ಸಮ್ಮರ್ ಟಿಪ್ಸ್ : ವಾಕಿಂಗ್, ವರ್ಕ್ ಔಟ್ ಮಾಡಲು ಹೋಗೋ ಮುನ್ನ...

First Published Mar 31, 2021, 3:49 PM IST

ಬೇಸಿಗೆ ಬಿಸಿ ಹೆಚ್ಚಾಗಿದ್ದು, ಹೊರಾಂಗಣದಲ್ಲಿ ವರ್ಕೌಟ್ ಮಾಡುವುದು ಸವಾಲಾಗಿದೆ. ಆದರೆ ಇದು ವ್ಯಾಯಾಮವನ್ನು ಬಿಟ್ಟು ಬಿಡಲು ಒಂದು ಎಕ್ಸ್ಯೂಸ್ ಅಲ್ಲ. ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೊರಾಂಗಣ ವ್ಯಾಯಾಮವನ್ನು ಇನ್ನೂ ಮುಂದುವರಿಸಬಹುದು. ಜಾಗರೂಕರಾಗಿರದಿದ್ದರೆ, ಬೇಸಿಗೆಯ ಉಷ್ಣತೆ ಮತ್ತು ತೀವ್ರವಾದ ವ್ಯಾಯಾಮದ ಸಂಯೋಜನೆಯು ಶಾಖದ ಒತ್ತಡ, ಪಾರ್ಶ್ವವಾಯು, ವಾಕರಿಕೆ, ತಲೆನೋವು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಹೈಡ್ರೇಟ್ ಆಗಿರುವುದು ಬಹಳ ಮುಖ್ಯ.