ಈ ವಿಟಮಿನ್ ಗಳ ಕೊರತೆಯಿಂದಾಗಿ, ಹಲ್ಲುಗಳು ದುರ್ಬಲವಾಗುತ್ತೆ!

First Published | Nov 11, 2022, 4:18 PM IST

ಇತ್ತೀಚೆಗೆ ಹೆಚ್ಚಿನ ಜನರು ಹಲ್ಲುಗಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಎಂಬ ನಾಲ್ಕು ರೀತಿಯ ವಿಟಮಿನ್ಗಳ  ಕೊರತೆಯಿಂದ ಉಂಟಾಗುತ್ತವೆ, ಇದಕ್ಕಾಗಿ ಜನರು ಔಷಧಿಗಳನ್ನು ಆಶ್ರಯಿಸುತ್ತಾರೆ, ಆದರೆ ಆಹಾರ ಬದಲಾಯಿಸುವ ಮೂಲಕ ಅದನ್ನು ಸರಿದೂಗಿಸಬಹುದು. ಹೇಗೆಂದು ತಿಳಿಯಲು ಮುಂದೆ ಓದಿ.  
 

ನಿಮ್ಮ ಒಸಡುಗಳು ದುರ್ಬಲವಾಗಿದ್ದರೆ, ಹಲ್ಲು ನೋವು(Teeth pain) ಮತ್ತು ಊತ ಅನುಭವಿಸುತ್ತಿದ್ದರೆ, ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಇದೆ ಎಂದು ಅರ್ಥಮಾಡಿಕೊಳ್ಳಿ. ಹಲ್ಲುಗಳ ನೋವಿಗೆ ಸಂಬಂಧಿಸಿದ ಸಮಸ್ಯೆಗಳು ನಾಲ್ಕು ರೀತಿಯ ವಿಟಮಿನ್ಸ್ -  ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿ ಉಂಟಾಗುತ್ತವೆ, ಇದಕ್ಕಾಗಿ ಜನರು ಮೆಡಿಸಿನ್ಸ್ ಬದಲು ಹೆಲ್ತಿ ಆಹಾರ ಸೇವಿಸುವ ಮೂಲಕ ಸರಿಮಾಡಬಹುದು.

ಯಾವ ವಿಟಮಿನ್ಸ್ ಹಲ್ಲುಗಳನ್ನು ದುರ್ಬಲಗೊಳಿಸುತ್ತೆ ನೋಡೋಣ 
ವಿಟಮಿನ್ ಸಿ (Vitamin C)
ಅಧ್ಯಯನಗಳು ಅಸ್ಕೋರ್ಬಿಕ್ ಆಮ್ಲದ (ವಿಟಮಿನ್ ಸಿ) ಕೊರತೆಯಿಂದಾಗಿ ಡೆಂಟೈನ್ ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತೆ. ಇದಕ್ಕೆ ಕಾರಣವೆಂದರೆ, ಡೆಂಟೈನ್ ನಿರ್ಮಿಸಲು ಸಹಾಯ ಮಾಡುವ ಸೆಲ್ಸ್ ನೇರವಾಗಿ ಒಳಸೇರದೆ ಆಸ್ಕೋರ್ಬಿಕ್ ಆಮ್ಲ ಪೂರೈಕೆಗೆ ಸಹಾಯ ಮಾಡುತ್ತೆ, ಹಾಗಾಗಿ ಕಡಿಮೆ ವಿಟಮಿನ್ ಸಿ ಎಂದರೆ ಕಡಿಮೆ ಸಂಖ್ಯೆಯ ಡೆಂಟೈನ್ ಉತ್ಪಾದಿಸುವ ಮತ್ತು ರಕ್ಷಿಸುವ ಜೀವಕೋಶಗಳ ಉತ್ಪಾದನೆಯಾಗುತ್ತೆ ಎಂದರ್ಥ. ಹಾಗಾಗಿ ವಿಟಮಿನ್ ಸಿ ಹಲ್ಲುಗಳ ಆರೋಗ್ಯಕ್ಕೆ ಮುಖ್ಯ.   
 

Tap to resize

ವಿಟಮಿನ್ ಸಿ ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಲ್ಲುಗಳಿಗೆ ಬಹಳ ಮುಖ್ಯವಾಗಿದೆ. ಹಲ್ಲುಗಳಲ್ಲಿ ಬ್ಯಾಕ್ಟೀರಿಯಾದ(Bacteria) ಸೋಂಕುಗಳನ್ನು ತಡೆಗಟ್ಟುವ ಕೆಲಸ ಮಾಡುತ್ತವೆ. ಆದ್ದರಿಂದ ಟೊಮೆಟೊ, ಕಿತ್ತಳೆ, ಬ್ರೊಕೋಲಿ, ಸೇಬು ಮತ್ತು ಮುಸಂಬಿ ತಿನ್ನಬೇಕು.

ವಿಟಮಿನ್ ಡಿ (VItamin D)
ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಕಾರ್ಯನಿರ್ವಹಣೆಗೆ ವಿಟಮಿನ್ ಡಿ ಅತ್ಯಗತ್ಯ.  ದೇಹದಲ್ಲಿ ಹಲ್ಲಿನ ದಂತಕವಚದ ಸಾಮಾನ್ಯ ರಚನೆಗೆ ಇವೆರಡು ಅತ್ಯಗತ್ಯ. ಹೆಚ್ಚಿನ ಮಟ್ಟದ ವಿಟಮಿನ್ ಡಿ ಹೊಂದಿರುವ ಮಕ್ಕಳಲ್ಲಿ ಉಳುಕು ಹಲ್ಲುಗಳ ಸಂಖ್ಯೆ ಕಡಿಮೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ವಿಟಮಿನ್ ಡಿ ಹಲ್ಲುಗಳಿಗೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಈ ವಿಟಮಿನ್ ಹಲ್ಲುಗಳನ್ನು ಆರೋಗ್ಯಕರವಾಗಿಡಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತೆ. ಇದು ಕ್ಯಾಲ್ಸಿಯಂ (Calcium) ಹೀರಿಕೊಳ್ಳಲು ಸಹಾಯ ಮಾಡುತ್ತೆ. ನೀವು ಪ್ರತಿದಿನ 20 ನಿಮಿಷಗಳನ್ನು ಸೂರ್ಯನ ಬೆಳಕಿನಲ್ಲಿ ಕಳೆಯಬೇಕು.

ವಿಟಮಿನ್ ಬಿ12 (Vitamin B12)
ಹಲ್ಲಿನ ಆರೋಗ್ಯಕ್ಕೆ ವಿಟಮಿನ್ ಬಿ 12 ಬಹಳ ಮುಖ್ಯ. ಇದು ಹಲ್ಲನ್ನು ದುರ್ಬಲಗೊಳಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ. ಆಹಾರದಲ್ಲಿ ಕೆಂಪು ಮಾಂಸ, ಮೀನು, ಮೊಟ್ಟೆ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಸೇವಿಸಲು ಪ್ರಾರಂಭಿಸಬೇಕು. ಅಣಬೆಗಳನ್ನು ವಿಟಮಿನ್ ಬಿ 12 ರ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.ಇವುಗಳೆಲ್ಲವೂ ಹಲ್ಲಿನ ಆರೋಗ್ಯಕ್ಕೆ ಅತ್ಯಗತ್ಯ.  

ವಿಟಮಿನ್ ಎ(Vitamin A)
ಈ ವಿಟಮಿನ್ ಕೊರತೆಯನ್ನು ನೀಗಿಸಲು, ಮೊಟ್ಟೆ, ಹಾಲು, ಕ್ಯಾರೆಟ್, ಕಿತ್ತಳೆ, ತರಕಾರಿಗಳು, ಪಾಲಕ್, ಸಿಹಿ ಗೆಣಸು, ಪಪ್ಪಾಯಿ, ಮೊಸರು, ಸೋಯಾಬೀನ್ ಮತ್ತು ಇತರ  ಹಸಿರು ತರಕಾರಿಗಳನ್ನು ಸೇವಿಸಿ.  ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಾಧ್ಯವಾದಷ್ಟು ಬೇಗ ಹಲ್ಲಿನ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. 

Latest Videos

click me!