Winter Diet: ಚಳಿಗಾಲದಲ್ಲಿ ನಿಮ್ಮ ದಿನದ ಡಯಟ್‌‌ಗೆ ಸೇರಿಸಬೇಕಾದ ತರಕಾರಿಗಳಿವು

First Published | Nov 12, 2022, 4:00 PM IST

ಚಳಿಗಾಲದಲ್ಲಿ ಬಿಸಿಯಾದ ಚಹಾ ಮತ್ತು ಬೆಚ್ಚಗಿನ ಬಟ್ಟೆಗಳೊಂದಿಗೆ ಆಹಾರ ಪದ್ಧತಿಯಲ್ಲೂ ಬದಲಾವಣೆ ಅವಶ್ಯಕ. ಚಳಿಗಾಲದ ತರಕಾರಿಗಳು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ ಮತ್ತು ಅವುಗಳನ್ನು  ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ  ಸೇವಿಸಬೇಕಾದ ಐದು ತರಕಾರಿಗಳು ಇಲ್ಲಿವೆ.

Vegetables

ಸೀಸನಲ್‌ ತರಕಾರಿಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸದಿದ್ದರೆ ನಮ್ಮ ಡಯಟ್‌ ಅಪೂರ್ಣವಾಗಿರುತ್ತದೆ. ಈ ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ನಿಯಂತ್ರಣದಲ್ಲಿಡುವುದರ ಜೊತಗೆ ಕೀಲು ನೋವು, ಕೂದಲು ಉದುರುವಿಕೆ ಮತ್ತು ಒಣ ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.
 

ಹಸಿರು ಎಲೆಗಳ ತರಕಾರಿಗಳು:
ಹಸಿರು ಎಲೆಗಳ ತರಕಾರಿಗಳಾದ  ಮೆಂತ್ಯ, ಪಾಲಕ್‌, ಬೀಟ್ರೂಟ್ ಗ್ರೀನ್ಸ್ ಮತ್ತು ಟರ್ನಿಪ್ ಗ್ರೀನ್ಸ್ ಚಳಿಗಾಲದಲ್ಲಿ   ಹೇರಳವಾಗಿ ಸಿಗುತ್ತದೆ. ಅವು ಕ್ಲೋರೊಫಿಲ್‌ ಮತ್ತು ವಿಟಮಿನ್ ಎ, ಸಿ, ಕೆ, ಇ ಮತ್ತು ಮೆಗ್ನೀಸಿಯಮ್‌ಗಳಿಂದತುಂಬಿವೆ, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳ ಅಂಶ ಸಮೃದ್ಧವಾಗಿವೆ ಮತ್ತು ಫೈಬರ್‌ನಿಂದ ತುಂಬಿರುತ್ತವೆ. ಇವುಗಳು ಇಮ್ಯೂನಿಟಿ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆ ಕೆಟ್ಟ ಆಹಾರ ಪದ್ಧತಿಗಳಿಂದ ಉಂಟಾಗುವ ಯಾವುದೇ  ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. ಪ್ರತಿ ವಾರ ಆಹಾರದಲ್ಲಿ ಕನಿಷ್ಠ ಎರಡು ವಿಭಿನ್ನ ಎಲೆ  ತರಕಾರಿಗಳನ್ನು ತಿನ್ನಲು ಪ್ರಯತ್ನಿಸಬೇಕು.

Tap to resize

ಕ್ರೂಸಿಫೆರಸ್ ತರಕಾರಿಗಳು: 
ಇವುಗಳು ಗೆಡ್ಡೆ  ಕೋಸು, ಮೂಲಂಗಿ, ಎಲೆಕೋಸು, ಹೂಕೋಸು, ಕೇಲ್ ಮತ್ತು ಬ್ರಸೆಲ್ಸ್ ಮೊಗ್ಗುಗಳನ್ನು ಒಳಗೊಂಡಿರುವ ತರಕಾರಿಗಳ ವೈವಿಧ್ಯಮಯ ಗುಂಪುಗಳಾಗಿವೆ. ಈ ಗುಂಪಿನ ತರಕಾರಿಗಳು ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇವುಗಳು  ಅನಾರೋಗ್ಯಕ್ಕೆ ಒಳಗಾಗದಂತೆ ತಡೆಯುತ್ತದೆ ಹಾಗೂ  ಬಹು ಮುಖ್ಯವಾಗಿ, ಇದು DIM ಎಂಬ ಸಂಯುಕ್ತವನ್ನು ಹೊಂದಿದೆ, ಇದು ನಿಮ್ಮ ಹಾನಿಕಾರಕ ಈಸ್ಟ್ರೊಜೆನ್ ಮಟ್ಟವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಪಿಸಿಓಎಸ್, ಫೈಬ್ರಾಯ್ಡ್‌ಗಳು, ಎಂಡೊಮೆಟ್ರಿಯೊಸಿಸ್ ಮತ್ತು ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇವುಗಳನ್ನು ಸೇವಿಸುವುದು ಅವಶ್ಯಕ.

ಸಿಹಿ ಗೆಣಸು:
ಸಿಹಿಗೆಣಸು ಕರುಳಿನ ಬ್ಯಾಕ್ಟೀರಿಯಾಗಳಿಗೆ ಉತ್ತಮ ಆಹಾರ ಮೂಲವಾಗಿದೆ. ಇದರಲ್ಲಿರುವ  ಬೀಟಾ-ಕ್ಯಾರೋಟಿನ್ ಗುಣಲಕ್ಷಣಗಳು ವಿಟಮಿನ್ ಎ ಮತ್ತು ಸಿ ಆಗಿ ವಿಕಸನಗೊಳ್ಳುತ್ತದೆ, ಇದು ರೋಗ ನೀರೋಧಕ ಶಕ್ತಿ ಮತ್ತು ದೇಹದ ಚಯಾಪಚಯವನ್ನು ಸುಧಾರಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬುಗಳು ಮತ್ತು ಪ್ರೋಟೀನ್‌ಗಳ  ಜೊತೆ ಇದನ್ನು  ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿಡಬಹುದು.

Image: Getty Images

ಕ್ಯಾರೆಟ್:
ಕ್ಯಾರೆಟ್  ಬೀಟಾ-ಕ್ಯಾರೋಟಿನ್‌ನ ಅತ್ಯುತ್ತಮ ಮೂಲವಾಗಿದ್ದು, ಅದನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಕ್ಯಾರೊಟಿನಾಯ್ಡ್‌ಗಳಿಂದ ಕೂಡಿದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ

beetroot

ಬೀಟ್ರೂಟ್‌:
ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ B6, A, ಮತ್ತು C ಮತ್ತು ನೈಟ್ರೇಟ್ನಿಂದ ತುಂಬಿರುವ ತರಕಾರಿ ಆಗಿದೆ. ಈ ಪೋಷಕಾಂಶಗಳು PMS ಲಕ್ಷಣಗಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಡಿಟಾಕ್ಸಿಫೈಂಗ್‌ ಜೆಂಟ್ ಅನ್ನು ಸಹ ಹೊಂದಿದೆ, ಚಳಿಗಾಲದಲ್ಲಿ  ಬೀಟ್ರೂಟ್‌ ಹೊಳೆಯುವ ಚರ್ಮವನ್ನು ನೀಡುತ್ತದೆ.

Latest Videos

click me!