ಬೇಸಿಗೆಯಲ್ಲಿ ಹೆಚ್ಚಾಗುವ ಪಾದಗಳ ಉರಿ ಸಮಸ್ಯೆಗೆ ಹಾರ್ಮೋನ್ ಬದಲಾವಣೆ ಮತ್ತು ವಿಟಮಿನ್ ಕೊರತೆ ಕಾರಣವಾಗಿರಬಹುದು. ಈ ಲೇಖನದಲ್ಲಿ ಪುದೀನಾ ಎಣ್ಣೆ, ಅರಿಶಿನ, ವಿನೇಗರ್ ಬಳಕೆ ಹಾಗೂ ಕಾಲುಗಳನ್ನು ಎತ್ತರದಲ್ಲಿಡುವಂತಹ ಐದು ಸರಳ ಮನೆಮದ್ದುಗಳನ್ನು ವಿವರಿಸಲಾಗಿದೆ.
ಬೇಸಿಗೆ ಅರಂಭವಾಗುತ್ತಿದ್ದಂತೆ ಕೆಲವರಿಗೆ ಅತಿಯಾಗಿ ಪಾದಗಳು ಉರಿಯಲಾರಂಭಿಸುತ್ತವೆ. ಅತಿಯಾದ ಉಷ್ಣ ಹೆಚ್ಚಾಗುವ ಕಾರಣ ಪಾದಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗೆ ಹಾರ್ಮೋನ್ ಸಂಬಂಧಿತ ಬದಲಾವಣೆ, ದೇಹದಲ್ಲಿನ ಜೀವಸತ್ವಗಳ ಕೊರತೆಯೂ ಕಾರಣ ಎಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ವಿಟಮಿನ್ ಬಿ12 ಕೊರತೆಯೇ ಪ್ರಮುಖ ಕಾರಣ.
26
ಮನೆಮದ್ದು 1: ಪುದೀನಾ ಎಣ್ಣೆ
ಒಂದು ಪುದೀನಾ ಎಲೆ ಅಡುಗೆಯ ಪರಿಮಳದ ಜೊತೆ ರುಚಿಯನ್ನು ಸಹ ಹೆಚ್ಚಳ ಮಾಡುತ್ತದೆ. ಪಾದಗಳಿಗೆ ಪುದೀನಾ ಎಣ್ಣೆ ಹಚ್ಚೋದರಿಂದ ತಂಪಿನ ಅನುಭವ ನೀಡುತ್ತದೆ. ತೆಂಗಿನಎಣ್ಣೆಯಲ್ಲಿ ಪುದೀನಾ ಎಲೆಗಳನ್ನು ಹಾಕಿ ಕುದಿಸಿ ಜರಡಿ ಹಿಡಿದ್ರೆ ಔಷಧಿಯ ತೈಲ ಸಿದ್ಧವಾಗುತ್ತದೆ.
36
ಮನೆಮದ್ದು 2: ತಣ್ಣೀರು
ಪಾದಗಳಲ್ಲಿ ಸುಡುವ ಅನುಭವ ಅಗ್ತಿದ್ರೆ ಕೆಲವು ನಿಮಿಷಗಳ ಕಾಲ ತಣ್ಣೀರಿನಲ್ಲಿ ಪಾದಗಳನ್ನು ಇರಿಸಿಕೊಳ್ಳಿ. ದಿನಕ್ಕೆ ಎರಡರಿಂದ ಮೂರು ಬಾರಿ ಕನಿಷ್ಠ 10 ರಿಂದ 15 ನಿಮಿಷ ಪಾದಗಳನ್ನು ನೀರಿನಲ್ಲಿಡೋದರಿಂದ ಸುಡುವ ಸಂವೇದನೆ ಕಡಿಮೆಯಾಗುತ್ತದೆ.
ಅರಿಶಿನವು ಅದ್ಭುತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ (Immunity Booster) ನೈಸರ್ಗಿಕ ಔಷಧಿಯಾಗಿದೆ. ಇದರಲ್ಲಿರುವ 'ಕರ್ಕ್ಯುಮಿನ್' (Curcumin) ಎಂಬ ಸಕ್ರಿಯ ಅಂಶವು ಉರಿಯೂತ-ವಿರೋಧಿ (Anti-inflammatory) ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಅರಿಶಿನದ ಪೇಸ್ಟ್ ಹಚ್ಚೋದರಿಂದ ಪಾದಗಳ ಉರಿಯೂತ ಕಡಿಮೆಯಾಗುತ್ತದೆ.
56
ಮನೆಮದ್ದು 4: ಅರ್ನಿಕಾ ಅಥವಾ ವಿನೇಗರ್
ಮಾರುಕಟ್ಟೆಯಲ್ಲಿ ಲಭ್ಯವಾಗುವ ಅರ್ನಿಕಾ ಅಥವಾ ವಿನೇಗರ್ ಪಾದಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ವಿನೆಗರ್ ಚರ್ಮದ pH ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬಿಸಿನೀರಿಗೆ ಒಂದು ಕಪ್ ವಿನೇಗರ್ ಹಾಕಿ ಮಿಕ್ಸ್ ಮಾಡಿ. ನಂತರ ಈ ನೀರಿನಲ್ಲಿ ಪಾದಗಳನ್ನು ಇರಿಸಬೇಕು. ಹಾಗೆಯೇ ಅರ್ನಿಕಾ ಪಾದಗಳಿಗೆ ಹಚ್ಚಿ ಮಸಾಜ್ ಮಾಡೋದರಿಂದ ಉರಿಯೂತ ಕಡಿಮೆಯಾಗುತ್ತದೆ.
ಮಲಗುವಾಗ ಕಾಲುಗಳ ಕೆಳಗೆ ಹಾಸಿಗೆ ಅಥವಾ ದಿಂಬು ಇರಿಸಿ ಮಲಗೋದು. ಇದರಿಂದ ರಕ್ತಪರೀಚಲನೆಯಿಂದ ಪಾದಗಳ ಉರಿಯೂತ ನಿಯಂತ್ರಣಕ್ಕೆ ಬರುತ್ತದೆ. ಕುಳಿತುಕೊಳ್ಳುವಾಗ ಪಾದದ ಕೆಳಗೆ ಎತ್ತರದ ವಸ್ತುಗಳನ್ನಿಡೋದರಿಂದ ಉರಿಯೂತ ಕಡಿಮೆಯಾಗುತ್ತದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.