Health Tips: ಅತಿಯಾದ ಫೈಬರ್ ಸೇವನೆಯಿಂದ ಯಾವ ಸಮಸ್ಯೆ ಕಾಡುತ್ತೆ?

First Published | Jun 15, 2022, 6:16 PM IST

ಫೈಬರ್ ಸೇವನೆ ಉತ್ತಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಅನ್ನೋದು ನಿಮಗೂ ಗೊತ್ತು. ನಾರಿನಂಶ ಸೇವಿಸುವುದರಿಂದ, ಜೀರ್ಣಕ್ರಿಯೆ ಉತ್ತಮವಾಗಿರುತ್ತೆ ಮತ್ತು ಕರುಳು ಅಂದರೆ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತೆ. ಸಾಮಾನ್ಯವಾಗಿ ಹಣ್ಣು, ತರಕಾರಿ, ಧಾನ್ಯ ಇತ್ಯಾದಿಗಳನ್ನು ಸೇವಿಸಿದಾಗ, ದೇಹಕ್ಕೆ ಫೈಬರ್ ಪೂರೈಕೆಯಾಗುತ್ತೆ. ಹೃದಯರಕ್ತನಾಳದ ವ್ಯವಸ್ಥೆ, ಕರುಳು, ದೇಹದಲ್ಲಿ ರಕ್ತದ ಗ್ಲೂಕೋಸ್ ಮಟ್ಟ ಕಾಪಾಡಿಕೊಳ್ಳಲು ಫೈಬರ್ ಬಹಳ ಮುಖ್ಯವಾದ ಅಂಶ. 

ನಾರಿನಂಶದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ, ಕರಗುವ ನಾರು ಮತ್ತು ಕರಗದ ನಾರು. ಈ ಎರಡು ನಾರುಗಳು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಎರಡೂ ಜೀರ್ಣಕ್ರಿಯೆಯಲ್ಲಿ ವಿಭಿನ್ನ ಪಾತ್ರವನ್ನು ಹೊಂದಿವೆ. ಇಂದು, ನಾರಿನ (Fiber)ಅತಿಯಾದ ಬಳಕೆಯಿಂದಾಗಿ ಯಾವ ಸಮಸ್ಯೆ ಎದುರಿಸಬೇಕಾಗುತ್ತೆ  ಎಂದು ನೋಡೋಣ.  

ಅತಿಯಾದ ಫೈಬರ್ ಸೇವನೆಯ ಅನಾನುಕೂಲತೆಗಳು
ಗ್ಯಾಸ್ (Gas)ಸಮಸ್ಯೆ
ನೀವು ಹೆಚ್ಚು ಫೈಬರ್ ಸೇವಿಸಿದರೆ, ಅದು ನಿಮಗೆ ಗ್ಯಾಸ್ ಸಮಸ್ಯೆ ಉಂಟುಮಾಡಬಹುದು.ಡೈಜೆಸ್ಟಿವ್ ಸಿಸ್ಟಮ್ ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಹೊಟ್ಟೆಯಲ್ಲಿ  ಗ್ಯಾಸ್ ರೂಪಗೊಂಡು ತೊಂದರೆ ಉಂಟಾಗುತ್ತೆ. ಗ್ಯಾಸ್ ಸಮಸ್ಯೆಯಾದರೆ ಮತ್ತೆ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ.

Tap to resize

ಅತಿಸಾರದ ಸಮಸ್ಯೆ
ಆಹಾರ ಜೀರ್ಣಿಸಿಕೊಳ್ಳುವಲ್ಲಿ ಸಮಸ್ಯೆ ಇದ್ದರೆ, ಆಗ ಅತಿಸಾರದ ಸಮಸ್ಯೆ ಇರುತ್ತೆ . ಹೆಚ್ಚು ನಾರಿನಂಶವಿರುವ ಆಹಾರ ತೆಗೆದುಕೊಳ್ಳುವ ಮೂಲಕ, ಆಹಾರವು ಗ್ಯಾಸ್ಟ್ರೋ ಇಂಟೆಸ್ಟಿನಲ್(Gastro intestinal) ನಾಳದಿಂದ ಬೇಗನೆ ಹಾದುಹೋಗುತ್ತೆ  ಮತ್ತು ಇದು ಅತಿಸಾರದ ಪ್ರಾರಂಭಕ್ಕೆ ಕಾರಣವಾಗಬಹುದು. ಆದುದರಿಂದ ಎಚ್ಚರವಾಗಿರಿ.

ಮಲಬದ್ಧತೆ(Constipation) ಸಮಸ್ಯೆ
ನೀವು ಫೈಬರ್ ಭರಿತ ಆಹಾರ ಸೇವಿಸಿದಾಗ, ಹೆಚ್ಚು ನೀರು ಕುಡಿಯುವುದು ಸಹ ಮುಖ್ಯ. ಒಂದು ವೇಳೆ ನೀವು ನೀರು ಕುಡಿಯಲು ವಿಫಲವಾದರೆ, ಫೈಬರ್ ದೇಹದಲ್ಲಿ ನೀರನ್ನು ಹೀರಿಕೊಳ್ಳುವ ಕೆಲಸ ಮಾಡುತ್ತೆ ಮತ್ತು ಮಲಬದ್ಧತೆಯ ಸಮಸ್ಯೆ ಪ್ರಾರಂಭವಾಗುತ್ತೆ.

ಡಿಹೈಡ್ರೇಷನ್ (Dehydration)ಸಮಸ್ಯೆ
ಫೈಬರ್ ಕರಗಿಸಲು ಹೆಚ್ಚಿನ ನೀರಿನ ಅಗತ್ಯವಿದೆ. ದೇಹದಲ್ಲಿ ಹೆಚ್ಚಿನ ನಾರಿನಂಶವಿದ್ದಾಗ, ಅದು ದೇಹದಲ್ಲಿರುವ ನೀರನ್ನು ಹೀರಿಕೊಳ್ಳುತ್ತೆ ಮತ್ತು ನಾವು ಡಿಹೈಡ್ರೇಷನ್ ಉಂಟಾಗುತ್ತದೆ. ಇದರಿಂದ ತಲೆ ತಿರುಗುವಿಕೆ, ನಿಶ್ಶಕ್ತಿ ಉಂಟಾಗುತ್ತೆ.

ಹೊಟ್ಟೆಯಲ್ಲಿ ನೋವು (Stomach pain()
ಡೈಜೆಸ್ಟಿವ್ ಸಿಸ್ಟಮ್ನಲ್ಲಿ ನಾರಿನಂಶವು ವೇಗವಾಗಿ ಜೀರ್ಣವಾಗದಿದ್ದರೆ, ಆಗ ಹೊಟ್ಟೆ ನೋವಿನ ಸಮಸ್ಯೆ ಪ್ರಾರಂಭವಾಗುತ್ತೆ. ಆಹಾರ ಸಂಪೂರ್ಣವಾಗಿ ಜೀರ್ಣವಾಗೊವರೆಗೆ ಇದು ನಿಮ್ಮನ್ನು ಕಾಡುತ್ತೆ. ಆದುದರಿಂದ ನಿಯಮಿತ ಪ್ರಮಾಣದಲಿ ನಾರಿನಾಂಶವನ್ನು ಸೇವಿಸೋದು ಉತ್ತಮ.

Latest Videos

click me!