ಮಹಿಳೆಯರ ದೇಹದಲ್ಲಾಗುವ ಈ ಸಣ್ಣ ಬದಲಾವಣೆಗಳು ಗಂಭೀರ ಸಮಸ್ಯೆಯ ಕಾರಣವಾಗಿರಬಹುದು

Published : May 19, 2022, 07:25 PM IST

ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದಿಲ್ಲ. ಮನೆಯ ಎಲ್ಲಾ ಸದಸ್ಯರ ಬಗ್ಗೆ ಗಮನ ಹರಿಸಿದರೂ ಆಕೆ ಸಣ್ಣ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾಳೆ, ಅದು ನಂತರ ಗಂಭೀರ ಕಾಯಿಲೆಯ ರೂಪವನ್ನು ತಾಳುತ್ತದೆ.  ನಾವು ದೈಹಿಕವಾಗಿ ಅಸ್ವಸ್ಥರಾದಾಗಲೆಲ್ಲಾ, ನಮ್ಮ ದೇಹವು ನಮಗೆ ಒಂದು ಸೂಚನೆಯನ್ನು ನೀಡುತ್ತದೆ. 

PREV
19
ಮಹಿಳೆಯರ ದೇಹದಲ್ಲಾಗುವ ಈ ಸಣ್ಣ ಬದಲಾವಣೆಗಳು ಗಂಭೀರ ಸಮಸ್ಯೆಯ ಕಾರಣವಾಗಿರಬಹುದು

ಮಹಿಳೆಯರು(Women) ದೇಹದ ಬದಲಾವಣೆಗಳನ್ನು ಮಹಿಳೆಯರು ಸಣ್ಣ ವಿಷಯ ಎಂದು ಹೇಳುವ ಮೂಲಕ ಅದನ್ನು ನಿರ್ಲಕ್ಷಿಸುತ್ತಾರೆ, ಇದು ಸರಿಯಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅದನ್ನು ಗುರುತಿಸುವುದು ಮತ್ತು ರೋಗಗಳನ್ನು ತಪ್ಪಿಸುವುದು ಬಹಳ ಮುಖ್ಯ. ಇಲ್ಲಿ  ಕೆಲವು ರೋಗಗಳ ಬಗ್ಗೆ ಹೇಳುತ್ತಿದ್ದೇವೆ, ಅವು ನೋಡಲು ಚಿಕ್ಕದಾಗಿ ಕಾಣುತ್ತವೆ ಆದರೆ ಆರೋಗ್ಯದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತದೆ.ಆದ್ದರಿಂದ ತಕ್ಷಣ ವೈದ್ಯರನ್ನು ಬೇಟಿಮಾಡಿ 

29

ಉಗುರುಗಳು(Nails) ದುರ್ಬಲಗೊಳ್ಳುವುದು
ನಿಮ್ಮ ಉಗುರುಗಳು ಬೇಗನೆ ಕಟ್ ಆಗಲು ಪ್ರಾರಂಭಿಸಿದರೆ, ಕ್ಯಾಲ್ಸಿಯಂ, ವಿಟಮಿನ್ ಡಿ ಅಥವಾ ಸತುವಿನ ಕೊರತೆ ಇದೆ ಎಂದು ಅರ್ಥಮಾಡಿಕೊಳ್ಳಿ. ಇದನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬೇಡಿ. ಇದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು. 

39

ಆಗಾಗ್ಗೆ ಮೂತ್ರವಿಸರ್ಜನೆ(Urination)
ನೀವು ದಿನಕ್ಕೆ ಹಲವಾರು ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ, ನಿಮಗೆ ಮೂತ್ರನಾಳದ ಸೋಂಕು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಯೂರಿನ್ ಟೆಸ್ಟ್ ಅನ್ನು ಮಾಡಿಸಿಕೊಳ್ಳಿ. ಆರಂಭದಲ್ಲೇ ಪರೀಕ್ಷೆ ಮಾಡಿಸಿ. ಇಲ್ಲವಾದರೆ ಸಮಸ್ಯೆ ಹೆಚ್ಚಬಹುದು. 

49

ತುಂಬಾ ದಣಿದಿದ್ದರೆ (Tired)
ನೀವು ಅನೇಕ ದಿನಗಳಿಂದ ತುಂಬಾ ಸುಸ್ತಾಗಿದ್ದೀರಾ,ಹಾಗಾದರೆ ಇದಕ್ಕಾಗಿ ಸಿಬಿಸಿ ಅಂದರೆ ಕಂಪ್ಲೀಟ್ ಬ್ಲಡ್ ಕೌಂಟ್ ಟೆಸ್ಟ್ ಅನ್ನು ಮಾಡಿಸಿಕೊಳ್ಳಿ. ದಣಿವು ಹಲವಾರು ಸಮಸ್ಯೆಗಳ ಮೂಲ ಕಾರಣ ಆಗಿರಬಹುದು. 

59

ಕಣ್ಣುಗಳು(Eyes) ಕೆಂಪಾಗುವುದು ಮತ್ತು ತಲೆತಿರುಗುವಿಕೆ 
ನಿಮ್ಮ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದರೆ ಮತ್ತು ತಲೆತಿರುಗುವಿಕೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ಇದು ರಕ್ತದೊತ್ತಡ ಸಮಸ್ಯೆಯ ಕಾರಣ ಇರಬಹುದು. ಆದುದರಿಂದ ಹೆಚ್ಚಿನ ಜಾಗೃತೆ ವಹಿಸಿ. 

69

ಸಣ್ಣ ಹಳದಿ ಊತ(Swelling) ಕಂಡುಬಂದರೆ  
ದೇಹದಲ್ಲಿ ಅಥವಾ ಮೊಣಕಾಲುಗಳಲ್ಲಿ ಊತಗಳು, ಕೈಗಳು ಮತ್ತು ಪಾದಗಳಲ್ಲಿ ಹಳದಿ ಊತ  ಕಂಡುಬಂದರೆ, ನೀವು ರಕ್ತದ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಬೇಕು. ಈ ಕುರಿತು ಮಹಿಳೆಯರು ಹೆಚ್ಚು ಗಮನ ಹರಿಸಬೇಕು. 

79

ಕೂದಲು ಉದುರುವಿಕೆ(Hair fall)
ತಲೆ ಸ್ನಾನ ಮಾಡಿದ ನಂತರ ಮತ್ತು  ಒಣಗಿಸಿದ ನಂತರ ಕೂದಲು ತುಂಬಾ ಉದುರುತ್ತಿದ್ದರೆ, ನೀವು ಥೈರಾಯ್ಡ್ ಪರೀಕ್ಷೆ ಮಾಡಿಸಿ ಪರಿಶೀಲಿಸಬೇಕು. ಕೂದಲು ಉದುರುವುದು ಹಲವಾರು ಸಮಸ್ಯೆಗಳ ಮೂಲ ಕಾರಣವಾಗಬಹುದು. 

89

ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ (Dark circle)
ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ನಿಮಗೆ ಅಲರ್ಜಿ ಸಮಸ್ಯೆ ಇರಬಹುದು. ಇದಕ್ಕಾಗಿ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಈ ಡಾರ್ಕ್ ಸರ್ಕಲ್ ನ್ನು ಯಾವತ್ತೂ ಅವಾಯ್ಡ್ ಮಾಡಬೇಡಿ. 

99

ಕಣ್ಣಿನ ಹುಬ್ಬಿನ ಕೂದಲ(Eye brow) ತೆಳುವಾಗುವಿಕೆ 
ದಟ್ಟವಾದ ಕಣ್ಣಿನ ಹುಬ್ಬಿನ ಕೂದಲು ತೆಳುವಾಗಿದೆ ಎಂದರೆ ಹಾರ್ಮೋನುಗಳಲ್ಲಿ ಏನೋ ದೋಷವಿದೆ ಎಂದು ಅರ್ಥ ಆದ್ದರಿಂದ ಹಾರ್ಮೋನುಗಳನ್ನು ಪರೀಕ್ಷಿಸಿಕೊಳ್ಳಿ.ಇದನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬೇಡಿ. 

Read more Photos on
click me!

Recommended Stories