ರಾತ್ರಿ ನಿದ್ರೆಯೇ ಬರ್ತಿಲ್ವಾ? ಯೋಚಿಸ್ಬೇಡಿ ಇಲ್ಲಿದೆ ಪರಿಹಾರ

Published : May 24, 2022, 01:25 PM IST

ಬಾಲ್ಯದಿಂದಲೂ, ಬೇಗ ಮಲಗುವುದು ಮತ್ತು ಎದ್ದೇಳುವುದು ಮನುಷ್ಯನನ್ನು ಆರೋಗ್ಯವಂತ, ಶ್ರೀಮಂತ ಮತ್ತು ಬುದ್ಧಿವಂತನನ್ನಾಗಿ ಮಾಡುತ್ತದೆ ಎಂದು ನಾವು ಕೇಳಿದ್ದೇವೆ. ಈ ಸಿದ್ಧಾಂತವನ್ನು ತಿಳಿದುಕೊಂಡು, ಕೆಲವರು ಅದನ್ನೇ ಫಾಲೋ ಮಾಡಿದ್ರೆ, ಇನ್ನು ಕೆಲವರು ಅದಕ್ಕೆ ವಿರುದ್ಧವಾಗಿ ಮಾಡ್ತಾರೆ. ಇದರರ್ಥ ಇತ್ತೀಚಿನ ದಿನಗಳಲ್ಲಿ ಜನರು ಕಡಿಮೆ ನಿದ್ರೆ ಮಾಡುವುದು, ಹೆಚ್ಚು ಎಚ್ಚರವಾಗಿರುತ್ತಾರೆ. 

PREV
112
ರಾತ್ರಿ ನಿದ್ರೆಯೇ ಬರ್ತಿಲ್ವಾ? ಯೋಚಿಸ್ಬೇಡಿ ಇಲ್ಲಿದೆ ಪರಿಹಾರ

ಕಾರಣ ಏನೇ ಇರಲಿ, ಸರಿಯಾಗಿ ನಿದ್ರೆ ಮಾಡದೇ ಇರೋದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಏಕೆ ಸಂಭವಿಸುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ. ರಾತ್ರಿಯಿಡೀ ಸರಿಯಾಗಿ ನಿದ್ರೆ (Sleep) ಮಾಡದೆ, ಎಚ್ಚರವಾಗಿರಲು ಪ್ರಮುಖ ಕಾರಣ ಏನಿರಬಹುದು ಅನ್ನೋದನ್ನು ತಿಳಿಯಲು ಇಲ್ಲಿ ನೋಡಿ.

212

ಸಂಶೋಧನೆಯ ಪ್ರಕಾರ, ನಿದ್ರೆ ಮಾಡಲು ಸಾಧ್ಯವಾಗದಿರುವುದರ ಹಿಂದಿನ ಅತ್ಯಂತ ಸಾಮಾನ್ಯ ಕಾರಣವೆಂದರೆ ಒತ್ತಡ (Stress) ಇದ್ದಾಗ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ, ಇದೊಂದು ಒತ್ತಡದ ಹಾರ್ಮೋನ್ ಆಗಿದೆ. ಈ ಕಾರಣದಿಂದ, ದೇಹಕ್ಕೆ ಆರಾಮ ಸಿಗಲು ಸಾಧ್ಯವಾಗುವುದಿಲ್ಲ.  ಮೆದುಳು ಸಕ್ರಿಯವಾಗಿರುತ್ತದೆ, ಇದರಿಂದಾಗಿ ನಿದ್ರೆಗೆ ಜಾರಲು ಕಷ್ಟವಾಗುತ್ತೆ.

312

ಸ್ಲೀಪ್ ಅಪ್ನಿಯಾ ಎಂಬುದು ಒಂದು ನಿದ್ರೆಯ ಸಮಸ್ಯೆಯಾಗಿದೆ, ಈ ಕಾರಣದಿಂದಾಗಿ ನಿದ್ರೆ ಪೂರ್ಣಗೊಳ್ಳುವುದಿಲ್ಲ ಅಥವಾ ಪೂರ್ಣ ನಿದ್ರೆಯ ನಂತರವೂ ದಣಿದಂತಹ (Tired) ಭಾವನೆ ಉಂಟಾಗುತ್ತೆ. ಇದರಿಂದ ಹಲವಾರು ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತೆ. ಆದುದರಿಂದ ಈ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಿ. 

412

ತುಂಬಾ ಸಮಯದವರೆಗೆ ಡೀಹೈಡ್ರೇಟ್ ಆಗಿದ್ದರೆ ಇದೂ ನಿದ್ರಾಹೀನತೆಗೆ ಕಾರಣವಾಗಬಹುದು ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಇದರರ್ಥ ದಿನವಿಡೀ ಸರಿಯಾದ ಪ್ರಮಾಣದ ನೀರು (Water) ಅಥವಾ ಯಾವುದೇ ಲಿಕ್ವಿಡ್ ಐಟಮ್ ಸೇವಿಸದಿರುವುದು ಸಹ ನಿದ್ರೆ ಮಾಡದಿರಲು ಕಾರಣವಾಗಿದೆ.

512

ನಿದ್ರಾಹೀನತೆ ಅಂದ್ರೆ ಏನು? ಇದೊಂದು ನಿದ್ರೆಯ ಅಸ್ವಸ್ಥತೆಯಾಗಿದ್ದು, ಇದು ನೀವು ರಾತ್ರಿಯಲ್ಲಿ ನಿದ್ರೆ ಮಾಡದೇ ಇರಲು ಕಾರಣವಾಗಬಹುದು ಮತ್ತು ದಿನವಿಡೀ ಆಯಾಸವನ್ನು ಅನುಭವಿಸಬಹುದು. ಸಣ್ಣ ಕೆಲಸ ಮಾಡುವಾಗಲು ಸುಸ್ತನ್ನ ಅನುಭವಿಸಬಹುದು. 

612

ಕೆಫೀನ್‌ನ ಅತಿಯಾದ ಸೇವನೆ ನಿದ್ರೆಗೆ ಹೆಚ್ಚಿನ ತೊಂದರೆ ನೀಡುತ್ತೆ ಅನ್ನೋದು ಗೊತ್ತಾ?.ಇದು ನಮ್ಮ ದೇಹದಲ್ಲಿ ಅಡ್ರಿನಲ್ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ, ಅಲ್ಲದೇ ನಮ್ಮನ್ನು ಮತ್ತೆ ಸಕ್ರಿಯ ಮತ್ತು ಶಕ್ತಿಯುತವಾಗಿಸುತ್ತದೆ. ಆದ್ದರಿಂದ ನೀವು ಕೆಫೆನ್ ಪ್ರಿಯರಾಗಿದ್ರೆ ಕೂಡಲೇ ಕಾಫೀ- ಚಹಾ (Coffee) ಮತ್ತು ಕಾಫಿ ಸೇವನೆ ಕಡಿಮೆ ಮಾಡಿ.

712

ಇಂದು ಮೊಬೈಲ್ ಫೋನ್ ಗಳನ್ನು(Mobile phone) ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಮೊಬೈಲ್ ಬೇಕು. ಆದರೆ ಹೆಚ್ಚಿನ ಸಮಯ ಅದನ್ನು ಬಳಸೋದು ಸರೀನಾ? ದೀರ್ಘ ಕಾಲದವರೆಗೆ ಮೊಬೈಲ್ ಫೋನ್ ನೋಡುವುದು ರಾತ್ರಿಯಲ್ಲಿ ನಿದ್ರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಂತರ ದಿನವಿಡೀ ದಣಿದ ಅನುಭವವನ್ನು ನೀಡುತ್ತದೆ ಎಂಬುದು ನಿಜ.

812

ನಿಮಗೆ ಫಿಟ್ ಆಗಿರೋದು ಅಂದ್ರೆ ತುಂಬಾನೆ ಇಷ್ಟ ಇರಬಹುದು. ಆದರೆ ದಿನವಿಡೀ ಕುಳಿತು ವರ್ಕೌಟ್ (Workout) ಮಾಡುವುದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ, ಇದರಿಂದಾಗಿ ನೀವು ದಿನವಿಡೀ ಸೋಮಾರಿತನ (Lazyness) ಮತ್ತು ಆಯಾಸವನ್ನು (Tiredness) ಅನುಭವಿಸುತ್ತೀರಿ. ವರ್ಕ್ ಔಟ್ (Work out)ಮಾಡೋದು ಸರಿ, ಆದ್ರೆ ಅದು ಮಿತಿ ಮೀರದೇ ಇದ್ರೆ ಉತ್ತಮ.

912

ಅಧ್ಯಯನಗಳ ಪ್ರಕಾರ, ರಾತ್ರಿಯಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಹೃದಯ (Heart) ಬಡಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ, ಇದು ನಿಮ್ಮ ನಿದ್ರಾ  ಚಕ್ರವನ್ನು ತೊಂದರೆಗೊಳಿಸಲು ಮುಖ್ಯ ಕಾರಣವಾಗಿದೆ. ಆದುದರಿಂದ ರಾತ್ರಿ ವೇಳೆ ವ್ಯಾಯಾಮ ಮಾಡೋದನ್ನು ಬಿಡುವುದು ಉತ್ತಮ. 

1012

ರಾತ್ರಿಯಲ್ಲಿ ವರ್ಕೌಟ್ ಮಾಡುವುದರಿಂದ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ ಮತ್ತು ನೀವು ಜಿಮ್ ನಲ್ಲಿ(Gym) ವರ್ಕೌಟ್ ಮಾಡುತ್ತಿದ್ದರೆ, ಇಲ್ಲಿ ಹೊಳೆಯುವ ಪ್ರಕಾಶಮಾನವಾದ ದೀಪಗಳು ಮೆಲಟೋನಿನ್ ಅಂದರೆ ನಿದ್ರೆಯ ಹಾರ್ಮೋನ್ ರೂಪುಗೊಳ್ಳದಂತೆ ತಡೆಯುತ್ತವೆ, ಇದರಿಂದ ನಿಮಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

1112

ಆರೋಗ್ಯಕರ ನಿದ್ರೆಗೆ ಆರಾಮದಾಯಕ ವಾತಾವರಣ ಅತ್ಯಗತ್ಯ, ಆದರೆ ಕೋಣೆಯ ತಾಪಮಾನ ನಿಮ್ಮ ನಿದ್ರೆಗೆ ಭಂಗ ತರುತ್ತದೆ. ಆದ್ದರಿಂದ ನಿಮ್ಮ ಮಲಗುವ ಕೋಣೆಯ ತಾಪಮಾನ ಸಾಮಾನ್ಯವಾಗಿರುತ್ತದೆ ಎಂಬುದನ್ನು ನೋಡಿ. ತಾಪಮಾನ (Temperature) ಸಾಮಾನ್ಯವಾಗಿದ್ರೆ ನೀವು ಚೆನ್ನಾಗಿ ನಿದ್ರೆ ಮಾಡಬಹುದು

1212

ನಿದ್ರಾ ಸಮಯದ ತಿಂಡಿಗಳನ್ನು ತಿನ್ನೋದನ್ನು ಮಾತ್ರ ಮಾಡ್ಬೇಡಿ. ರಾತ್ರಿ ವೇಳೆ ತಿಂಡಿ ತಿನ್ನೋದ್ರಿಂದ ನಿದ್ರೆಯ ಹಾರ್ಮೋನುಗಳನ್ನು(Harmone) ಉತ್ಪಾದಿಸುವ ನಿಮ್ಮ ಸಾಮರ್ಥ್ಯ ಬದಲಾಯಿಸಬಹುದು, ಇದರಿಂದಾಗಿ ನಿದ್ರೆ ಸರಿಯಾಗಿ ಬರೋದಿಲ್ಲ, ಮತ್ತೆ ನಿದ್ದೆ ಇಲ್ಲದ ರಾತ್ರಿಯನ್ನು ಎದುರಿಸಬೇಕಾಗಿ ಬರುತ್ತೆ. 

Read more Photos on
click me!

Recommended Stories