ಈ ಹಣ್ಣು ಪುರುಷರ 5 ಲೈಂಗಿಕ ಸಮಸ್ಯೆಗಳಿಗೆ ಬೆಸ್ಟ್ ಮೆಡಿಸಿನ್ !

First Published | May 20, 2022, 5:01 PM IST

ಪುಟಾಣಿಗಳಿಂದ ಹಿಡಿದು ಹಿರಿಯರವರೆಗೆ ದಾಳಿಂಬೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ದಾಳಿಂಬೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ, ಇದು ತುಂಬಾನೇ ರುಚಿಯಾಗಿರೋದು ಮಾತ್ರವಲ್ಲದೆ ಅನೇಕ ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತೆ ಅನ್ನೋದು ಗೊತ್ತಾ? 
 

ಹೌದು ದಾಳಿಂಬೆ ಹಣ್ಣು ಕಡಿಮೆ ಟೆಸ್ಟೋಸ್ಟೆರಾನ್(Testosterone) ಮಟ್ಟದಿಂದ ಕಾಮಾಸಕ್ತಿ ಹೆಚ್ಚಲು, ಮತ್ತು ಇರೆಕ್ಟಿಕಲ್ ಡಿಸ್ ಫಂಕ್ಷನ್ ವರೆಗೆ ಪುರುಷರ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತೆ ಎಂದು ತಜ್ಞರು ಹೇಳುತ್ತಾರೆ. ಈ ಸೂಪರ್ ಫುಡ್ ಆಂಟಿಆಕ್ಸಿಡೆಂಟ್ ಗಳಿಂದ ತುಂಬಿದೆ, ಇದು ಪುರುಷರು ಮತ್ತು ಮಹಿಳೆಯರ ಲೈಂಗಿಕ ಜೀವನವನ್ನು ಆಕ್ಟಿವ್ ಆಗಿಡಲು ಸಹಾಯ ಮಾಡುತ್ತೆ.

ಈ ಕೆಂಪು ಬಣ್ಣದ ಹಣ್ಣು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸೆಕ್ಸ್ ಡ್ರೈವ್ (Sex drive)ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತೆ. ಇದರಿಂದ ಲೈಂಗಿಕ ಜೀವನ ಬ್ರೈಟ್ ಆಗಿರುತ್ತೆ. ದಾಳಿಂಬೆಯಲ್ಲಿ ರೆಡ್ ವೈನ್ ಮತ್ತು ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳಿವೆ ಎಂದು ಸಹ ತಿಳಿದು ಬಂದಿದೆ.

Tap to resize

ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತೆ, ಉರಿಯೂತವನ್ನು ಕಡಿಮೆ ಮಾಡುತ್ತವೆ, ಹೃದ್ರೋಗದ(Heart problem) ಅಪಾಯವನ್ನು ಸಹ ಕಡಿಮೆ ಮಾಡುತ್ತವೆ ಮತ್ತು ವಯಸ್ಸಾಗುವಿಕೆ,  ಮತ್ತು ಕ್ಯಾನ್ಸರ್ ಗೆ ಕಾರಣವಾಗುವ ಹಾನಿಕಾರಕ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತವೆ. ನಿಮ್ಮ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ, ನೀವು ದಾಳಿಂಬೆಯನ್ನು ಜ್ಯೂಸ್ ಆಗಿ, ಸಲಾಡ್ ಜೊತೆ ಸೇರಿಸಿ ಹೀಗೆ ವಿಭಿನ್ನವಾಗಿ ಸೇವಿಸಬಹುದು. 

ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯಕ
ಸ್ಕಾಟ್ಲ್ಯಾಂಡ್ನ ಎಡಿನ್ಬರ್ಗ್ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಜನರಿಗೆ ಎರಡು ವಾರಗಳವರೆಗೆ ದಿನಕ್ಕೆ ಒಂದು ಲೋಟ ದಾಳಿಂಬೆ ರಸವನ್ನು ನೀಡಿದ್ದರು. ಇದನ್ನು ಕುಡಿ ಜನರು ಟೆಸ್ಟೋಸ್ಟೆರಾನ್ನಲ್ಲಿ ಸರಾಸರಿ 24% ಹೆಚ್ಚಳ ಹೊಂದಿರೋದು ಕಂಡು ಬಂದಿದೆ. ಟೆಸ್ಟೋಸ್ಟೆರಾನ್ ಪುರುಷರಲ್ಲಿ ಕಂಡುಬರುವ ಹಾರ್ಮೋನ್ (Hormone)ಆಗಿದ್ದು, ಇದು ಮುಖದ ಕೂದಲು, ಆಳವಾದ ಧ್ವನಿ, ಸ್ನಾಯುಗಳ ಬೆಳವಣಿಗೆ ಮತ್ತು ಸೆಕ್ಸ್ ಡ್ರೈವ್ ಅನ್ನು ಸಹ ನಿಯಂತ್ರಿಸುತ್ತದೆ.

ಇರೆಕ್ಟಿಕಲ್ ಡಿಸ್ ಫಂಕ್ಷನ್ ಗೆ ಚಿಕಿತ್ಸೆ
ಅದೇ ಅಧ್ಯಯನದಲ್ಲಿ, ದಾಳಿಂಬೆಯು ಇರೆಕ್ಟಿಕಲ್ ಡಿಸ್ ಫಂಕ್ಷನ್ ಅಂದರೆ ನಪುಂಸಕತೆಗೆ ಚಿಕಿತ್ಸೆ ನೀಡುತ್ತದೆ ಎಂದು ವರದಿಯಾಗಿದೆ. ಒತ್ತಡ(Stress), ಆತಂಕ, ಕಡಿಮೆ ಆತ್ಮವಿಶ್ವಾಸ ಮತ್ತು ಭಯ, ಇರೆಕ್ಟಿಕಲ್ ಡಿಸ್ ಫಂಕ್ಷನ್ ಗೆ ಪ್ರಮುಖ ಕಾರಣಗಳಾಗಿವೆ. ದಾಳಿಂಬೆಯು ನಪುಂಸಕತ್ವಕ್ಕೆ ಕಾರಣವಾಗಬಹುದಾದ ಮಾನಸಿಕ ಸ್ಥಿರತೆಯನ್ನು ಸುಧಾರಿಸಿ ಉತ್ತಮ ಆರೋಗ್ಯ ನೀಡುತ್ತೆ.

ರಕ್ತದ ಹರಿವನ್ನು(Blood flow) ಸುಧಾರಿಸುತ್ತೆ
ದೇಹದ ಪ್ರತಿಯೊಂದು ಅಂಗದಂತೆ, ಶಿಶ್ನದಲ್ಲಿಯೂ ಉತ್ತಮ ರಕ್ತದ ಹರಿವನ್ನು ಹೊಂದಿರುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಅಪಧಮನಿಗಳು ರಕ್ತದ ಹರಿವಿನ ಮೇಲೆ ಪರಿಣಾಮ ಬಿರುತ್ತೆ, ಇದು ಇರೆಕ್ಟಿಕಲ್ ಡಿಸ್ ಫಂಕ್ಷನ್ ಗೆ ಕಾರಣವಾಗಬಹುದು. ದಾಳಿಂಬೆ ರಸವು ಸಿಸ್ಟೋಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತದ ಹರಿವನ್ನು ಸುಧಾರಿಸುತ್ತೆ. 


ಹೃದ್ರೋಗದ ವಿರುದ್ಧ ರಕ್ಷಣೆ
ದಾಳಿಂಬೆಯಲ್ಲಿ ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್  ಮತ್ತು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ನಿಮ್ಮ ರಕ್ತನಾಳಗಳನ್ನು ಸ್ವಚ್ಛಗೊಳಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತೆ. ಇರೆಕ್ಟಿಕಲ್ ಡಿಸ್ ಫಂಕ್ಷನ್ ಮತ್ತು ಕಡಿಮೆ ಸೆಕ್ಸ್ ಡ್ರೈವ್ ಗೆ ಹೃದ್ರೋಗವು ಪ್ರಮುಖ ಕಾರಣ. ದಾಳಿಂಬೆ ರಸವು ಟೈಪ್ 2 ಮಧುಮೇಹ(Type 2 diabetes) ಮತ್ತು ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತೆ.

ಬೊಜ್ಜು ನಿವಾರಣೆ 
ಅಧಿಕ ತೂಕವು ಇರೆಕ್ಟಿಕಲ್ ಡಿಸ್ ಫಂಕ್ಷನ್, ಕಡಿಮೆ ಟೆಸ್ಟೋಸ್ಟೆರಾನ್, ಹಾರ್ಮೋನ್ ಮಟ್ಟಗಳ ಕುಸಿತ, ಹೃದ್ರೋಗ, ಮಧುಮೇಹ ಮತ್ತು ಹೆಚ್ಚಿನವುಗಳಿಗೆ ಕಾರಣವಾಗಬಹುದು. ದಾಳಿಂಬೆ ಬೊಜ್ಜನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದು ಸಹ ತಿಳಿಸಿದೆ. ಇನ್ನೇನು ಬೇಕು, ಇನ್ನು ಮುಂದೆ ನಿಯಮಿತವಾಗಿ ದಾಳಿಂಬೆ ಹಣ್ಣು ತಿನ್ನಿ. 
 

Latest Videos

click me!