ತುಳಸಿ ಬೀಜ ತಿನ್ನೋದ್ರಿಂದ ಒತ್ತಡ ಕಡಿಮೆಯಾಗಿ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ!

First Published | Jun 15, 2022, 6:20 PM IST

Ayurvedic Tips in Kannada: ಹೆಚ್ಚಿನ ಮನೆಗಳಲ್ಲಿ, ತುಳಸಿ ಸಸ್ಯ ಕಾಣಬಹುದು. ತುಳಸಿಯು ಆಯುರ್ವೇದದಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಜೊತೆಗೆ ಇದು ಧಾರ್ಮಿಕ ಮಹತ್ವ ಸಹ ಹೊಂದಿದೆ. ತುಳಸಿ ಎಲೆ ಅನೇಕ ರೋಗಗಳನ್ನು ಗುಣಪಡಿಸುತ್ತೆ. ತುಳಸಿ ಎಲೆ ತಿನ್ನೋದ್ರಿಂದ ದೇಹ ಆರೋಗ್ಯಕರವಾಗಿರುತ್ತೆ ಮತ್ತು ಎಲ್ಲಾ ರೀತಿಯ ಸೋಂಕು ನಿವಾರಿಸುತ್ತೆ. 
 

ತುಳಸಿ ಎಲೆ (Tulasi leaf)ದೇಹದ ಉರಿಯೂತ ನಿವಾರಿಸುತ್ತೆ ಮತ್ತು ರೋಗನಿರೋಧಕ ಶಕ್ತಿ ಬಲಪಡಿಸುತ್ತೆ. ತುಳಸಿ ಎಲೆಯ ಪ್ರಯೋಜನ ಸಾಕಷ್ಟಿವೆ ಎಂದು ನಿಮಗೆ ತಿಳಿದಿದೆ. ಆದರೆ ತುಳಸಿ ಬೀಜ ಸಹ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದ್ಯಾ? ಇಲ್ಲಾ ಅಂದ್ರೆ ನೀವು ತಿಳಿದುಕೊಳ್ಳಲೇಬೇಕು… 

ತುಳಸಿ ಬೀಜ ಸಾಕಷ್ಟು ಪ್ರೋಟೀನ್(Protein), ಫೈಬರ್ ಮತ್ತು ಕಬ್ಬಿಣ ಹೊಂದಿರುತ್ತೆ. ಅಷ್ಟೇ ಅಲ್ಲ ತುಳಸಿ ಬೀಜ ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿಯೂ ಪರಿಣಾಮಕಾರಿ. ಹಾಗಾದ್ರೆ ಬನ್ನಿ ತುಳಸಿ ಬೀಜದ ಪ್ರಯೋಜನದ ಬಗ್ಗೆ ತಿಳಿಯೋಣ.

Tap to resize

ಒತ್ತಡ(Stress) ನಿವಾರಣೆ
ತುಳಸಿ ಬೀಜ ಮೆದುಳಿಗೆ ಪ್ರಯೋಜನಕಾರಿ. ಅದರ ಸೇವನೆ ಒತ್ತಡ ಮತ್ತು ಆತಂಕದಂತಹ ಸಮಸ್ಯೆ ನಿವಾರಿಸುತ್ತೆ . ತುಳಸಿ ಬೀಜ ಮಾನಸಿಕ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತೆ. ಒತ್ತಡ ನಿವಾರಿಸಲು ನೀವು ತುಳಸಿ ಬೀಜ ಸೇವಿಸಬೇಕು. ಇದರಿಂದ ಮನಸ್ಸು ಶಾಂತವಾಗುತ್ತೆ.
 

ರೋಗನಿರೋಧಕ ಶಕ್ತಿ(Immunity) ಹೆಚ್ಚಿಸುತ್ತೆ 
ತುಳಸಿ ಬೀಜ ಫ್ಲೇವನಾಯ್ಡ್ ಮತ್ತು ಫಿನೋಲಿಕ್ ಹೊಂದಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಇದಲ್ಲದೆ, ಚಳಿಗಾಲದಲ್ಲಿ ತುಳಸಿ ಬೀಜದ ಕಷಾಯ ತಯಾರಿಸಿ ತಣ್ಣಗೆ ಕುಡಿಯೋದು ಪ್ರಯೋಜನಕಾರಿ. ನೀವು ತುಳಸಿ ಬೀಜ ಚಹಾದಲ್ಲಿ ಹಾಕಿ ಸೇವಿಸಬಹುದು. 
 

ತ್ವಚೆ ಫ್ರೆಶ್(Fresh) ಆಗಿ ಕಾಣಲು 
ತುಳಸಿ ಬೀಜ ಸಾಕಷ್ಟು ಆಂಟಿ-ಆಕ್ಸಿಡೆಂಟ್ ಹೊಂದಿದೆ, ಇದು ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತೆ . ಈ ಫ್ರೀ ರಾಡಿಕಲ್ ಗಳ ಹಾನಿಯಿಂದಾಗಿ, ವೃದ್ಧಾಪ್ಯವು ವಯಸ್ಸಿಗೆ ಮೊದಲೇ ಬರಲು ಪ್ರಾರಂಭಿಸುತ್ತೆ.  ಆದರೆ ನೀವು ಆಹಾರದಲ್ಲಿ ತುಳಸಿ ಬೀಜ ಬಳಸಿದರೆ, ದೀರ್ಘಕಾಲದವರೆಗೆ ಯಂಗ್ ಆಗಿ ಕಾಣಬಹುದು 
 

ಹೊಟ್ಟೆ(Stomach) ಸಮಸ್ಯೆ ನಿವಾರಿಸಲು
ತುಳಸಿ ಬೀಜ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತೆ. ಆಗಾಗ್ಗೆ ಅನೇಕ ಜನರು ಮಲಬದ್ಧತೆ, ಅಸಿಡಿಟಿ, ಅಜೀರ್ಣದಂತಹ ಹೊಟ್ಟೆಯ ಸಮಸ್ಯೆ ಹೊಂದುತ್ತಾರೆ. ತುಳಸಿ ಬೀಜ ಈ ಎಲ್ಲಾ ರೋಗಕ್ಕೆ ತುಂಬಾ ಪ್ರಯೋಜನಕಾರಿ.

ತುಳಸಿ ಬೀಜದಲ್ಲಿರುವ(Tulasi seeds) ನಾರಿನಂಶ ಕರುಳನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತೆ. ನೀವು ತುಳಸಿ ಬೀಜವನ್ನು ನೀರಿನಲ್ಲಿ ಹಾಕಿಡಿ. ನೀರಿನಲ್ಲಿ ಹಾಕಿದಾಗ, ಬೀಜಗಳು ಉಬ್ಬುತ್ತವೆ ಮತ್ತು ಮೇಲೆ ಜಿಲೆಟಿನ್ ಪದರ ರೂಪಿಸುತ್ತೆ. ಇದನ್ನು ನೀರಿನೊಂದಿಗೆ ಕುಡಿಯುವುದರಿಂದ ಹೊಟ್ಟೆ ಸಮಸ್ಯೆ ಇರೋದಿಲ್ಲ.  

ತೂಕ ಇಳಿಸಿಕೊಳ್ಳಲು (Weight loss)
ನೀವು ಒಬೆಸಿಟಿಯಿಂದ ಬಳಲುತ್ತಿದ್ದರೆ, ತುಳಸಿ ಬೀಜ ತಿನ್ನುವುದರಿಂದ ತೂಕ ಸಹ ಕಡಿಮೆ ಮಾಡಬಹುದು. ತುಳಸಿ ಬೀಜ ತುಂಬಾ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧವಾಗಿವೆ. ಇದು ನಿಮಗೆ ದೀರ್ಘಕಾಲದವರೆಗೆ ಹಸಿವಾಗಲು ಬಿಡೋದಿಲ್ಲ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ. ಇದಲ್ಲದೆ, ತುಳಸಿ ಬೀಜವನ್ನು ಗ್ರೀನ್ ಟೀ ತಯಾರಿಸಲು ಸಹ ಬಳಸಬಹುದು. ಇದು ತೂಕ ಕಡಿಮೆ ಮಾಡುತ್ತೆ .

Latest Videos

click me!