ಅಮ್ಮ ಹಣ್ಣು - ತರಕಾರಿ ತಿಂದರೆ ಹೊಟ್ಟೆಯಲ್ಲೇ ಮಗು ಟೇಸ್ಟ್‌ ಮಾಡಿ ಖುಷಿಯಿಂದ ನಗತ್ತಂತೆ

First Published Sep 26, 2022, 5:46 PM IST

ಗರ್ಭಾವಸ್ಥೆಯಲ್ಲಿ, ಅಮ್ಮ, ಅಜ್ಜಿ ಮತ್ತು ಮನೆಯ ಹಿರಿಯರು ಉತ್ತಮ ಆಹಾರವನ್ನು ಸೇವಿಸಲು ಹೇಳುತ್ತಾರೆ. ಯಾಕಂದ್ರೆ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ತಾಯಿಯ ಉತ್ತಮ ಆಹಾರವು ಬಹಳ ಮುಖ್ಯ ಎಂದು ಹೇಳಲಾಗುತ್ತೆ. ಇದರಿಂದ ಮಗು ಆರೋಗ್ಯವಂತ ಮಗುವಾಗಿ ಬೆಳೆಯುತ್ತೆ. ಆದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಗೊತ್ತಾ? ಗರ್ಭಾವಸ್ಥೆಯಲ್ಲಿ, ಮಗುವು ರುಚಿ ಮತ್ತು ವಾಸನೆಯನ್ನು ತಿಳಿಯಲು ಪ್ರಾರಂಭಿಸುತ್ತೆ ಗೊತ್ತಾ! ಹೌದು, ಗರ್ಭಿಣಿಯಾಗಿದ್ದಾಗ ನಾವು ತಿನ್ನೋ ಆಹಾರದ ರುಚಿಯನ್ನು ಮಗು ಗ್ರಹಿಸುತ್ತೆ.

ಗರ್ಭಿಣಿಯಾಗಿದ್ದಾಗ(Pregnant) ನಾವು ತಿನ್ನೋ ಆಹಾರ ಮಗುವಿನ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತೆ. ಈ ಮಕ್ಕಳು ಗರ್ಭದಲ್ಲಿಯೇ ರುಚಿಯನ್ನು ಕಂಡುಹಿಡಿಯುತ್ತಾರೆ ಅನ್ನೋದು ನಿಮಗೆ ಗೊತ್ತಾ?. ಹೌದು ಇದು ಅನೇಕ ಸಂಶೋಧನೆಗಳಲ್ಲಿಯೂ ಬಹಿರಂಗವಾಗಿದೆ. ಮಗುವು ತಾಯಿಯ ಹೊಟ್ಟೆಯಲ್ಲಿದ್ದಾಗ, ಸಿಹಿ-ಕಹಿಯಾದ ರುಚಿಯನ್ನು ಗ್ರಹಿಸುತ್ತೆ.
 

ಮಗುವು ತಾಯಿ ತಿನ್ನುವ ರೀತಿಯಲ್ಲಿಯೇ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತೆ. ಗರ್ಭದಲ್ಲಿ ಬೆಳೆಯುವ ಮಗುವು ರುಚಿಯನ್ನು(Taste) ತಿಳಿಯಲು ಪ್ರಾರಂಭಿಸುತ್ತೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ. ನೀವು ಕಹಿಯಾದ ಆಹಾರ ಸೇವಿಸಿದ್ರೆ ಮಗು ಅದಕ್ಕೆ ಪ್ರತಿಕ್ರಿಯಿಸುತ್ತದೆ, ಅದೇ ರೀತಿ ಸಿಹಿಯಾದ ಆಹಾರ ಸೇವಿಸಿದ್ರೆ ಅದಕ್ಕೂ ಪ್ರತಿಕ್ರಿಯಿಸುತ್ತೆ.

ಗರ್ಭಾವಸ್ಥೆಯ(Pregnancy) ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸಲು ವೈದ್ಯರು ತಾಯಿಗೆ ಸಲಹೆ ನೀಡುತ್ತಾರೆ. ತಾಯಿ ಉತ್ತಮ ಆಹಾರ ಸೇವಿಸಿದ್ರೆ,  ಮಗುವಿನ ಸರಿಯಾದ ಬೆಳವಣಿಗೆಗೆ ಕಾರಣವಾಗುತ್ತೆ. ಸಂಶೋಧನೆಯಲ್ಲೂ ಸಹ ಇದರ ಬಗ್ಗೆ ಬಹಳಷ್ಟು ಮಾಹಿತಿ ನೀಡಲಾಗಿದೆ. ಬನ್ನಿ ಸಂಶೋಧನೆ ಏನು ಹೇಳುತ್ತೆ ಎಂದು ತಿಳಿಯೋಣ.

ಗರ್ಭಾವಸ್ಥೆಯಲ್ಲಿ ಶಿಶುಗಳು ರುಚಿ ಮತ್ತು ವಾಸನೆಯನ್ನು ಗುರುತಿಸುತ್ತವೆ
ಲಂಡನ್ ನ ಡರ್ಹಾಮ್ ವಿಶ್ವವಿದ್ಯಾಲಯದಲ್ಲಿ ಸುಮಾರು 100 ಗರ್ಭಿಣಿಯರನ್ನು ಸಂಶೋಧಿಸಲಾಯಿತು. ವಿಜ್ಞಾನಿಗಳು ಈ ಮಹಿಳೆಯರ 4ಡಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (Ultrasound scan)ಮಾಡಿದರು, ಇದರಲ್ಲಿ ಮಗುವಿನ ಮುಖದ ದೇಹದ ಹಾವ-ಭಾವ ಕಂಡುಬಂದವು.

ಸಂಶೋಧನೆಯಲ್ಲಿ ತಿಳಿದು ಬಂದಂತೆ ಗರ್ಭಿಣಿ ತಾಯಂದಿರಿಗೆ ವಿವಿಧ ರೀತಿಯ ಆಹಾರ ನೀಡುವ ಮೂಲಕ ಗರ್ಭದಲ್ಲಿರುವ ತಾಯಿಗೆ ಸಿಹಿಯಾದ ಕ್ಯಾರೆಟ್ ಅನ್ನು ತಿನ್ನಲು ನೀಡಲಾಯಿತು, ನಂತರ ಗರ್ಭಿಣಿ ಮಹಿಳೆಯರ 4ಡಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ನಲ್ಲಿ, ಮಗುವಿನ ಮುಖದಲ್ಲಿ ಸಂತೋಷದ(Happy) ಭಾವನೆ ಕಂಡು ಬಂದಿತ್ತು.

ಹಾಗೆಯೇ, ತಾಯಿಗೆ ತಿನ್ನಲು ತುಂಬಾ ಖಾರವಾದ ಆಹಾರವನ್ನು(Food) ನೀಡಿದಾಗ, ಮಗುವಿನ ಮುಖದಲ್ಲಿ ಅಳುವ ಬಾವನೆಗಳಿದ್ದವು. ಗರ್ಭದಲ್ಲಿಯೇ, ಮಗುವಿನ ರುಚಿ ಮತ್ತು ವಾಸನೆಯ ಅಭ್ಯಾಸವು ರೂಪುಗೊಳ್ಳಲು ಪ್ರಾರಂಭಿಸುತ್ತೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಗುವು ಹುಟ್ಟಿದ ನಂತರ ಇದೇ ರೀತಿ ತಿನ್ನಲು ಇಷ್ಟಪಡುತ್ತೆ.

ಈ ಸಂಶೋಧನೆಯ(Research) ನಂತರ, ಜನರು ಆರೋಗ್ಯಕರವಾಗಿ ತಿನ್ನುವ ಅಭ್ಯಾಸವನ್ನು ಮಾಡಿದರು ಎಂದು ವಿಜ್ಞಾನಿಗಳು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರಿಗೆ ತಿನ್ನಲು ಆರೋಗ್ಯಕರ ವಸ್ತುಗಳನ್ನು ನೀಡಬೇಕು, ಇದು ಮಗುವಿನ ಬೆಳವಣಿಗೆಗೆ(Child development) ತುಂಬಾ ಅಗತ್ಯ. ಇದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. 

ಆರೋಗ್ಯಕರ ಆಹಾರ ಗರ್ಭಾವಸ್ಥೆಯಲ್ಲಿ ಮಗುವಿನ ಸರಿಯಾದ ಬೆಳವಣಿಗೆಗೆ ಕಾರಣವಾಗುತ್ತೆ ಮತ್ತು ನಂತರ ಮಗು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತೆ, ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ (Physical and mental health)ಹೆಚ್ಚು ಪ್ರಯೋಜನಕಾರಿ. ಇನ್ನು ಮುಂದೆ ಗರ್ಭಿಣಿ ತಾಯಂದಿರು ಉತ್ತಮ ಆಹಾರವನ್ನೇ ಸೇವಿಸಬೇಕು.
 

click me!