ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಒತ್ತಡ(Stress) ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಉದ್ಯೋಗ ನಷ್ಟ, ಸಾಲ, ವ್ಯವಹಾರವು ಚೆನ್ನಾಗಿನಡೆಯದಿರೋದು, ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ನಷ್ಟ, ಇತ್ಯಾದಿಗಳು ಸೇರಿವೆ. ಇದರಿಂದ ಬಳಲುತ್ತಿರುವ ಜನರು ಕತ್ತಲೆ ಜಗತ್ತಿನಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ವ್ಯಕ್ತಿಗೆ ಸಮಸ್ಯೆಗಳಿಂದ ಎಷ್ಟು ತೊಂದರೆಗೆ ಒಳಗಾಗುತ್ತಾರೆ ಎಂದರೆ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಬಯಸುತ್ತಾರೆ. ಹಾಗಾದರೆ ಸಮಸ್ಯೆಗೆ ಒಳಗಾಗದಿರಲು ಏನು ಮಾಡಬೇಕು ನೋಡೋಣ.