ಹೃದಯ, ಮೆದುಳನ್ನು ಫಿಟ್ ಆಗಿ ಇಡುವ ವಿಟಮಿನ್ ಬಿ 12ನ ಪ್ರಯೋಜನ ತಿಳಿಯಿರಿ

First Published May 19, 2022, 7:32 PM IST


ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿಡಲು ವಿಟಮಿನ್ ಬಿ 12 ತುಂಬಾನೇ ಮುಖ್ಯ. ವಿಟಮಿನ್ ಬಿ 12 ಕೊರತೆಯು ನರವ್ಯೂಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಯನ್ನು ಕಡಿಮೆ ಮಾಡುತ್ತದೆ.  ವಿಟಾಮಿನ್ ಬಿ 12 ಸಮಸ್ಯೆಯಿಂದ ಏನೆಲ್ಲಾ ಆಗುತ್ತೆ ನೋಡೋಣ. 
 

ವಿಟಮಿನ್ ಬಿ 12 (Vitamin B12)ವೃದ್ಧಾಪ್ಯದಲ್ಲಿ ಮರೆವಿನ ಕಾಯಿಲೆಯಾದ ಅಲ್ಝೈಮರ್ಸ್ ನ ಅಪಾಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ -12 ಕೊರತೆಯು ಬಾಯಿಯಲ್ಲಿ ಗುಳ್ಳೆಗಳು, ಖಿನ್ನತೆ, ಉಸಿರಾಟದ ತೊಂದರೆ, ಆಯಾಸ ಮತ್ತು ದೌರ್ಬಲ್ಯ ಉಂಟಾಗುತ್ತೆ. ವಿಟಮಿನ್ ಬಿ -12 ದೇಹಕ್ಕೆ ಏಕೆ ಅತ್ಯಗತ್ಯ ಅನ್ನೋದನ್ನು ತಿಳಿಯಿರಿ…

ವಿಟಮಿನ್ ಬಿ -12 ರ ಆರೋಗ್ಯ ಪ್ರಯೋಜನಗಳು
ವಿಟಮಿನ್ ಬಿ -12 ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. 
 ಗರ್ಭಾವಸ್ಥೆಯಲ್ಲಿ ವಿಟಮಿನ್ ಬಿ -12 ಸೇವನೆಯು ಮಗುವಿನ ಮೆದುಳು(Brain) ಮತ್ತು ನರವ್ಯೂಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ವಿಟಮಿನ್ ಬಿ -12  ಮೂಳೆಗಳನ್ನು(Bone) ಆರೋಗ್ಯಕರವಾಗಿರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತೆ. ಇದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ದೃಷ್ಟಿ ದೋಷವನ್ನು ನಿವಾರಿಸಲು ವಿಟಮಿನ್ ಬಿ -12  ಅತ್ಯಗತ್ಯ. ಇದು ಮ್ಯಾಕ್ಯುಲರ್ ಡಿಜೆನರೇಶನ್ ನಂತಹ ಕಣ್ಣಿನ ಕಾಯಿಲೆಗಳನ್ನು ಹೋಗಲಾಡಿಸಲು ಸಹಕಾರಿ.

 ವಿಟಮಿನ್ ಬಿ 12 ಮನಸ್ಸಿನ ಆರೋಗ್ಯವನ್ನು ಸುಧಾರಿಸಲು ಮತ್ತು ನರಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
 ನಿದ್ರಾಹೀನತೆ(Sleeplessness), ಖಿನ್ನತೆ ಮತ್ತು ನರಮಂಡಲವನ್ನು ಆರೋಗ್ಯಕರವಾಗಿಡಲು ವಿಟಮಿನ್ ಬಿ 12 ತುಂಬಾನೆ ಸಹಕಾರಿ.

ವಿಟಮಿನ್ ಬಿ -12 ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಕ್ಯಾಲೊರಿಗಳನ್ನು(Calorie) ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಇದು ಒಬೆಸಿಟಿಯನ್ನು ಸಹ ತೆಗೆದುಹಾಕುತ್ತದೆ.
ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ವಿಟಮಿನ್ ಬಿ -12 ಅತ್ಯಗತ್ಯ. ವಿಟಮಿನ್ ಬಿ ನೀವು ಹೆಚ್ಚು ಸ್ಟ್ರಾಂಗ್ ಆಗಲು ಸಹಾಯ ಮಾಡುತ್ತದೆ.

ವಿಟಮಿನ್ ಬಿ 12 ಹೃದ್ರೋಗಗಳಿಂದ ದೂರವಿರಿಸುತ್ತದೆ. ಹೌದು ಇದು ಹೃದ್ರೋಗದ(Heart problems) ಅಪಾಯವನ್ನು ಕಡಿಮೆ ಮಾಡುತ್ತೆ. ಇದು ಹೋಮೋಸಿಸ್ಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
 

ಕೂದಲು(Hair), ಚರ್ಮ ಮತ್ತು ಉಗುರುಗಳನ್ನು ಆರೋಗ್ಯಕರವಾಗಿಡಲು ವಿಟಮಿನ್ ಬಿ -12 ಅತ್ಯಗತ್ಯ. ಇದು ಹೈಪರ್ ಪಿಗ್ಮೆಂಟೇಶನ್, ಉಗುರಿನ ಬಣ್ಣ, ಕೂದಲಿನ ಬದಲಾವಣೆಗಳು, ಮುಂತಾದ  ಸಮಸ್ಯೆಗಳನ್ನು ನಿವಾರಿಸುತ್ತೆ.
 

click me!