ಚಿಕ್ಕ ಮಕ್ಕಳಲ್ಲಿ ಹೃದ್ರೋಗ, ಲಕ್ಷಣಗಳ ಬಗ್ಗೆ ಎಚ್ಚರವಿರಲಿ!

Published : Jun 14, 2022, 06:30 PM IST

ಹೃದ್ರೋಗವು ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು, ಜನರಲ್ಲಿ ಭಯ ಹುಟ್ಟಿಸಿದೆ. ಸರಿಯಾದ ಲೈಫ್ ಸ್ಟೈಲ್ ಪಾಲಿಸದೇ ಇರೋದು ಅಲ್ಲದೇ, ಕುಟುಂಬದಲ್ಲಿನ ಇತಿಹಾಸವೂ ಹೃದ್ರೋಗ ಸಮಸ್ಯೆಗೆ ಕಾರಣವಾಗಿದೆ. ಕರೋನಾ ಸಾಂಕ್ರಾಮಿಕ ರೋಗವು ಸಹ ಹೃದಯ ಸಮಸ್ಯೆಗೆ ಒಂದು ಕಾರಣವಾಗಿದೆ. ಹೃದ್ರೋಗ ವಯಸ್ಕರ ರೋಗ ಎಂದು ತಿಳಿದ್ರೆ ಅದು ತಪ್ಪು, ಮಕ್ಕಳು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

PREV
110
ಚಿಕ್ಕ ಮಕ್ಕಳಲ್ಲಿ ಹೃದ್ರೋಗ, ಲಕ್ಷಣಗಳ ಬಗ್ಗೆ ಎಚ್ಚರವಿರಲಿ!


ಹೃದ್ರೋಗ(Heart diseases) ವಯಸ್ಕರಲ್ಲಿ ಮಾತ್ರ ಕಂಡುಬರುವುದಿಲ್ಲ, ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಹೃದಯದ ಕಾಯಿಲೆ ಉಂಟಾಗಬಹುದು. ಮಕ್ಕಳಲ್ಲಿ ಕೆಲವು ಜನ್ಮಜಾತ ಹೃದಯ ದೋಷ ಕಂಡು ಬಂದ್ರೆ, ಅವು ಸಣ್ಣದಾಗಿರುತ್ತವೆ, ಅವುಗಳಿಗೆ ಚಿಕಿತ್ಸೆಯ ಅಗತ್ಯವಿಲ್ಲ.ಆದರೆ ಕೆಲವು ಕಾಯಿಲೆಗಳಿವೆ, ಅದು ಮಕ್ಕಳಿಗೆ ಮಾರಣಾಂತಿಕವಾಗಿದೆ, ಅಲ್ಲದೇ ಇದಕ್ಕೆ ಚಿಕಿತ್ಸೆಯು ಜೀವನಪರ್ಯಂತ ಇರುತ್ತದೆ. 

210

ಜನ್ಮಜಾತ ಹೃದ್ರೋಗ ಹೊಂದಿರುವ ಮಕ್ಕಳು ಹುಟ್ಟಿದ ತಕ್ಷಣ ಅವರಿಗೆ ಹೃದಯ ರೋಗ ಇದೆಯೇ ಎಂದು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ನಿಮ್ಮ ಮಕ್ಕಳಿಗೂ ಹೃದಯದ ಸಮಸ್ಯೆ ಇದ್ದರೆ, ಆವಾಗ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಯಾವುವು? ಯಾಕೆ ಮಕ್ಕಳಲ್ಲಿ(Children) ಹೃದ್ರೋಗ ಕಾಣಿಸಿಕೊಳ್ಳುತ್ತೆ ನೋಡೋಣ… 

310

ಚಿಕ್ಕ ಮಕ್ಕಳಲ್ಲಿ ಹೃದ್ರೋಗಕ್ಕೆ ಎರಡು ರೀತಿಯ ಕಾರಣಗಳಿವೆ:
ಮಕ್ಕಳಲ್ಲಿ ಜನ್ಮಜಾತ ಹೃದಯ ಸಮಸ್ಯೆಗಳು
ಗರ್ಭಧಾರಣೆಯ(Pregnancy) ಮೊದಲ ಆರು ವಾರಗಳಲ್ಲಿ, ಭ್ರೂಣ ಹೃದಯ ಆಕಾರ ಪಡೆಯಲು ಪ್ರಾರಂಭಿಸುತ್ತದೆ ಮತ್ತು ಬಡಿದುಕೊಳ್ಳಲು ಪ್ರಾರಂಭಿಸುತ್ತದೆ. ಗರ್ಭಧಾರಣೆಯ ಈ ನಿರ್ಣಾಯಕ ಸಮಯದಲ್ಲಿ, ಹೃದಯವನ್ನು ತಲುಪುವ ಮತ್ತು ಚಲಿಸುವ ಪ್ರಮುಖ ರಕ್ತನಾಳಗಳು ಸಹ ಬೆಳೆಯಲು ಪ್ರಾರಂಭಿಸುತ್ತವೆ.  ಆನುವಂಶಿಕತೆ, ಕೆಲವು ಮೆಡಿಕಲ್ ಕಂಡೀಶನ್, ಔಷಧಿಗಳು ಮತ್ತು ಧೂಮಪಾನದಂತಹ ಪರಿಸರ ಮಗುವಿನಲ್ಲಿ ತೀವ್ರವಾದ ಜನ್ಮಜಾತ ಹೃದಯ ದೋಷ ಉಂಟಾಗಲು ಕಾರಣವಾಗುತ್ತೆ.

410

ಮಕ್ಕಳಲ್ಲಿ ಹೃದ್ರೋಗದ ಎಚ್ಚರಿಕೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳು
ಹೃದ್ರೋಗ ಮಕ್ಕಳ ಬೆಳವಣಿಗೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಇದು ಮಾರಣಾಂತಿಕ ಸಮಸ್ಯೆಯನ್ನುಂಟುಮಾಡಬಹುದು. ಮಗುವು ಈ 5 ಎಚ್ಚರಿಕೆಯ ಚಿಹ್ನೆಗಳು ಮತ್ತು ರೋಗಲಕ್ಷಣ(Symptoms) ತೋರಿಸಿದರೆ, ಪೋಷಕರು ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಬೇಕು, ಇದರಿಂದ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

510

ಉಸಿರಾಟದ ತೊಂದರೆ ಮತ್ತು ಬೇಗನೆ ದಣಿದ(Tired) ಅಥವಾ ದುರ್ಬಲತೆಯ ಭಾವನೆ. ಮಗುವಿಗೆ ಪದೇ ಪದೇ ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಅಥವ ಸ್ವಲ್ಪ ಆಟವಾಡಿದ ತಕ್ಷಣ ದಣಿದಂತಹ ಭಾವನೆ ಉಂಟಾದರೆ ಆ ಸಂದರ್ಭದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಕೂಡಲೇ ವೈದ್ಯರಲ್ಲಿ ಪರೀಕ್ಷೆ ನಡೆಸಬೇಕು.

610

ತುಟಿಗಳ ಬಣ್ಣ, ಲೋಳೆಯ ಪೊರೆಗಳು ಮತ್ತು ಉಗುರುಗಳ ಬಣ್ಣ (Nail colour)ಬದಲಾಗುತ್ತಿದ್ದರೆ, ಅಲ್ಲದೇ ಚರ್ಮ ನೇರಳೆ ಅಥವಾ ಬೂದು-ನೀಲಿ ಬಣ್ಣದಲ್ಲಿ ಕಾಣಿಸಿಕೊಂಡರೆ, ಆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ್ದು ತುಂಬಾನೆ ಮುಖ್ಯ. 

710

ಹೃದಯದ ಬಡಿತದ ಬಗ್ಗೆ ಸರಿಯಾಗಿ ಗಮನ ಹರಿಸಬೇಕು ಯಾಕೆಂದರೆ, ಒಂದು ವೇಳೆ ಮಕ್ಕಳಲ್ಲಿ ವೇಗದ ಹೃದಯ ಬಡಿತ(Heart beat) ಉಂಟಾದರೆ, ತಲೆತಿರುಗುವಿಕೆ ಮತ್ತು ಪದೇ ಪದೇ ಮೂರ್ಛೆ ಹೋಗುವುದು, ಇವೆಲ್ಲವೂ ಹೃದಯದ ಸಮಸ್ಯೆಯಿಂದ ಉಂಟಾಗುತ್ತದೆ. 

810

ಇದಲ್ಲದೆ, ಎದೆ ನೋವು(Chest pain) ಸಹ ಒಂದು ಲಕ್ಷಣವಾಗಿದೆ. ಇದೇ ರೀತಿಯ ರೋಗಲಕ್ಷಣ ಹೊಂದಿರುವ ವಯಸ್ಕ ರೋಗಿಗಳಿಗಿಂತ ಮಕ್ಕಳಲ್ಲಿ ಕಂಡು ಬರುವ ಎಲ್ಲಾ ಎದೆ ನೋವು ಹೃದಯದ ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ.  

910

ಅಸಹಜ ರೋಗಲಕ್ಷಣಗಳು ಸೇರಿದಂತೆ ಅನಿಯಮಿತ ಹೃದಯದ ಶಬ್ದಗಳು ಕೇಳಿ ಬಂದರೂ ಸಹ ಆ ಬಗ್ಗೆ ಎಚ್ಚರ ವಹಿಸುವುದು ಮುಖ್ಯವಾಗಿದೆ. ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದರೆ ತಕ್ಷಣ ಹೃದಯ ತಜ್ಞರಲ್ಲಿ (Heart specialist)ಪರೀಕ್ಷೆ ನಡೆಸಿ. 

1010

ಈ ರೋಗಲಕ್ಷಣಗಳ ಜೊತೆಗೆ, ಹೃದಯದ ಸಮಸ್ಯೆ ಹೊಂದಿರುವ ಮಕ್ಕಳು, ವಿಶೇಷವಾಗಿ ಹೃದಯ ವೈಫಲ್ಯ, ಉಸಿರಾಟ(Breathing), ಹಸಿವಾಗದಿರುವುದು, ಬೆಳವಣಿಗೆ ಕಡಿಮೆಯಾಗುವುದು ಇತ್ಯಾದಿ ಹಲವು ರೋಗ ಲಕ್ಷಣ ಮಕ್ಕಳಲ್ಲಿ ಕಂಡು ಬರುತ್ತವೆ. ಈ ಸಮಯದಲ್ಲಿ ತಕ್ಷಣ ವೈದ್ಯರಲ್ಲಿ ಪರೀಕ್ಷೆ ನಡೆಸೋದು ಉತ್ತಮ. 

Read more Photos on
click me!

Recommended Stories