ಸಂಜೆ ಕಾಫಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೇ?

First Published | Sep 25, 2022, 3:57 PM IST

ಕೆಲಸದ ನಡುವೆ ದಿನವಿಡೀ ಆಯಾಸ, ತಲೆನೋವು ಮತ್ತು ನಿದ್ರಾಹೀನತೆಯ ಸಮಸ್ಯೆ ತಪ್ಪಿಸಲು ಜನರು ಹೆಚ್ಚಾಗಿ ಕಾಫಿ ಸಿಪ್ ಮಾಡ್ತಾರೆ. ಅನೇಕ ಜನರು ಕಾಫಿಗೆ ಎಷ್ಟು ಒಗ್ಗಿಕೊಂಡಿದ್ದಾರೆಂದರೆ, ಬೆಳಿಗ್ಗೆ ತಮ್ಮ ಕಣ್ಣು ತೆರೆಯುವುದರಿಂದ ಹಿಡಿದು ರಾತ್ರಿ ಮಲಗುವರೆಗೂ  ಅವರಿಗೆ 6 ರಿಂದ 8 ಕಪ್ ಕಾಫಿಯ ಅಗತ್ಯವಿದೆ. ಕಾಫಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಲವಾರು ಅಂಶಗಳು ಕಂಡುಬರುತ್ತವೆ. ಆದ್ರೆ ಕಾಫಿ ಕುಡಿಯೋದ್ರಿಂದ ತೂಕ ಹೆಚ್ಚುತ್ತೆ ಅನ್ನುತ್ತಾರೆ ಅದು ನಿಜಾನಾ? 

ಮೂಡ್ ಫ್ರೆಶ್ ಮಾಡಲು ಒಂದು ಕಪ್ ಕಾಫಿ ಕುಡಿಯೋದು ಉತ್ತಮ ಎಂದು ಕಾಫಿ ಪ್ರಿಯರು ಹೇಳ್ತಾರೆ. ಆದರೆ ತೂಕ ಇಳಿಸುವ (weight loss) ಜನರು ಹೆಚ್ಚಾಗಿ ಕಾಫಿ ಕುಡಿಯುವುದನ್ನು ನಿಲ್ಲಿಸುತ್ತಾರೆ. ಯಾಕಂದ್ರೆ ಸಂಜೆ ಕಾಫಿ ಕುಡಿಯೋದ್ರಿಂದ ತೂಕ ಹೆಚ್ಚಾಗುತ್ತೆ ಎಂದು ಜನ ಭಾವಿಸುತ್ತಾರೆ. ನಿಮಗೂ ಅದೇ ರೀತಿ ಅನಿಸಿದರೆ, ಇದನ್ನು ನೀವು ಓದ್ಲೇ ಬೇಕು… 

ಕಾಫಿ ಕುಡಿಯುವುದರಿಂದ ತೂಕ ಹೆಚ್ಚಾಗಬಹುದೇ?
ಕಾಫಿಯಲ್ಲಿ ಹೇರಳವಾದ ಕೆಫೀನ್ ಇದೆ, ಇದನ್ನು ಆರೋಗ್ಯಕ್ಕೆ ಹಾನಿಕಾರಕವೆಂದು ಹೇಳಲಾಗುತ್ತೆ. ಕೆಫೀನ್ ಅನ್ನು ಹೆಚ್ಚಾಗಿ ಸೇವಿಸಿದರೆ, ಅದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಸಂಜೆ ಕಾಫಿ (evening coffee) ಕುಡಿಯುವುದರಿಂದ ದೇಹದ ಚಯಾಪಚಯ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ತೂಕ ಹೆಚ್ಚಾಗುತ್ತೆ. 

Tap to resize

ಡಯಟೀಷಿಯನ್ ನವನೀತ್ ಗುಪ್ತಾ ಹೇಳುವಂತೆ, ಕಾಫಿಯನ್ನು ಸಂಜೆ 3 ರಿಂದ 4 ಗಂಟೆಯೊಳಗೆ ಸೇವಿಸಿದರೆ, ಅದು ಒಳ್ಳೆಯದು, ಆದರೆ ನೀವು ಸಂಜೆ 6 ಗಂಟೆಯ ನಂತರ ಕಾಫಿ ಕುಡಿದರೆ, ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತೆ. ನೀವು ಸಂಜೆ ತಡವಾಗಿ ಕಾಫಿ ಕುಡಿದರೆ, ಚಯಾಪಚಯವು ನಿಧಾನವಾಗಿರುತ್ತದೆ, ಇದು ತೂಕ ಹೆಚ್ಚಳಕ್ಕೆ ಮುಖ್ಯ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಸಂಜೆ ಎಷ್ಟು ಕಾಫಿ ಕುಡಿಯುವುದು ಸರಿ? 
ನೀವು ಸಂಜೆ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಒಂದು ಕಪ್ ಗಿಂತ ಹೆಚ್ಚು ಅಂದರೆ 100 ಮಿ.ಲೀ.ಗಿಂತ ಹೆಚ್ಚು ಕುಡಿಯಬೇಡಿ. ಸಂಜೆ ಹೆಚ್ಚು ಕಾಫಿ ಕುಡಿಯುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ನಿದ್ರೆಯಿಂದಾಗಿ ತೂಕ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ.

ವೈಟ್ ಮ್ಯಾನೇಜ್ ಮಾಡಲು ಕಾಫಿಯನ್ನು ಸೇವಿಸುವುದು ಹೇಗೆ?
ತೂಕ ನಷ್ಟ ಮತ್ತು ನಿರ್ವಹಣೆಗೆ ಬ್ಲ್ಯಾಕ್ ಕಾಫಿ (black coffee) ಸೇವನೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಹಾಲಿನ ಕಾಫಿಯಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ, ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆದುದರಿಂದ ಸಾಧ್ಯವಾದಷ್ಟು ಬ್ಲ್ಯಾಕ್ ಕಾಫಿ ಸೇವಿಸಿ. 
 

ತೂಕ ಇಳಿಸಿಕೊಳ್ಳಲು ನೀವು ಕಾಫಿ ಕುಡಿಯುತ್ತಿದ್ದರೆ, ಅದರಲ್ಲಿ ಸಕ್ಕರೆ ಹಾಕಬೇಡಿ. ಕಾಫಿಯ ರುಚಿಯನ್ನು ಹೆಚ್ಚಿಸಲು ನೀವು ಸಕ್ಕರೆ ಬದಲಾಗಿ ಬೆಲ್ಲ, ಜೇನುತುಪ್ಪ ಅಥವಾ ಬ್ರೌನ್ ಶುಗರ್ ಬಳಸಬಹುದು. ಇದು ಕೂಡ ಕಾಫಿಯ ರುಚಿಯನ್ನು ಹೆಚ್ಚಿಸುತ್ತೆ. 
 

Latest Videos

click me!