ಅಲರ್ಜಿ, ಹಲ್ಲಿನ ಸೋಂಕು (Tooth Infection) ಅಥವಾ ಮೂಗಿನ ಗಾಯಗಳಿಂದಾಗಿ ಮೂಗಿನ ಮಾರ್ಗ ಮುಚ್ಚಿದಾಗ ಸೈನಸ್ ಸೋಂಕು ಉಂಟಾಗುತ್ತೆ. ಸೈನಸೈಟಿಸ್ ಮುಖದ ನೋವು ಅಥವಾ ಕಣ್ಣುಗಳಲ್ಲಿ ಊತಕ್ಕೆ ಕಾರಣವಾಗಬಹುದು, ಇದು ಹುಬ್ಬುಗಳ ಮೇಲೆ ಪರಿಣಾಮ ಬೀರುತ್ತೆ.ಹಾಗಾಗಿ ಎಚ್ಚರದಿಂದಿರೋದು ತುಂಬಾ ಮುಖ್ಯ.   

ಹುಬ್ಬು ನೋವಿಗೆ ಮನೆಮದ್ದುಗಳು ಹೀಗಿವೆ

- ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ನಿದ್ರೆ (Sleep) ಸರಿಯಾಗಿ ಆದ್ರೆ ಹೆಚ್ಚು ತೊಂದರೆ ಇರೋದಿಲ್ಲ.  
- ಹುಬ್ಬುಗಳ ಮೇಲೆ ಕೋಲ್ಡ್ ಕಂಪ್ರೆಸ್ ಹಚ್ಚಿ ಮಲಗಿ. ಇದು ಹೆಚ್ಚು ಆರಾಮ ನೀಡುತ್ತೆ.  
-ಧ್ಯಾನ ಮಾಡೋದ್ರಿಂದ ಮನಸ್ಸಿಗೆ ಹೆಚ್ಚು ಒತ್ತಡ ಇರೋದಿಲ್ಲ. ಇದರಿಂದ ಹುಬ್ಬು ನೋವು ಕಮ್ಮಿಯಾಗುತ್ತೆ. 

- ಕತ್ತಲೆ ಮತ್ತು ಶಾಂತ ಕೋಣೆಯಲ್ಲಿ ಮಲಗಿ. ಹೀಗೆ ಮಲಗೋದ್ರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುತ್ತೆ.   
- ಒತ್ತಡ ತಗ್ಗಿಸುವ ತಂತ್ರಗಳನ್ನು ಅನುಸರಿಸೋದು ತುಂಬಾ ಒಳ್ಳೆದು. ಅದು ಮ್ಯೂಸಿಕ್ (Music), ಡಾನ್ಸ್ ಅಥವಾ ಯಾವುದೇ ಮಾರ್ಗವಾಗಿರ್ಬೋದು. ಒತ್ತಡ ಕಮ್ಮಿಯಾದ್ರೆ ತಲೆ ನೋವು, ಹುಬ್ಬು ನೋವು ಯಾವುದು ಇರಲಿಕ್ಕಿಲ್ಲ.     
- ಅಲರ್ಜಿಗಳನ್ನು ತಪ್ಪಿಸೋದ್ರಿಂದ ಹುಬ್ಬು ನೋವು ಮಾಯವಾಗಿ ಹೆಚ್ಚು ಸಂತೋಷದ ಬದುಕು ನಿಮ್ಮದಾಗುತ್ತೆ.  
 

click me!