ತಾವರೆಯ ಬೇರಿನಲ್ಲಡಗಿದೆ ಆರೋಗ್ಯದ ಅದ್ಭುತ ರಹಸ್ಯ

First Published Jun 28, 2022, 5:57 PM IST

ಆಯುರ್ವೇದದಲ್ಲಿ ಹಲವಾರು ಗಿಡಮೂಲಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ. ಅವುಗಳಲ್ಲಿ ಒಂದು ಕಮಲದ ಬೇರು ಕೂಡ ಆಗಿದೆ. ಇದಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಇದು ಹಲವು ಆರೋಗ್ಯದ ಸಮಸ್ಯೆಗಳನ್ನು ಸಹ ದೂರ ಮಾಡುತ್ತೆ ಎಂದು ತಜ್ಞರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. 

ಕಮಲದ(Lotus) ಬೇರು ಅಥವಾ ಲೋಟಸ್ ಸ್ಟೆಮ್ ಅನ್ನು 'ದಿ ಸೀಕ್ರೆಟ್ ಲೋಟಸ್' ಎಂದೂ ಕರೆಯಲಾಗುತ್ತೆ. ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಅದರ ಬಳಕೆಯ ವಿಧಾನ ಮತ್ತು ಪ್ರಯೋಜನ ತಿಳಿದಿಲ್ಲ. ಆದರೆ ರಾಷ್ಟ್ರೀಯ ಹೂವು ಎಂದು ಕರೆಯಲ್ಪಡುವ ಲೋಟಸ್ ಬೇರುಗಳು ಬಹಳ ಅದ್ಭುತ ಪ್ರಯೋಜನಗಳನ್ನೊಳಗೊಂಡಿದೆ.
 

ಪ್ರಾಚೀನ ಕಾಲದಿಂದಲೂ ಇದನ್ನು ಔಷಧಿಯ ಸಸ್ಯವಾಗಿ ಬಳಸಲಾಗುತ್ತಿದೆ. ಲೋಟಸ್ ಸ್ಟೆಮ್ ಫೈಬರ್ ಮತ್ತು ಪ್ರೋಟೀನ್ ನ(Protein) ಪ್ರಮುಖ ಮೂಲವಾಗಿದೆ. ಇದರೊಂದಿಗೆ, ವಿಟಮಿನ್ಸ್ ಮತ್ತು ಖನಿಜಗಳು ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತೆ. ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯೋಣ.

ರಕ್ತಹೀನತೆಯಿಂದ (Anaemia) ರಕ್ತದೊತ್ತಡದವರೆಗಿನ ರೋಗಗಳನ್ನು ದೂರವಿಡಲು ಲೋಟಸ್ ಸ್ಟೆಮ್ ಸಹಾಯ ಮಾಡುತ್ತೆ. ನೀವು ಲೋಟಸ್ ರೂಟ್ಸ್ ನ್ನು ಬೇರೆ ಬೇರೆ ಅನೇಕ ರೀತಿಯ ಆಹಾರವಾಗಿ ತಯಾರಿಸಬಹುದು. ಕಮಲದ ಬೇರಿನ ಚಿಪ್ಸ್, ಸೂಪ್, ಚಹಾದಂತಹ ಅಡುಗೆ ಮಾಡಿ ತಿನ್ನಬಹುದು.

ಲೋಟಸ್ ಸ್ಟೆಮ್ ರುಚಿಗಿಂತ ಹೆಚ್ಚಾಗಿ, ಇದು ಆರೋಗ್ಯ ಉತ್ತೇಜಿಸಲು ಕಾರ್ಯನಿರ್ವಹಿಸುವ ಶಕ್ತಿಯುತ ಪೋಷಕಾಂಶಗಳ ಸಂಪೂರ್ಣ ಪ್ಯಾಕೇಜ್ ಆಗಿದೆ. ಇದು ಜೀರ್ಣಕ್ರಿಯೆಯಿಂದ(Digestion) ಹಿಡಿದು ರಕ್ತಹೀನತೆವರೆಗೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತೆ. 

ಈ ಪೋಷಕಾಂಶಗಳು ಲೋಟಸ್ ಸ್ಟೆಮ್ನಲ್ಲಿದೆ 
ಇದು ಸಾಕಷ್ಟು ವಿಟಮಿನ್ಸ್(Vitamins) ಮತ್ತು ಖನಿಜಗಳನ್ನು ಹೊಂದಿದೆ. ಇದು ಪೊಟ್ಯಾಸಿಯಮ್, ರಂಜಕ, ತಾಮ್ರ, ಕಬ್ಬಿಣ, ಮ್ಯಾಂಗನೀಸ್ ಮತ್ತು ಥಯಾಮಿನ್, ಪ್ಯಾಂಟೊಫೆನಿಕ್ ಆಮ್ಲ, ಸತು, ವಿಟಮಿನ್ ಬಿ 6, ವಿಟಮಿನ್ ಸಿ  ಸಹ ಹೊಂದಿದೆ. ಇದಲ್ಲದೆ, ಲೋಟಸ್ ರೂಟ್ಸ್ ಫೈಬರ್ ಮತ್ತು ಪ್ರೋಟೀನ್ ನ ಪ್ರಮುಖ ಮೂಲವಾಗಿದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ 
ಲೋಟಸ್ ಸ್ಟೆಮ್ ನಾರಿನಂಶದಿಂದ ಸಮೃದ್ಧವಾಗಿದೆ. ಮಲ-ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೆ. ಇದರ ಬೇರುಗಳಲ್ಲಿರುವ ಪೋಷಕಾಂಶಗಳು ಮಲಬದ್ಧತೆ(Constipation), ಜೀರ್ಣಕಾರಿ ತೊಂದರೆ ಗುಣಪಡಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಲು ಇದು ಸಹಾಯ ಮಾಡುತ್ತೆ.
 

ರಕ್ತಹೀನತೆ ನಿವಾರಣೆ ಮಾಡುತ್ತೆ 
ಕಬ್ಬಿಣ ಮತ್ತು ತಾಮ್ರದ ಪ್ರಮುಖ ಅಂಶ ಕಮಲದ ಬೇರುಗಳಲ್ಲಿವೆ. ಕೆಂಪು ರಕ್ತಕಣಗಳ (Red blood cells)ಉತ್ಪಾದನೆಯಲ್ಲಿ ಈ ಅಂಶ ಪ್ರಮುಖ ಪಾತ್ರವಹಿಸುತ್ತೆ. ಇದು ರಕ್ತಹೀನತೆಯ ಅಪಾಯ ಕಡಿಮೆ ಮಾಡುತ್ತೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತೆ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತೆ  ಮತ್ತು ಬಾಡಿ ಆಕ್ಸಿಜನ್ ಹೆಚ್ಚಿಸುತ್ತೆ .

ರಕ್ತದೊತ್ತಡ (Blood Pressure) ನಿಯಂತ್ರಿಸಲು ಸಹಕಾರಿ 
ಕಮಲದ ಬೇರಿನಲ್ಲಿ ಕಂಡುಬರುವ ಪೊಟ್ಯಾಸಿಯಮ್ ದೇಹದಲ್ಲಿನ ದ್ರವಗಳ ನಡುವೆ ಸರಿಯಾದ ಸಮತೋಲನ ಕಾಪಾಡುತ್ತೆ. ಪೊಟ್ಯಾಸಿಯಮ್ ಒಂದು ವಾಸೋಡಿಲೇಟರ್ ಆಗಿದೆ, ಅಂದರೆ ಇದು ರಕ್ತನಾಳ ಸಡಿಲಗೊಳಿಸುತ್ತೆ ಮತ್ತು ಸಂಕೋಚನ ಮತ್ತು ಹಾರ್ಡ್ ನೆಸ್ ಕಡಿಮೆ ಮಾಡುವ ಮೂಲಕ, ಇದು ರಕ್ತದ ಹರಿವನ್ನು ಹೆಚ್ಚಿಸುತ್ತೆ. ಇದು ಹೃದಯರಕ್ತನಾಳದ ವ್ಯವಸ್ಥೆಯ ಮೇಲಿನ ಒತ್ತಡ ಸಹ ಕಡಿಮೆ ಮಾಡುತ್ತೆ.

ಮನಸ್ಥಿತಿಯನ್ನು ಸುಧಾರಿಸುತ್ತೆ 
ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶಗಳಲ್ಲಿ ಒಂದು ಪಿರಿಡಾಕ್ಸಿನ್. ಇದು ಮೆದುಳಿನಲ್ಲಿರುವ ನರ ರೆಸೆಪ್ಟರ್ಸ್ ನೊಂದಿಗೆ ನೇರವಾಗಿ ಸಂವಹನ ನಡೆಸುತ್ತೆ, ಅದು ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತೆ . ಇದು ಕಿರಿಕಿರಿ, ತಲೆನೋವು ಮತ್ತು ಒತ್ತಡದ(Stress) ಮಟ್ಟ ಸಹ ನಿಯಂತ್ರಿಸುತ್ತೆ. ಅದಕ್ಕಾಗಿ ಲೋಟಸ್ ಬೇರು ಬಳಕೆ ಮಾಡಿ ನೋಡೀ. 

click me!