ನಿಮ್ಗೆ ಪಾನಿಪುರಿ ಹೀಗ್ ಕೊಡ್ತಾರಾ ಚೆಕ್ ಮಾಡಿ, ಇಲ್ಲವೆಂದ್ರೆ ಲಿವರ್ ಫೇಲ್ಯೂರ್ ಆಗೋದು ಗ್ಯಾರಂಟಿ

Published : Feb 14, 2026, 05:27 PM IST

Risks of eating street food in India: ಕಲುಷಿತ ಆಹಾರವು ಹೆಪಟೈಟಿಸ್ ಎ ಮತ್ತು ಇ ಗೆ ಕಾರಣವಾಗಬಹುದು. ಇದು ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ 'ಅಕ್ಯೂಟ್ ಲಿವರ್ ಫೈಲ್ಯೂರ್' (ತೀವ್ರ ಯಕೃತ್ತು ವೈಫಲ್ಯ) ಅಂತಹ ಅಪಾಯಗಳನ್ನು ಉಂಟುಮಾಡಬಹುದು ಎಂದು ಡಾ. ವಾತ್ಸ್ಯ ಎಚ್ಚರಿಸಿದ್ದಾರೆ. 

PREV
16
ಮಹತ್ವದ ಎಚ್ಚರಿಕೆ ನೀಡಿದ ವೈದ್ಯರು

ಪಾನಿಪುರಿಯಿಂದ ಹಿಡಿದು ಮೊಮೊಸ್ ಮತ್ತು ಚಾಟ್ಸ್‌ಗಳವರೆಗೆ, ಬೀದಿ ಬದಿಯ ಆಹಾರವು ನಮ್ಮಲ್ಲಿ ಹೆಚ್ಚಿನವರಿಗೆ ಅಚ್ಚುಮೆಚ್ಚು. ಆದರೆ ಈ ರುಚಿಕರ ತಿನಿಸುಗಳ ಹಿಂದೆ ಅದೃಶ್ಯ ಆರೋಗ್ಯ ಅಪಾಯಗಳು ಅಡಗಿರಬಹುದು. ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಡಾ. ಶುಭಂ ವಾತ್ಸ್ಯ, ಅಶುಚಿಯಾದ ಆಹಾರ ಪದ್ಧತಿಗಳು ಕರುಳಿನ ಆರೋಗ್ಯದ ಮೇಲೆ ಹೇಗೆ ಗಂಭೀರ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

26
ನಿಮ್ಮ ನೆಚ್ಚಿನ ಬೀದಿ ಆಹಾರ ಎಷ್ಟು ಸುರಕ್ಷಿತ?

ಪಾಡ್‌ಕಾಸ್ಟ್ ಚರ್ಚೆಯ ಸಮಯದಲ್ಲಿ ರಣವೀರ್ ಆಹಾರ ಸುರಕ್ಷತೆಯ ಬಗ್ಗೆ ಒಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದರು. "ಒಬ್ಬ ಪಾನಿಪುರಿ ಮಾರಾಟಗಾರ ಶೌಚಾಲಯಕ್ಕೆ ಹೋಗಿ ಸರಿಯಾಗಿ ಕೈ ತೊಳೆಯದಿದ್ದರೆ, ಉಗುರುಗಳ ಅಡಿಯಲ್ಲಿ ಮಲದ ಕಣಗಳು ಉಳಿಯಬಹುದು. ಅವರು ಪೂರಿಗಳನ್ನು ನೀರಿನಲ್ಲಿ ಅದ್ದಿ ಬಡಿಸಿದಾಗ, ಇಡೀ ನೀರು ಕಲುಷಿತಗೊಳ್ಳುತ್ತದೆ. ನೀವು ಆ ನೀರನ್ನು ಸೇವಿಸಿದಾಗ ಅದು ನೇರವಾಗಿ ನಿಮ್ಮ ಹೊಟ್ಟೆಯನ್ನು ಸೇರುತ್ತದೆ," ಎಂದು ಅವರು ವಿವರಿಸಿದರು.

36
ಯಕೃತ್ತಿನ ವೈಫಲ್ಯಕ್ಕೂ ಕಾರಣ

ಈ ಬಗ್ಗೆ ವೈದ್ಯಕೀಯ ಅಪಾಯಗಳನ್ನು ವಿವರಿಸಿದ ಡಾ. ವಾತ್ಸ್ಯ, "ಇದು ವೈರಲ್ ಹೆಪಟೈಟಿಸ್, ವಿಶೇಷವಾಗಿ ಹೆಪಟೈಟಿಸ್ ಎ ಮತ್ತು ಹೆಪಟೈಟಿಸ್ ಇ ಸೋಂಕುಗಳಿಗೆ ಕಾರಣವಾಗಬಹುದು. ಇವು ಕಲುಷಿತ ಆಹಾರ ಮತ್ತು ಪಾನೀಯಗಳ ಮೂಲಕ ಹರಡುವ ಸೋಂಕುಗಳಾಗಿವೆ. ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ದೈಹಿಕವಾಗಿ ದುರ್ಬಲರಾಗಿರುವವರಲ್ಲಿ ಇದು ಯಕೃತ್ತಿನ ವೈಫಲ್ಯಕ್ಕೂ (Acute Liver Failure) ಕಾರಣವಾಗಬಹುದು," ಎಂದು ಎಚ್ಚರಿಸಿದ್ದಾರೆ.

46
ಹೊರಗೆ ತಿನ್ನುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

2024ರ ಸಂದರ್ಶನವೊಂದರಲ್ಲಿ ಡಾ. ರೇಖಾ ಶರ್ಮಾ ಅವರು, "ಭಾರತೀಯ ಬೀದಿ ಬದಿಯ ಆಹಾರವು ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಪ್ರತಿಬಿಂಬವಾಗಿದೆ. ಒಬ್ಬ ಭಾರತೀಯನಾಗಿ ಬೀದಿ ಬದಿಯ ಆಹಾರವನ್ನು ಪ್ರತಿರೋಧಿಸುವುದು ಕಷ್ಟ. ಆದರೆ, ಸರಿಯಾದ ರೀತಿಯಲ್ಲಿ ತಯಾರಿಸದಿದ್ದರೆ ಆರೋಗ್ಯದ ಅಪಾಯಗಳು ಕಟ್ಟಿಟ್ಟ ಬುತ್ತಿ," ಎಂದು ಹೇಳಿದ್ದಾರೆ.

56
ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತೆ

ಪಾನಿಪುರಿ, ವಡಾಪಾವ್, ಸಮೋಸಾ, ಕಬಾಬ್ ಮತ್ತು ಚಾಟ್ಸ್‌ಗಳನ್ನು ಅಶುದ್ಧ ನೀರಿನಿಂದ ತಯಾರಿಸಿದಾಗ ಅಥವಾ ಅಶುಚಿಯಾಗಿ ನಿರ್ವಹಿಸಿದಾಗ ಅವು ಬ್ಯಾಕ್ಟೀರಿಯಾಗಳ ತಾಣವಾಗುತ್ತವೆ. ಇದು ಇ-ಕೋಲಿ (E.coli), ಸಾಲ್ಮೊನೆಲ್ಲಾ ಮತ್ತು ಹೆಪಟೈಟಿಸ್ ಎ ನಂತಹ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

66
ವೈದ್ಯರು ಹೇಳಿದ್ದೇನು?

ಡಾ. ತಮೋರಿಶ್ ಕೋಲೆ ಅವರು ಸಹ ಮುನ್ನೆಚ್ಚರಿಕೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಗ್ರಾಹಕರು ನೈರ್ಮಲ್ಯ ಕಾಪಾಡುವ ಮಾರಾಟಗಾರರನ್ನು ಆರಿಸಿಕೊಳ್ಳಬೇಕು, ತಿನ್ನುವ ಮೊದಲು ಕೈ ತೊಳೆಯಬೇಕು ಮತ್ತು ಆಹಾರ ನಿರ್ವಹಣೆಯನ್ನು ಗಮನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅದೇ ರೀತಿ ಮಾರಾಟಗಾರರು ಸ್ವಚ್ಛ ನೀರನ್ನು ಬಳಸಬೇಕು. ಮೊದಲೇ ಕತ್ತರಿಸಿದ ಹಣ್ಣುಗಳನ್ನು ಮಾರಾಟ ಮಾಡಬಾರದು ಮತ್ತು ಮಾಂಸವನ್ನು ಸಂಪೂರ್ಣವಾಗಿ ಬೇಯಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಓದುಗರಿಗೆ ಸೂಚನೆ: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಶ್ನೆಗಳಿದ್ದರೆ ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories