52ನೇ ವಯಸ್ಸಿನಲ್ಲೂ ಫಿಟ್ ಆಗಿರುವ ನಟಿ ಮಲೈಕಾ ಅರೋರಾ ತಮ್ಮ ಸೌಂದರ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರು ಪ್ರತಿದಿನ ಬೆಳಿಗ್ಗೆ ಸೇವಿಸುವ ಈ ಸರಳ ಪಾನೀಯವೇ ಅವರ ಫಿಟ್ನೆಸ್ಗೆ ಪ್ರಮುಖ ಕಾರಣವೆಂದು ಅವರು ಬಹಿರಂಗಪಡಿಸಿದ್ದಾರೆ.
ವಯಸ್ಸು 52 ಆದ್ರೂ ನಟಿ ಮಲೈಕಾ ಅರೋರಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಈ ವಯಸ್ಸಿನಲ್ಲಿಯೂ ತಮಗಿಂತ 19 ವರ್ಷ ಚಿಕ್ಕವನಾಗಿರುವ ಉದ್ಯಮಿ ಜೊತೆ ಡೇಟಿಂಗ್ ಮಾಡುವಷ್ಟು, ಸಂಬಂಧ ಬೆಳೆಸುವಷ್ಟು ದೈಹಿಕವಾಗಿ, ಮಾನಸಿಕವಾಗಿ ಫಿಟ್ ಆಗಿದ್ದಾರೆ ನಟಿ.
26
ಯೋಗ, ಧ್ಯಾನದ ಜೊತೆ ಈ ಡ್ರಿಂಕ್ಸ್
ಇದಕ್ಕೆ ಕಾರಣ ಅವರು ಎಷ್ಟೋ ವರ್ಷಗಳಿಂದ ಮಾಡಿಕೊಂಡು ಬಂದಿರುವ ಯೋಗ, ಧ್ಯಾನ, ವರ್ಕ್ಔಟ್ ಎಲ್ಲವೂ ಕಾರಣ ಎನ್ನುವುದು ನಿಜವೇ. ಅದೇ ವೇಳೆ ಡಯೆಟ್ ಫುಡ್ ಕೂಡ ಅವರ ಈ ಸೌಂದರ್ಯ ಹಾಗೂ ಫಿಟ್ನೆಸ್ಗೆ ಕಾರಣ ಎನ್ನುವಲ್ಲಿ ಎರಡು ಮಾತು ಇಲ್ಲವೇ ಇಲ್ಲ.
36
ಕರುಳೇ ಅನಾರೋಗ್ಯಕ್ಕೆ ಕಾರಣ
Gut health ಅಂದರೆ ಕರುಳಿನ ಆರೋಗ್ಯದ ಬಗ್ಗೆ ಸಾಕಷ್ಟು ವೈದ್ಯರು ಮಾತನಾಡುವುದನ್ನು ನೀವು ಕೇಳಿರಬಹುದು. ನಮ್ಮ ಕಾಯಿಲೆಗಳಿಗೆ ಪ್ರಮುಖ ಕಾರಣವೇ ಈ ಕರುಳು. ಅಲ್ಲಿಂದಲೇ ಶುರುವಾಗುವುದು ಇನ್ನಿಲ್ಲದ ಸಮಸ್ಯೆ, ಕೆಲವೊಮ್ಮೆ ಇದು ಅತಿಯಾದರೆ ಮಾರಣಾಂತಿಕ ಕಾಯಿಲೆಗಳಿಂದಲೂ ನರಳಬಹುದಾಗಿದೆ. ಆದ್ದರಿಂದ ಕರುಳಿನ ಶುದ್ಧೀಕರಣ ಅತ್ಯಂತ ಅವಶ್ಯಕವಾಗಿದೆ.
ಇದರ ಬಗ್ಗೆಯೇ ಇದೀಗ ನಟಿ ಮಲೈಕಾ ಅರೋರಾ (Maliaka Arora health tips) ಕರುಳಿನ ಆರೋಗ್ಯದ ಕುರಿತು ಟಿಪ್ಸ್ ಕೊಟ್ಟಿದ್ದಾರೆ. cookingwithguddan ಇನ್ಸ್ಟಾಗ್ರಾಮ್ನಲ್ಲಿ ಅವರು ಇದರ ಬಗ್ಗೆ ಮಾತನಾಡಿದ್ದಾರೆ. ತಮ್ಮ ದಿನನಿತ್ಯದ ಬೆಳಗು ಈ ಒಂದು ಸಿಂಪಲ್ ಪಾನೀಯದಿಂದ ಶುರುವಾಗುವುದಾಗಿ ಹೇಳಿದ್ದಾರೆ ಮಲೈಕಾ.
56
ಅವರು ಹೇಳಿದ್ದೇನು?
ರಾತ್ರಿ ಜೀರಿಗೆ, ಅಜ್ವೈನ್ (ಓಂಕಾಳು) ಮತ್ತು ಸೋಂಪು ಇವುಗಳನ್ನು ಒಂದೊಂದು ಚಮಚ ಹಾಕಿ ಸ್ವಲ್ಪವೇ ರೋಸ್ಟ್ ಮಾಡಿ ಅದನ್ನು ರಾತ್ರಿ ಒಂದು ಗ್ಲಾಸ್ನಲ್ಲಿ ಹಾಕಿ ನೆನೆಸಿ ಇಡುತ್ತೇನೆ. ಬೆಳಿಗ್ಗೆ ಅದನ್ನು ಸ್ವಲ್ಪವೇ ಸ್ವಲ್ಪ ಬಿಸಿ ಮಾಡಿಕೊಂಡು ಉಗುರುಬೆಚ್ಚಗೆ ಇರುವಾಗ ಸ್ವಲ್ಪ ನಿಂಬು ರಸ ಸೇರಿಸಿ ಕುಡಿಯುತ್ತೇನೆ. ಇದರಿಂದ ಗಟ್ಸ್ ಆರೋಗ್ಯ ಸುಧಾರಿಸುತ್ತದೆ ಎಂದಿದ್ದಾರೆ.
66
ದಿನದ ಆರಂಭ
ತಾವು ಪ್ರತಿನಿತ್ಯವೂ ಇದೇ ಡ್ರಿಂಕ್ಸ್ನೊಂದಿಗೆ ದಿನವನ್ನು ಆರಂಭಿಸುವುದಾಗಿ ನಟಿ ಹೇಳಿದ್ದಾರೆ. ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಅವರು ವಿವರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.