ಕಲ್ಲುಪ್ಪನ್ನು ದಿನವೂ ತಿನ್ನೋದು ತುಂಬಾನೆ ಡೇಂಜರ್; ಪ್ರಮಾಣ ಕಡಿಮೆ ಮಾಡೋದು ಒಳ್ಳೇದಂತೆ

First Published | Sep 26, 2022, 6:12 PM IST

ರಾಕ್ ಸಾಲ್ಟ್, ಪಿಂಕ್ ಸಾಲ್ಟ್ ಮತ್ತು ಹಿಮಾಲಯನ್ ಸಾಲ್ಟ್ ಎಂದು ಕರೆಯಲ್ಪಡುವ ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸಾಮಾನ್ಯ ಉಪ್ಪಿನ ಬದಲು ಇದನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದು ಅಷ್ಟೊಂದು ಪ್ರಯೋಜಕಾರಿಯಾಗಿದೆ. ಈ ಮೊದಲು, ಜನರು ಈ ಉಪ್ಪನ್ನು ಉಪವಾಸ ಇರೋವಾಗ ಮಾತ್ರ ಬಳಸುತ್ತಿದ್ದರು, ಆದರೆ ಈಗ ಜನರು ಪ್ರತಿದಿನ ತಮ್ಮ ಆಹಾರದಲ್ಲಿಯೂ ಕಲ್ಲುಪ್ಪನ್ನು ಬಳಸುತ್ತಾರೆ. 

ಕಲ್ಲುಪ್ಪು(Rock salt) ಹೃದಯ ಮತ್ತು ರಕ್ತದೊತ್ತಡದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ, ಆದರೆ ದೀರ್ಘಕಾಲದವರೆಗೆ ಕಲ್ಲುಪ್ಪನ್ನು ಬಳಸೋದು ಮಾತ್ರ ಸರಿಯಲ್ಲ, ಯಾಕಂದ್ರೆ ಇದು ನಿಮ್ಮ ದೇಹದಲ್ಲಿ ಅನೇಕ ಪೋಷಕಾಂಶಗಳ ಕೊರತೆಯನ್ನು ಸೃಷ್ಟಿಸುತ್ತೆ. ದೀರ್ಘಕಾಲದವರೆಗೆ ಕಲ್ಲುಪ್ಪನ್ನು ಬಳಸೋದರಿಂದ ಉಂಟಾಗುವ ಅನಾನುಕೂಲಗಳನ್ನು ಮತ್ತು ಯಾವ ಜನರು ಅದನ್ನು ಹೆಚ್ಚು ಸೇವಿಸಬಾರದು ಅನ್ನೋದನ್ನು ತಿಳಿದುಕೊಳ್ಳೋಣ..  

ಕಲ್ಲುಪ್ಪನ್ನು ತಿನ್ನೋದರಿಂದ ಏನಾಗುತ್ತೆ?
ಕಲ್ಲುಪ್ಪು ದೇಹಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ಅದನ್ನು ತುಂಬಾ ಸಮಯದವರೆಗೆ ಬಳಸೋದರಿಂದ ದೇಹದಲ್ಲಿ(Body) ಅನೇಕ ಸಮಸ್ಯೆಗಳು ಉಂಟಾಗಬಹುದು. ಭಾರತದಲ್ಲಿ ಜನರು ಈಗ ಕಲ್ಲುಪ್ಪನ್ನು ಹೆಚ್ಚು ಬಳಸುತ್ತಿದ್ದಾರೆ. ಇದು ಅಯೋಡಿನ್ ಕೊರತೆಗೆ ಕಾರಣವಾಗುತ್ತೆ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಮಸ್ಯೆಯನ್ನು ಹೆಚ್ಚಿಸುತ್ತೆ.

Tap to resize

ಅಯೋಡಿನ್(Iodine) ಕೊರತೆ
ಕಲ್ಲುಪ್ಪಿನಲ್ಲಿ ಸಾಮಾನ್ಯ ಉಪ್ಪಿಗಿಂತ ಕಡಿಮೆ ಅಯೋಡಿನ್ ಇರುತ್ತೆ. ನೀವು ಆಹಾರದಲ್ಲಿ ಕಲ್ಲುಪ್ಪನ್ನು ಮಾತ್ರ ದೀರ್ಘಕಾಲದವರೆಗೆ ಬಳಸಿದರೆ, ಅದು ದೇಹದಲ್ಲಿ ಅಯೋಡಿನ್ ಕೊರತೆ ಮತ್ತು ರೋಗಗಳಿಗೆ ಕಾರಣವಾಗಬಹುದು. ಆದುದರಿಂದ ಇದನ್ನು ಕಡಿಮೆ ತಿನ್ನೋದು ಉತ್ತಮ ಎಂದು ಹೇಳಲಾಗುತ್ತೆ.

ನೀರು(Water) ಹಿಡಿದಿಟ್ಟುಕೊಳ್ಳುವ ಸಮಸ್ಯೆ
ದೀರ್ಘಕಾಲದವರೆಗೆ ಆಹಾರದಲ್ಲಿ ಕಲ್ಲುಪ್ಪನ್ನು ಮಾತ್ರ ಬಳಸುವ ಮತ್ತು ಹೆಚ್ಚು ಉಪ್ಪನ್ನು ಸೇವಿಸುವ ಜನರ ದೇಹವು ನೀರನ್ನು ಹಿಡಿದಿಟ್ಟುಕೊಳ್ಳುವ ಸಮಸ್ಯೆಯನ್ನು ಹೊಂದಿರುತ್ತೆ. ದೇಹದಲ್ಲಿ ನೀರು ಹೆಚ್ಚಾಗುವುದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡ(High Blood Pressure )
ಇತ್ತಿಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿದೆ. ಸಾಮಾನ್ಯವಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಕಲ್ಲುಪ್ಪನ್ನು ಬಳಸಲಾಗುತ್ತೆ, ಆದರೆ ಹೆಚ್ಚು ಕಲ್ಲುಪ್ಪನ್ನು ತಿನ್ನುವುದು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತೆ. 

ಆಯಾಸ(Tired) ಮತ್ತು ಸ್ನಾಯು ದೌರ್ಬಲ್ಯ -
ಅಡುಗೆಯಲ್ಲಿ ಕಲ್ಲುಪ್ಪನ್ನು ಹೆಚ್ಚಾಗಿ ಬಳಸಿದ್ರೆ, ಅದರಿಂದ ದೇಹದಲ್ಲಿ ಆಯಾಸ ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ಕಲ್ಲುಪ್ಪನ್ನು ಮಾತ್ರ ಸಮತೋಲಿತ ಪ್ರಮಾಣದಲ್ಲಿ ತಿನ್ನಬೇಕು. ಇದರ ಬದಲಾಗಿ ನೀವು ಇತರ ಉಪ್ಪನ್ನು ಬಳಕೆ ಮಾಡಬಹುದು. 

ಥೈರಾಯ್ಡ್ (Thyroid) ಸಮಸ್ಯೆ 
ನಿಮಗೆ ಏನಾದರೂ ಥೈರಾಯ್ಡ್ ಸಮಸ್ಯೆ ಇದೆಯೆ? ಹಾಗಿದ್ರೆ ಎಚ್ಚೆತ್ತುಕೊಳ್ಳೋದು ಉತ್ತಮ. ಯಾಕಂದ್ರೆ ಕಲ್ಲುಪ್ಪಿನಿಂದ ಥೈರಾಯ್ಡ್ ಸಮಸ್ಯೆ ಇರೋರಿಗೆ ಹೆಚ್ಚು ಹಾನಿಯಾಗಬಹುದು. ದೇಹದಲ್ಲಿ ಅಯೋಡಿನ್ ಕೊರತೆಯಿದ್ದರೆ, ಥೈರಾಯ್ಡ್ ರೋಗಿಯ ಸಮಸ್ಯೆ ಹೆಚ್ಚಾಗಬಹುದು. ಆದ್ದರಿಂದ ಹೆಚ್ಚು ಕಲ್ಲುಪ್ಪು ಸೇವಿಸಬೇಡಿ.   

ಕಲ್ಲುಪ್ಪನ್ನು ಸರಿಯಾಗಿ ಬಳಸೋದು ಹೇಗೆ? 
ನೀವು ಆಹಾರದಲ್ಲಿ ಸಾಮಾನ್ಯ ಉಪ್ಪಿನ ಬದಲು ಇದನ್ನು ಬಳಸಬಹುದು. ಆದರೆ ಈ ಉಪ್ಪಿನ ಪ್ರಮಾಣವನ್ನು ಸಹ ನೋಡಿಕೊಳ್ಳಿ. ಹೆಚ್ಚು ಉಪ್ಪನ್ನು ತಿನ್ನುವುದು ಹಾನಿಯನ್ನು ಮಾತ್ರ ಉಂಟುಮಾಡುತ್ತೆ . ರಕ್ತದೊತ್ತಡ ಮತ್ತು ಹೃದ್ರೋಗಿಗಳು(Heart patients) ಕಲ್ಲುಪ್ಪನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

Latest Videos

click me!